Advertisement

ಸೋಮವಾರದ ರಾಶಿ ಫಲ : ಇಲ್ಲಿದೆ ನೋಡಿ ನಿಮ್ಮ ಗ್ರಹಬಲ

07:53 AM Nov 29, 2021 | Team Udayavani |

ಮೇಷ: ವಿದ್ಯಾರ್ಥಿಗಳಿಗೆ, ಧಾರ್ಮಿಕ ಮುಖಂಡರಿಗೆ, ರಾಜಕೀಯ ಕ್ಷೇತ್ರದವರಿಗೆ ಆಹಾರೋದ್ಯಮ, ಧಾತೂದ್ರವ್ಯ ಉದ್ಯಮದವರಿಗೆ ಉತ್ತಮ ಶುಭ ಫ‌ಲ. ದೀರ್ಘ‌ ಪ್ರಯಾಣದಿಂದ ನಿರೀಕ್ಷಿತ ಲಾಭ. ದಾಂಪತ್ಯ ಸುಖ, ವೈವಾಹಿಕ ವಿಚಾರದಲ್ಲಿ ಪ್ರಗತಿ,

Advertisement

ವೃಷಭ: ಭೂ ಗೃಹ ವಾಹನಾದಿ ವಿಚಾರದಲ್ಲಿ ಪ್ರಗತಿ. ಮಿತ್ರರಿಂದಲೂ ಮಾತೃಸಮಾನರಿಂದಲೂ ಪ್ರೋತ್ಸಾಹ. ಪರರಿಗೋಸ್ಕರ ಪ್ರಯಾಣ. ವಸ್ತ್ರೋದ್ಯಮ ಆಭರಣೋದ್ಯಮದವರಿಗೆ ಶುಭಫ‌ಲ. ಸಮಾಜದಲ್ಲಿ ನಿರೀಕ್ಷಿತ ಸ್ಥಾನ ಸುಖ. ಆರೋಗ್ಯ ಸ್ಥಿರ.

ಮಿಥುನ: ಸಜ್ಜನರಲ್ಲಿ ಸ್ತ್ರೀಯರಲ್ಲಿ ತಾಳ್ಮೆಯಿಂದ ವ್ಯವಹರಿಸಿ. ಜಲೋತ್ಪನ್ನ ವಸ್ತುಗಳ ಉದ್ಯಮಿಗಳಿಗೆ ಅಭಿವೃದ್ಧಿ. ವಿದೇಶ ವಿಚಾರದ ವ್ಯವಹಾರದಲ್ಲಿ ಅನುಕೂಲ. ನಿರೀಕ್ಷಿತ ಧನಾಗಮ. ಉದರ ಸಂಬಂಧಿ ಆರೋಗ್ಯದ ಕಡೆ ಗಮನ.

ಕರ್ಕ: ನೂತನ ಮಿತ್ರರ ಆಗಮನ. ಪ್ರಯಾಣ ಪಾಲುಗಾರಿಕಾ ವ್ಯವಹಾರದಲ್ಲಿ ಶ್ರೇಯ. ಜಲೋತ್ಪನ್ನ ವಸ್ತುಗಳಿಂದ ಲಾಭ. ಆರೋಗ್ಯದಲ್ಲಿ ಸುಧಾರಣೆ. ದಂಪತಿಗಳಲ್ಲಿ ಅನುರಾಗ ವೃದ್ಧಿ.

ಸಿಂಹ: ವಿದ್ಯಾರ್ಥಿಗಳಿಗೆ ಶ್ರಮದಿಂದ ನಿರೀಕ್ಷಿತ ಸ್ಥಾನ ಸುಖ. ದಂಪತಿಗಳು ಆರೋಗ್ಯದ ಬಗ್ಗೆ ಗಮನಹರಿಸಿ. ಸೌಂದರ್ಯವರ್ಧಕ ವಸ್ತುಗಳ ವ್ಯವಹಾರಸ್ಥರಿಗೆ ಸಮುದ್ರೋತ್ಪನ್ನ ವಸ್ತುಗಳ ಕ್ರಯ ವಿಕ್ರಯರಿಗೆ, ವಿದೇಶ ಮೂಲದ ವ್ಯವಹಾರಸ್ಥರಿಗೆ ಶ್ರೇಯಸ್ಸು.

Advertisement

ಕನ್ಯಾ: ಆರೋಗ್ಯದ ಬಗ್ಗೆ ಎಚ್ಚರವಿರಲಿ. ಸಂಸಾರದಲ್ಲಿ ಪಾಲುದಾರಿಕಾ ವ್ಯವಹಾರದಲ್ಲಿ ಹೊಂದಾಣಿಕೆಯಿಂದ ಕಾರ್ಯ ಸಿದಿ. ದೂರ ಪ್ರದೇಶದ ವ್ಯವಹಾರದಲ್ಲಿ ನಿರೀಕ್ಷಿತ ಫ‌ಲಿತಾಂಶ. ಅತಿಯಾಗಿ ನಂಬಿ ಮೋಸ ಹೋಗದಿರಿ ವಿದ್ಯಾರ್ಥಿಗಳಿಗೆ ಅನುಕೂಲ.

ತುಲಾ: ಸ್ತ್ರೀಪುರುಷರಿಗೆ ಪರಸ್ಪರರಿಂದ ಸಹಕಾರ ಅನುಕೂಲತೆ. ಗೌರವದಿಂದ ಕೂಡಿದ ಧನಾರ್ಜನೆ. ದಂಪತಿಗಳಲ್ಲಿ ಅನುರಾಗ ವೃದ್ಧಿ. ಅನಿರೀಕ್ಷಿತ ಹಾಗೂ ಗೌಪ್ಯತೆಯಿಂದ ಕೂಡಿದ ಕಾರ್ಯ ವೈಖರಿ. ಸಹೋದರಾದಿ ವರ್ಗದವರಿಗೆ ಅಭಿವೃದ್ಧಿ. ವಿದ್ಯಾರ್ಥಿಗಳಿಗೆ ಅತ್ಯುತ್ತಮ.

ವೃಶ್ಚಿಕ: ಧನಾಗಮ ವಿಚಾರದಲ್ಲಿ ಕಷ್ಟಕರ ಪರಿಸ್ಥಿತಿ ಇದ್ದರೂ ಸ್ಥಾನಕ್ಕೆ ಚ್ಯುತಿಯಾಗದು. ಸ್ವಪ್ರಯತ್ನ ಸಹೋದರ ಸಹಾಯದಿಂದಲೂ ಕಾರ್ಯರಂಗದಲ್ಲಿ ಉತ್ತಮ ಫ‌ಲಿತಾಂಶ ದೇಶದಲ್ಲಿ ಶನಿ ಪ್ರವೇಶ. ಸೋದರ ಆರೋಗ್ಯ ಗಮನವಿರಲಿ.

ಧನು: ಆರೋಗ್ಯದಲ್ಲಿ ವೃದ್ಧಿ. ಸಹೋದರಾದಿ ಸಹಾಯ. ಉತ್ತಮ ಧನಾರ್ಜನೆ. ಕಾರ್ಯಕ್ಷೇತ್ರದಲ್ಲಿ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಿ ಜನಮನ್ನಣೆ. ಮಕ್ಕಳಲ್ಲಿ ನಾಯಕತ್ವ ಗುಣ. ಹಿರಿಯರಿಂದ ಸಂತೋಷ, ಪ್ರಯಾಣ. ದೇವತಾ ಕಾರ್ಯಗಳಲ್ಲಿ ವಿಳಂಬ.

ಮಕರ: ಕಾರ್ಮಿಕರಲ್ಲಿ ಸಹೋದರ ಸಮಾನರಲ್ಲಿ ತಾಳ್ಮೆಯಿಂದ ವ್ಯವಹರಿಸಿ ಕಾರ್ಯ ಸಾಧಿಸಿ ದಂಪತಿಗಳು ಚರ್ಚೆಗೆ ಅವಕಾಶ ನೀಡದಿರಿ. ದೇವತಾ ಕೆಲಸ ಕಾರ್ಯಗಳಿಗೆ ಪ್ರಯಾಣ. ವಿದ್ಯಾರ್ಥಿಗಳಿಗೆ ಯಶಸ್ಸು. ಆರೋಗ್ಯ ವೃದ್ಧಿ . ಸಂಪತ್ತಿನ ವಿಚಾರದಲ್ಲಿ ಕ್ಲಿಷ್ಟಕರ ಪರಿಸ್ಥಿತಿ.

ಕುಂಭ: ಮಿತ್ರರಿಂದಲೂ ಸಹೋದರರಿಂದಲೂ ಸುಖ. ಮಕ್ಕಳು ವಿದ್ಯಾರ್ಥಿಗಳ ವಿಚಾರದಲ್ಲಿ ಸಂತೋಷದ ಪರಿಸ್ಥಿತಿ. ಆಹಾರೋದ್ಯಮ ಉದ್ಯೋಗದವರಿಗೆ ಅಭಿವೃದ್ಧಿ. ದಾರ್ಮಿಕ ಚಿಂತನೆಯಲ್ಲಿ ಆಸಕ್ತಿ. ಅನಿರೀಕ್ಷಿತ ಧನ ಲಾಭ.

ಮೀನ: ಆರೋಗ್ಯ ವೃದ್ಧಿ. ಉದ್ಯೋಗದಲ್ಲಿ ನಿರೀಕ್ಷಿತ ಗೌರವ, ಉತ್ತಮ ಧನಾರ್ಜನೆ ವಿದ್ಯಾರ್ಥಿಗಳಿಗೆ ಏರಿಳಿತದ ಅನುಭವ. ಧಾರ್ಮಿಕ ಕಾರ್ಯಗಳಿಗೆ ಮಿತವ್ಯಯ. ಸಣ್ಣ ಪ್ರಯಾಣ. ಮಕ್ಕಳಿಂದ ಸುಖ. ಸಹೋದರರಲ್ಲಿ ಪ್ರೀತಿಯಿಂದ ವ್ಯವಹಾರಿಸಿ.

Advertisement

Udayavani is now on Telegram. Click here to join our channel and stay updated with the latest news.

Next