Advertisement

ಹೈದರಾಬಾದ್‌ ಲಯಕ್ಕೆ ಮರಳಲಿದೆ: ಲಕ್ಷ್ಮಣ್‌

09:35 PM Sep 19, 2021 | Team Udayavani |

ಅಬುಧಾಬಿ: ಕೋವಿಡ್‌ ಕಾರಣದಿಂದ ಭಾರತದಲ್ಲಿ ಅರ್ಧಕ್ಕೆ ನಿಂತಿದ್ದ 2021ರ ಐಪಿಎಲ್‌ನಲ್ಲಿ ಸನ್‌ರೈಸರ್ ಹೈದರಾಬಾದ್‌ ತೀರಾ ಕಳಪೆ ಪ್ರದರ್ಶನ ನೀಡಿ ಅಂತಿಮ ಸ್ಥಾನಕ್ಕೆ ಕುಸಿದಿತ್ತು. 7 ಪಂದ್ಯಗಳಲ್ಲಿ ಒಂದನ್ನಷ್ಟೇ ಜಯಿಸಿತ್ತು. ಆದರೆ ಯುಎಇ ಆವೃತ್ತಿಯಲ್ಲಿ ಸನ್‌ರೈಸರ್ ಲಯ ಕಂಡುಕೊಂಡು ಉತ್ತಮವಾಗಿ ಕಮ್‌ಬ್ಯಾಕ್‌ ಮಾಡಲಿದೆ ಎಂದು ತಂಡದ ಮೆಂಟರ್‌ ವಿವಿಎಸ್‌ ಲಕ್ಷ್ಮಣ್‌ ಹೇಳಿದ್ದಾರೆ.

Advertisement

“ಟಿ20 ಕ್ರಿಕೆಟ್‌ ಮಾದರಿಗಳಲ್ಲಿ ಬಹಳಷ್ಟು ಬದಲಾವಣೆಗೆ ಅವಕಾಶವಿರುತ್ತದೆ. ಅಂದರೆ ದುರ್ಬಲ ತಂಡವೊಂದು ಅಚಾನಕ್‌ ಬಲಿಷ್ಠ ತಂಡವಾಗಿ ಬದಲಾಗಬಹುದು. ಹಾಗೆಯೇ ಬಲಿಷ್ಠ ತಂಡವೊಂದು ದುರ್ಬಲಗೊಳ್ಳಲೂಬಹುದು. ಇಂಥ ಸುದೀರ್ಘ‌ ಟೂರ್ನಿಗಳಲ್ಲಿ ಇದಕ್ಕೆಲ್ಲ ಧಾರಾಳ ಅವಕಾಶ ಇರುತ್ತದೆ’ ಎಂದು ಲಕ್ಷ್ಮಣ್‌ ಹೇಳಿದರು.

ಬಿಡುವಿನಿಂದ ಲಾಭ:

“ಅಂಕಪಟ್ಟಿಯಲ್ಲಿ ಕೆಳ ಸ್ಥಾನದಲ್ಲಿರುವ ನಮ್ಮ ತಂಡಕ್ಕೆ ಐಪಿಎಲ್‌ ಬಿಡುವಿನಿಂದ ಲಾಭವೇ ಆಗಿದೆ. ಒಗ್ಗಟ್ಟಾಗಿ ಮತ್ತು ಮಾನಸಿಕವಾಗಿ ಬಲಶಾಲಿಯಾಗಿ ಮರಳಲು ಅವಕಾಶ ನೀಡಿದೆ. ನಮಗೆ ಮಾನಸಿಕ ಸ್ಥೈರ್ಯ ಲಭಿಸಿದೆ. ಮರಳಿ ಮೇಲೇರುವುದು ನಮ್ಮ ಗುರಿ’ ಎಂದು ಲಕ್ಷ್ಮಣ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next