Advertisement

ಸೋಮವಾರದ ರಾಶಿ ಫಲ : ಇಲ್ಲಿದೆ ನೋಡಿ ನಿಮ್ಮ ಗ್ರಹಬಲ

08:00 AM Dec 13, 2021 | Team Udayavani |

ಮೇಷ: ನೂತನ ಮಿತ್ರರ ಸಮಾಗಮ. ವೈವಾಹಿಕ ವಿಚಾರದಲ್ಲಿ ಪ್ರಗತಿ. ಧಾತು, ಆಹಾರ ಉದ್ಯಮದವರಿಗೆ ಅಭಿವೃದ್ಧಿ ಅವಕಾಶ. ಹಿರಿಯರ, ಮೇಲಧಿಕಾರಿಗಳ ಸಹಾಯ ಒದಗಿ ಬರುವುದು. ಆರೋಗ್ಯ ಉತ್ತಮ. ಉತ್ತಮ ಧನಾರ್ಜನೆ.

Advertisement

ವೃಷಭ: ವಸ್ತ್ರ, ಆಭರಣ, ಆಹಾರ, ಹೈನುಗಾರಿಕೆ ವ್ಯವಹಾರಸ್ಥರಿಗೆ ಅನುಕೂಲಕರ ಪರಿಸ್ಥಿತಿ. ಸಹೋದರಾದಿ ವರ್ಗದವರಿಗೆ ಅಭಿವೃದ್ಧಿ. ಆರೋಗ್ಯದಲ್ಲಿ ಚೇತರಿಕೆ. ವಿದ್ಯಾರ್ಥಿಗಳಿಗೆ ಶ್ರಮಕ್ಕೆ ತಕ್ಕ ಪ್ರತಿಫ‌ಲ.

ಮಿಥುನ: ಉತ್ತಮ ಧನಾರ್ಜನೆ. ನೀರಿನಿಂದ ಉತ್ಪತ್ತಿ ಪದಾರ್ಥಗಳಿಂದ ಹೆಚ್ಚಿನ ಲಾಭ. ಉತ್ತಮ ವಾಕ್‌ ಚತುರತೆ. ಕುಟುಂಬಿಕರ ಪ್ರೋತ್ಸಾಹ. ಪಾಲುದಾರಿಕಾ ವ್ಯವಹಾರ  ದಲ್ಲಿ ಸಾಮರಸ್ಯ ಕಾಪಾಡುವುದರಿಂದ ಅಭಿವೃದ್ಧಿ.

ಕರ್ಕ: ಉದ್ಯೋಗ ವ್ಯವಹಾರಗಳಲ್ಲಿ ಸಫ‌ಲತೆ ಗಳಿಸಲು ಹೆಚ್ಚು ತಾಳ್ಮೆ ಪರಿಶ್ರಮ ಅಗತ್ಯ. ಆರೋಗ್ಯ ಗಮನಿಸಿ. ಹಣಕಾಸಿನ ವಿಚಾರದಲ್ಲಿ ಜಾಗ್ರತೆಯ ನಡೆ ಯಿಂದ ನೆಮ್ಮದಿ ಲಭಿಸೀತು. ಆಸ್ತಿ ವಿಚಾರದಲ್ಲಿ ತಲ್ಲೀನತೆ.

ಸಿಂಹ: ಆರೋಗ್ಯ ಗಮನಿಸಿ. ದೀರ್ಘ‌ ಪ್ರಯಾಣದಲ್ಲಿ ಸರಿಯಾದ ನಿಯಮ ಪಾಲಿಸಿ. ಉದ್ಯೋಗ ವ್ಯವ ಹಾರ  ದಲ್ಲಿ ಅತೀ ಉದಾರತೆಯಿಂದ ತೊಂದರೆ ಸಂಭವ. ಹಣಕಾಸಿನ ಬಗ್ಗೆ ಪಾರದರ್ಶಕತೆ ಇರಲಿ. ವಿಶ್ರಾಂತಿಗೆ ಗಮನಹರಿಸಿ.

Advertisement

ಕನ್ಯಾ: ಸ್ವಜನರಲ್ಲಿ ವಿಶ್ವಾಸ ಪ್ರೀತಿ ಆತ್ಮೀಯತೆ ತೋರುವುದರಿಂದ ಗೌರವಾದಿ ವೃದ್ಧಿ. ಜಲೋತ್ಪನ್ನ ವಸ್ತುಗಳ ಕ್ರಯವಿಕ್ರಯದಲ್ಲಿ ಹೆಚ್ಚಿದ ವರಮಾನ. ಸಾಂಸಾರಿಕ ಸುಖ ವೃದ್ಧಿ. ಮಕ್ಕಳಿಂದ ಹೆಚ್ಚಿದ ಸಂತೋಷ.

ತುಲಾ: ಉದ್ಯೋಗ ವ್ಯವಹಾರದಲ್ಲಿ ಗಣನೀಯ ವೃದ್ಧಿ. ಕೀರ್ತಿ ಸಂಪಾದನೆ. ನಿರೀಕ್ಷೆಗೂ ಮೀರಿದ ಧನಾರ್ಜನೆ. ದೂರ ಪ್ರಯಾಣ ಸಂಭವ. ಆರೋಗ್ಯ ವೃದ್ಧಿ. ಆಸ್ತಿ ವಿಚಾರಗಳಲ್ಲಿ ಪ್ರಗತಿ. ಗುರುಹಿರಿಯರಿಂದ ಮನಃಸಂತೋಷ.

ವೃಶ್ಚಿಕ: ಆರೋಗ್ಯ ಗಮನಿಸಿ. ಉದ್ಯೋಗದಲ್ಲಿ ಪ್ರಗತಿ. ಪಾಲುದಾರಿಕಾ ವ್ಯವಹಾರದವರು ಚರ್ಚೆಗೆ ಅವಕಾಶ ನೀಡದೇ ಇದ್ದರೆ ಅಭಿವೃದ್ಧಿ ಅವಕಾಶಗಳು ದೊರಕುವುದು. ಎಲ್ಲಾ ವಿಚಾರದಲ್ಲೂ ಜಾಗ್ರತೆಯ ನಡೆ ಅಗತ್ಯ.

ಧನು: ಪರಿಶ್ರಮ, ಜವಾಬ್ದಾರಿಯಿಂದ ಕೂಡಿದ ಕಾರ್ಯವೈಖರಿ. ನಿರೀಕ್ಷಿತ ಗೌರವ ಆದರಾದಿ ಪ್ರಾಪ್ತಿ. ನೂತನ ಮಿತ್ರರ ಸಮಾಗಮ. ದಾಂಪತ್ಯ ಸುಖ ವೃದ್ಧಿ. ಅಧ್ಯಯನ ಪ್ರವೃತ್ತರಿಗೆ ಸರ್ವ ವಿಧದ ಸೌಲಭ್ಯ ಲಭ್ಯ. ಆರೋಗ್ಯ ಉತ್ತಮ.

ಮಕರ: ಆಸ್ತಿ ವಿಚಾರದಲ್ಲಿ ಬದಲಾವಣೆಗಳು ತೋರಿಬಂದಾವು. ಉದ್ಯೋಗ ವ್ಯವಹಾರಗಳಲ್ಲಿ ಗಣ್ಯರ, ಮೇಲಧಿಕಾರಿಗಳ ಸಹಾಯ ಸಹಕಾರದಿಂದ ಪ್ರಗತಿ. ದೀರ್ಘ‌ ಹಾಗೂ ಸಣ್ಣ ಪ್ರಯಾಣ ಸಂಭವ. ಆರ್ಥಿಕ ಸ್ಥಿತಿ ವೃದ್ಧಿದಾಯಕ.

ಕುಂಭ: ಆರೋಗ್ಯ ಉತ್ತಮ. ದೇವತಾನುಗ್ರಹದಿಂದ ಕೂಡಿದ ದಿನ. ಎಲ್ಲಾ ಕೆಲಸ ಕಾರ್ಯಗಳಲ್ಲಿ ಸಫ‌ಲತೆ, ಶ್ರೇಯಸ್ಸು ತೋರಿಬರುವುವು. ದೂರದ ವ್ಯವಹಾರದಿಂದ ಧನ ವೃದ್ಧಿ, ಸ್ಥಾನ ಲಾಭ. ಗೃಹದಲ್ಲಿ ಸಂತಸದ ವಾತಾವರಣ.

ಮೀನ: ಹೆಚ್ಚಿದ ಜವಾಬ್ದಾರಿ. ದೇಹಕ್ಕೆ ಆಯಾಸ ಆಗದಂತೆ ಕರ್ತವ್ಯ ನಿರ್ವಹಿಸಿ ಆರೋಗ್ಯ ಗಮನಿಸಿಕೊಳ್ಳಿ. ಮಾತಿನಲ್ಲಿ ತಾಳ್ಮೆ, ಸಹನೆ ಅಗತ್ಯ. ಆಸ್ತಿ ವಿಚಾರದಲ್ಲಿ ಪಾರದರ್ಶಕತೆಗೆ ಆದ್ಯತೆ ನೀಡಿ. ದಂಪತಿಗಳಲ್ಲಿ ಅನ್ಯೋನ್ಯತೆ.

Advertisement

Udayavani is now on Telegram. Click here to join our channel and stay updated with the latest news.

Next