Advertisement
ನಗರದ ಪ್ರವಾಸಿ ಗೃಹದಲ್ಲಿ ಮಂಗಳವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಅವರು ಈ ಅಕ್ರಮದ ಕುರಿತು ಮಾಹಿತಿ ನೀಡಿದರು. ಸರ್ಕಾರ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ರೈತರ ಅನುಕೂಲಕ್ಕಾಗಿ ಏನೆಲ್ಲ ಸೌಲಭ್ಯಗಳನ್ನು ನೀಡುತ್ತಿದೆ. ಆದರೆ, ವಾಸ್ತವವಾಗಿ ಅದರ ಲಾಭ ಆ ಸಮುದಾಯದವರಿಗೆ ದಕ್ಕದೇ ಅಧಿಕಾರಿಗಳೇ ರೈತರ ಹೆಸರಲ್ಲಿ ಲೂಟಿ ಹೊಡೆಯುತ್ತಾರೆ ಎಂಬುದಕ್ಕೆ ತಾಲೂಕಿನಲ್ಲಿ 2015-16ನೇ ಸಾಲಿನಲ್ಲಿ ನೆರಳುಪರದೆ ಯೋಜನೆ ಅನುಷ್ಠಾನವೊಂದೇ ಸಾಕ್ಷಿ ಸಾಕು ಎಂದರು.
Related Articles
Advertisement
ಸರ್ಕಾರ ಪ್ರತಿವರ್ಷ ರೈತರಿಗಾಗಿ ಕೋಟ್ಯಂತರ ರೂ. ಖರ್ಚು ಮಾಡುತ್ತಿದ್ದರೂ ಲಂಚಬಡುಕ ಅಧಿಕಾರಿಗಳು ಲಕ್ಷಾಂತರ ರೂ. ಸಂಬಳ ಪಡೆದು ಜತೆಗೆ ರೈತರ ಹೆಸರಲ್ಲಿಯೂ ಲೂಟಿ ಹೊಡೆಯುತ್ತಿದ್ದಾರೆ. ಇಂಥ ಸಾವಿರಾರು ಯೋಜನೆಗಳು ಇದ್ದರೂ ಹಿಂದುಳಿದವರನ್ನು ಮೇಲೆತ್ತಲು ಸಾಧ್ಯವಾಗುವುದಿಲ್ಲ. ಸರ್ಕಾರಗಳು ಶಾಶ್ವತ ಯೋಜನೆಗಳನ್ನು ರೂಪಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು. ಇಲ್ಲದಿದ್ದರೆ ಇದೇ ರೀತಿ ಸರ್ಕಾರದ ಹಣ ದುರುಪಯೋಗವಾಗುತ್ತಲೇ ಇರುತ್ತದೆ ಎಂದರು.
ಸರ್ಕಾರ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರ ಅಭಿವೃದ್ಧಿಗಾಗಿ ಎಷ್ಟು ಖರ್ಚು ಮಾಡಿದೆ. ಅದರ ಪ್ರಯೋಜನ ಪಡೆದು ಎಷ್ಟು ಜನ ಬದುಕು ಕಟ್ಟಿಕೊಂಡಿದ್ದಾರೆ. ಎಷ್ಟು ಹಣ ದುರುಪಯೋಗವಾಗಿದೆ ಎಂಬುದನ್ನು ಸರ್ಕಾರ ತನಿಖೆ ಮಾಡಬೇಕು ಎಂದು ಶಿವಾನಂದ ಗುರುಮಠ ಆಗ್ರಹಿಸಿದರು.
ಸಂಘಟನೆಯ ಉಪಾಧ್ಯಕ್ಷ ಶಿವಯೋಗಿ ಬೆನ್ನೂರು ಮಾತನಾಡಿ, ಪಶು ಇಲಾಖೆಯಿಂದ ಶೇ.50ರ ಸಹಾಯಧನದಲ್ಲಿ 14,500ರೂ. ಕೊಟ್ಟು ಮೇವು ಕತ್ತರಿಸುವ ಯಂತ್ರ ಸ್ವತಃ ಪಡೆದುಕೊಂಡಿದ್ದೆ. ಆ ಯಂತ್ರ ಕೇವಲ ಅರ್ಧ ದಿನ ಮಾತ್ರ ಕೆಲಸ ಸರಿಯಿತ್ತು. ಬಳಿಕ ಕೆಟ್ಟಿದೆ. ಇದು ಸರ್ಕಾರದಿಂದ ಪೂರೈಸುವ ಸಾಮಗ್ರಿಗಳ ಕಳಪೆ ಗುಣಮಟ್ಟಕ್ಕೆ ತಾಜಾ ಉದಾಹರಣೆ ಎಂದರು. ರೈತ ಪ್ರಮುಖರಾದ ಬಿ.ಎಂ. ಕುಲಕರ್ಣಿ, ರಮೇಶ ಶಂಕ್ರಪ್ಪನವರ, ಎಸ್.ಎಂ. ಚಿಗೌಡ್ರ ಸುದ್ದಿಗೋಷ್ಠಿಯಲ್ಲಿದ್ದರು.
ಎಸಿಬಿಗೆ ದೂರುಪಾಲಿಹೌಸ್ ನಿರ್ಮಾಣದ ಅಕ್ರಮ ಕುರಿತು ಮಾಹಿತಿ ಹಕ್ಕು ಕಾಯಿದೆಯಡಿ ಮಾಹಿತಿ ಪಡೆದುಕೊಂಡಿದ್ದು ಈ ಕುರಿತು ಭ್ರಷ್ಟಾಚಾರ ನಿಗ್ರಹದಳಕ್ಕೆ ದೂರು ನೀಡಿ, ಸಮಗ್ರ ತನಿಖೆ ನಡೆಸಲು ಒತ್ತಾಯಿಸಲಾಗುವುದು. ಒಂದು ವೇಳೆ ತನಿಖಾ ಸಂಸ್ಥೆಯಿಂದಲೂ ಅಧಿಕಾರಿಗಳ ಪರ ವರದಿ ಬಂದರೆ ನ್ಯಾಯಾಲಯದ ಮೆಟ್ಟಿಲು ಸಹ ಏರಲಾಗುವುದು. ಇದರಲ್ಲಿ ಯಾವುದೇ ರಾಜೀ ಇಲ್ಲ ಎಂದು ಶಿವಾನಂದ ಗುರುಮಠ ಸ್ಪಷ್ಟಪಡಿಸಿದರು.