Advertisement

ವಿತ್ತೀಯ ಕೊರತೆ ಮುಂದಿನ ವರ್ಷ ಚೇತರಿಕೆ: ಜೇಟ್ಲಿ

08:15 AM Feb 11, 2018 | |

ಹೊಸದಿಲ್ಲಿ: ವಿತ್ತೀಯ ಕೊರತೆ ಮುಂದಿನ ವಿತ್ತ ವರ್ಷ ಕಡಿಮೆಯಾಗಲಿದ್ದು, ಕೊರತೆ ನೀಗುವ ಗುರಿಯನ್ನು ತಲುಪುವಲ್ಲಿ ಸದ್ಯದ ಸನ್ನಿವೇಶದಲ್ಲಿ ಯಾವುದೇ ಅಡ್ಡಿಯಿಲ್ಲ ಎಂದು ಹಣಕಾಸು ಸಚಿವ ಅರುಣ್‌ ಜೇಟ್ಲಿ ಹೇಳಿದ್ದಾರೆ. 

Advertisement

ಬಜೆಟ್‌ ನಂತರದ ಆರ್‌ಬಿಐ ಮಂಡಳಿಯೊಂದಿಗೆ ನಡೆಸಿದ ಸಭೆಯ ಬಳಿಕ ಮಾತನಾಡಿದ ಅವರು, ಪ್ರಸ್ತುತ ಕಚ್ಚಾ ತೈಲ ಬೆಲೆ ಕುಸಿಯುತ್ತಿರುವುದನ್ನೇ ಆಧಾರವಾಗಿರಿಸಿ ಕೊಂಡು ವಿತ್ತೀಯ ಕೊರತೆ ಸಮಸ್ಯೆಯ ವಿಪರೀತವಾಗಿದೆ ಎಂದು ಹೇಳಲಾಗದು. ಅಲ್ಲದೆ ಕೆಲವು ದಿನಗಳ ಹಿಂದೆ ರೆಪೋ ದರವನ್ನು ಬದಲಿಸದೇ ಇರಲು ಆರ್‌ಬಿಐ ತೆಗೆದುಕೊಂಡ ನಿರ್ಧಾರ ಸಮತೋಲನದ್ದಾಗಿದೆ ಎಂದರು.

ಆರ್ಥಿಕ ನೀತಿ ಮುಂದಾಲೋಚನಾ ಕ್ರಮ: ಆರ್‌ಬಿಐ ಹೊರಡಿಸುವ ದ್ವೆ„ಮಾಸಿಕ ವಿತ್ತ ನೀತಿಯು ಮುಂದಾ ಲೋಚನಾ ಕ್ರಮವಾಗಿದೆ. ತಕ್ಷಣದ ಹಣದುಬ್ಬರವನ್ನು ಗಮನದಲ್ಲಿಟ್ಟುಕೊಂಡು ಯಾವುದೇ ಹಠಾತ್‌ ನಿರ್ಧಾರ ಗಳನ್ನು ಕೈಗೊಳ್ಳಲಾಗದು ಎಂದು ಆರ್‌ಬಿಐ ಗವರ್ನರ್‌ ಊರ್ಜಿತ್‌ ಪಟೇಲ್‌ ಹೇಳಿದ್ದಾರೆ. 

ಆರ್ಥಿಕ ಕುಸಿತ: ದೇಶದ ಆರ್ಥಿಕ ಬೆಳವಣಿಗೆ ಯುಪಿಎ ಸರಕಾರದ ಅವಧಿಗಿಂತ  ಕಡಿಮೆ ಇದೆ ಎಂದುಎಂದು ಮಾಜಿ ಸಚಿವ ಚಿದಂಬರಂ ಕಿಡಿ ಕಾರಿದ್ದಾರೆ. ಪ್ರಸ್ತುತ ಎನ್‌ಡಿಎ 4 ವರ್ಷಗಳ ಸರಾಸರಿ ಶೇ. 7.3 ಇದೆ. ಹೂಡಿಕೆ, ಉಳಿತಾಯ, ಸಾಲ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಇಳಿಕೆ ಕಂಡಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next