Advertisement

ಹಣವೀಳ್ಯ; ವೀಳ್ಯದೆಲೆ,ಬಾಳೆಯಿಂದ ಲಕ್ಷಗಟ್ಟಲೆ ಲಾಭ

06:03 PM Dec 01, 2019 | Sriram |

ಗೌರಿಬಿದನೂರು ತಾಲ್ಲೂಕಿನ, ತೊಂಡೇಭಾವಿ ಹೋಬಳಿ ಅಗ್ರಹಾರ ಹೊಸಳ್ಳಿಯ ರೈತರೊಬ್ಬರು ಅಡಕೆ ತೋಟದಲ್ಲಿ ಅಂತರ ಬೆಳೆಯಾಗಿ ವೀಳ್ಯದೆಲೆ ಹಾಗೂ ಬಾಳೆ ಬೆಳೆದು, ಲಕ್ಷಗಟ್ಟಲೆ ಲಾಭ ಗಳಿಸುತ್ತಿರುವ ಸಾಹಸಗಾಥೆ ಇಲ್ಲಿದೆ.

Advertisement

ಕಳೆದ 30 ವರ್ಷಗಳಿಂದ ಸಾವಯವ ಕೃಷಿಯಲ್ಲಿ ಪಳಗಿರುವ ಅಗ್ರಹಾರ ಸುರೇಶ್‌, ತಮ್ಮ 1 ಎಕರೆ ಅಡಕೆ ತೋಟದಲ್ಲಿ ಅಂತರ ಬೆಳೆಯಾಗಿ ವೀಳ್ಯದೆಲೆ ಹಾಗೂ ಬಾಳೆಗಿಡಗಳನ್ನು ನಾಟಿ ಮಾಡಿ ಉತ್ತಮ ಇಳುವರಿ ಪಡೆಯುತ್ತಿದ್ದಾರೆ. ಉಳಿದ 2 ಎಕರೆಯಲ್ಲಿ ವಿವಿಧ ರೀತಿಯ ಸಾವಯವ ತರಕಾರಿ, ತೆಂಗು, ಹಲಸು, ಬಾಳೆ ಬೆಳೆಯುತ್ತಾರೆ. 25 ವರ್ಷಗಳ ಹಿಂದೆಯೇ ಅಡಕೆ ಗಿಡಗಳನ್ನು ಪೂರ್ವ- ಪಶ್ಚಿಮ, ಉತ್ತರ- ದಕ್ಷಿಣಕ್ಕೆ 9 ಅಡಿ ಅಂತರದಲ್ಲಿ ಹಾಕಿದ್ದು, ಸಾವಯವ ಗೊಬ್ಬರ ಬಳಸಿ ಇನ್ನಷ್ಟು ಸೊಂಪಾಗಿ ಬೆಳೆ ತೆಗೆದಿ¨ªಾರೆ. ಕಳೆದ 25 ವರ್ಷಗಳಿಂದ ಬಾಳೆತೋಟ ಹಾಗೂ ಕಳೆದ 3 ವರ್ಷದಿಂದ ವೀಳ್ಯದೆಲೆ ಬೆಳೆಯುತ್ತಿ¨ªಾರೆ. 30 ದಿನಗಳಿಗೊಮ್ಮೆ ಕೊಯ್ಲಿಗೆ ಬರುವ 15 ಪೆಂಡಿ ವೀಳ್ಯದೆಲೆ, ತಿಂಗಳೊಂದಕ್ಕೆ ಕನಿಷ್ಠ ಒಂದು ಪೆಂಡಿಗೆ 4 ಸಾವಿರದಿಂದ 10 ಸಾವಿರದಂತೆ 15 ಪೆಂಡಿಗೆ 60 ಸಾವಿರದಿಂದ 1.5 ಲಕ್ಷದವರೆಗೂ ಲಾಭ ಕೈ ಹಿಡಿಯುತ್ತಿದೆ ಎನ್ನುತ್ತಾರೆ.

ಒಂದೇ ಖರ್ಚು, ಬೆಳೆ ಮೂರು
ಅಡಕೆ ಗಿಡಕ್ಕೆ ವರ್ಷಕ್ಕೊಮ್ಮೆ ಕೊಟ್ಟಿಗೆ ಗೊಬ್ಬರ, ಬೇವಿನ ಹಿಂಡಿ, ಜೀವಾಮೃತ, ಗಿಡಗಳ ಬುಡಕ್ಕೆ ಟ್ರೈಕೋಡರ್ಮಾ ಜೈವಿಕ ಗೊಬ್ಬರ, ಜೈವಿಕ ಕೀಟನಾಶಕಗಳಾದ ಸುಡೋಮನಾಸ್‌ ಹಾಕುವ ಮೂಲಕ ಬೇರುಗಳಿಗೆ ಕೊಳೆ ರೋಗ ತಾಗದಂತೆ ಎಚ್ಚರಿಕೆ ವಹಿಸಲಾಗುತ್ತದೆ. ವೀಳ್ಯದೆಲೆ ಕೊಯ್ಲು ಮಾಡುವುದು, ಬಳ್ಳಿ ಕಟ್ಟುವುದು ಮತ್ತು ಬಳ್ಳಿ ಇಳಿಸುವ ಒಂದು ಪೆಂಡೆ ಎಲೆ ಕೊಯ್ಯವುದು ಸೇರಿದಂತೆ ಒಂದು ದಿನಕ್ಕೆ ಕೂಲಿ 350 ರೂ. ನೀಡಬೇಕು ಎನ್ನುವ ಅವರು, ಎಲೆ ಕೊಯ್ಯುವಾಗ ಮಾತ್ರ ಇಬ್ಬರು ಕೆಲಸಗಾರರು ಬೇಕು, ಉಳಿದಂತೆ ಒಬ್ಬ ಕೆಲಸಗಾರ ಸಾಕು ಎನ್ನುತ್ತಾರೆ.

ನಳನಳಿಸುವ ತೋಟ
ಪ್ರತಿ ಅಡಕೆ ಮರಕ್ಕೆ ಹಬ್ಬಿಸಿರುವ ವೀಳ್ಯದೆಲೆ ಬಳ್ಳಿ, ಲಾಭದ ಹೊಳೆ ಹರಿಸುತ್ತಿದೆ ಎನ್ನಬಹುದು. ಅಡಕೆ ಬೆಳೆಗೆ ಮಾಡಿದ ಖರ್ಚಿನಲ್ಲಿಯೇ ವೀಳ್ಯದೆಲೆ ಬೆಳೆ ಹಾಗೂ ಬಾಳೆ ಬೆಲೆಯನ್ನು ಬೆಳೆಯಲಾಗುತ್ತಿದೆ. ಸದೃಢವಾಗಿ ಬೆಳೆದು ನಿಂತ ಅಡಕೆ ಮರಗಳು, ಬಲವಾದ ಅಡಕೆ ಗೊನೆ ಹೊತ್ತು ಬೀಗುತ್ತಿದ್ದರೆ, ಅಡಕೆ ಮರಕ್ಕೆ ಹಸಿರು ಹೊದಿಸಿದಂತೆ, ವೀಳ್ಯದೆಲೆ ಬಳ್ಳಿ ಹಬ್ಬಿದೆ. 15- 30 ಅಡಿ ಎತ್ತರ ಅಡಕೆಗೆ ಹಬ್ಬಿಸಿರುವ ವೀಳ್ಯದೆಲೆ ಬಳ್ಳಿ, ಅಂಗೈ ಅಗಲದ ಹಸಿರು ಎಲೆಗಳಿಂದ ಕಂಗೊಳಿಸುತ್ತಿದೆ. ಎಲೆ ಕೊಯ್ಲಿಗೆ ಬಂದಾಗಲಂತೂ ಬಳ್ಳಿಯಿಂದ ಬಳ್ಳಿಗೆ ಕೂಡಿಕೊಳ್ಳುವಂತೆ ಹಬ್ಬಿ, ಕಣ್ಣಿಗೆ ಹಬ್ಬವುಂಟು ಮಾಡುವಂತಿರುತ್ತದೆ.

ವೈವಿಧ್ಯಮಯವಾಗಿ ಬಾಳೆ ಬೆಳೆ
ಬಾಳೆ ಬೆಳೆಯನ್ನು ವೈವಿಧ್ಯಮಯವಾಗಿ ಬೆಳೆಯುತ್ತಿದ್ದು 220 ಏಲಕ್ಕಿಬಾಳೆ, 80 ಕೆಂಪು ನೇಂದ್ರಬಾಳೆ, ಹಾಗೂ 80 ರಸಬಾಳೆಯನ್ನು ಪ್ರಾಯೋಗಿಕವಾಗಿ ಹಾಕಿದ್ದಾರೆ. ಸಾವಯವ ತರಕಾರಿ ವೀಳ್ಯದೆಲೆ, ಬಾಳೆಹಣ್ಣುಗಳು, ತೆಂಗಿನಕಾಯಿ ಮುಂತಾದವುಗಳನ್ನು ಕಳೆದ 2 ವರ್ಷದಿಂದ ಬೆಂಗಳೂರಿನಲ್ಲಿ ನೆಲೆಯಾಗಿರುವ ತಮಿಳುನಾಡು ಮೂಲದ ಕಮ್ಯೂನಿಟಿ ಗ್ರೂಫ್ ಆಫ್ ಫಾರ್ಮಿಂಗ್‌ ಸಂಸ್ಥೆಯ ಮೂಲಕ ಮಾರಾಟ ಮಾಡಲಾಗುತ್ತದೆ ಎಂದು ಸುರೇಶ್‌ ಹೇಳುತ್ತಾರೆ.

Advertisement

ತಿಂಗಳ ಆದಾಯದ ಲೆಕ್ಕಾಚಾರ
ವೀಳ್ಯದೆಲೆ 25ರಿಂದ 30 ದಿನಕ್ಕೆ ಒಂದು ಬಾರಿ ಕೊಯ್ಲಿಗೆ ಬರುತ್ತದೆ. ಚಳಿಗಾಲದಲ್ಲಿ, ಬೇಸಗೆಯ ದಿನಗಳಲ್ಲೂ ಇವರ ತೋಟದಲ್ಲಿ ಪ್ರತಿ ಕೊಯ್ಲಿಗೆ 15 ಪೆಂಡೆ ವೀಳ್ಯದೆಲೆ ಸಿಗುತ್ತದೆ. ಮಳೆಗಾಲದಲ್ಲಂತೂ ಪ್ರತಿ ಕೊಯ್ಲಿಗೆ 20ರಿಂದ 25 ಪೆಂಡೆ ದೊರೆಯುತ್ತದೆ. ಚಳಿಗಾಲ ಮತ್ತು ಬೇಸಗೆಯಲ್ಲಿ ಭಾರಿ ಬೇಡಿಕೆಯಿಂದಾಗಿ ಪೆಂಡೆಯೊಂದಕ್ಕೆ 5,000 ದಿಂದ 10,000ದ ತನಕ ಬೆಲೆ ದೊರೆಯುತ್ತಿದ್ದು, ವರ್ಷದಲ್ಲಿ ಮದುವೆ ಸಮಯದಲ್ಲಿ ಕಾರ್ತೀಕ ಮಾಸ, ಶ್ರಾವಣ ಹಾಗೂ ಜೇಷ್ಟ ಮಾಸದಲ್ಲಿ ಪ್ರತಿ ಕೊಯ್ಲಿಗೆ ಸರಾಸರಿ ಕನಿಷ್ಠ 1 ಲಕ್ಷ ರೂ. ಆದಾಯ ಬರುತ್ತದೆ. ಮಳೆಗಾಲದ ಸಮಯದಲ್ಲಿ ಕಡಿಮೆ ಎಂದರೂ 4ಸಾವಿರದಿಂದ 10 ಸಾವಿರ ರೂ. ಆದಾಯ ಬರುತ್ತದೆ. ಪ್ರತಿವರ್ಷ ಅಡಕೆ ತೋಟದಿಂದ 5 ಲಕ್ಷ ತನಕದವರೆಗೂ ಆದಾಯವಿದೆ. ವೀಳ್ಯದೆಲೆಯಿಂದಲೇ ಪ್ರತಿವರ್ಷ, ಖರ್ಚು ತೆಗೆದು ಕಡಿಮೆ ಎಂದರೂ 4- 5 ಲಕ್ಷ ರೂ. ಸಿಗುತ್ತದೆ ಎಂದು ಆದಾಯದ ಲೆಕ್ಕ ನೀಡುತ್ತಾರೆ. ಬಾಳೆಯಲ್ಲಿ ಕನಿಷ್ಟ ಒಂದು ವರ್ಷಕ್ಕೆ ಖರ್ಚು ತೆಗೆದು 1 ಲಕ್ಷ ಆದಾಯ ಬರುತ್ತದೆ. ಒಟ್ಟಾರೆ 10- 12 ಲಕ್ಷ ಆದಾಯವಿದೆ.

 - ಗಣೇಶ್‌

Advertisement

Udayavani is now on Telegram. Click here to join our channel and stay updated with the latest news.

Next