Advertisement

German Motorway bridge: ಕ್ಷಣಾರ್ಧದಲ್ಲಿ 450ಮೀ ಉದ್ದದ ಜರ್ಮನ್ ಸೇತುವೆ ನೆಲಸಮ: ವಿಡಿಯೋ..

07:31 PM May 08, 2023 | Team Udayavani |

ಜರ್ಮನಿ: ಪಶ್ಚಿಮ ಜರ್ಮನಿಯಲ್ಲಿ 450 ಮೀಟರ್ ಉದ್ದದ ಸೇತುವೆಯನ್ನು ಮೇ 7 ರಂದು ಯಶಸ್ವಿಯಾಗಿ ಕೆಡವಲಾಯಿತು. ಘಟನೆಯ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Advertisement

ಅಂದಹಾಗೆ ಸೇತುವೆ ಶಿಥಿಲಗೊಂಡಿದ್ದು ಆ ಕಾರಣದಿಂದ ಕಳೆದ ಡಿಸೆಂಬರ್ 2, 2021 ರಿಂದ ಈ ಸೇತುವೆಯ ಮೇಲೆ ಎಲ್ಲ ರೀತಿಯ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು.

ಅದರಂತೆ ಮೇ 7 ರಂದು 450 ಮೀಟರ್ ಉದ್ದದ ಸೇತುವೆಯನ್ನು ಸುಮಾರು 150 ಕೆಜಿ ಸ್ಫೋಟಕ ಬಳಸಿ ಯಶಸ್ವಿಯಾಗಿ ಕೆಡವಲಾಯಿತು.

ಸದ್ಯ ಸೇತುವೆ ಕೆಡವಿದ ವಿಡಿಯೋ ಸಾಮಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.

1965 ರಲ್ಲಿ ನಿರ್ಮಾಣಗೊಂಡ ಸೇತುವೆ:
ರಹ್ಮೆಡೆ ವ್ಯಾಲಿ ಸೇತುವೆಯನ್ನು 1965 ರಿಂದ 1968ರ ಅವಧಿಯಲ್ಲಿ ನಿರ್ಮಾಣಗೊಳಿಸಲಾಗಿತ್ತು, ಈ ಸೇತುವೆ 453 ಮೀಟರ್ ಉದ್ದ, 70 ಮೀಟರ್ ಎತ್ತರವಿದೆ ಮತ್ತು 17,000 ಟನ್ ತೂಕವಿದೆ. ಸದ್ಯ ಸೇತುವೆಯಲ್ಲಿ ಬಿರುಕು ಕಂಡುಬಂದ ಹಿನ್ನೆಲೆಯಲ್ಲಿ ಸುರಕ್ಷತೆಯ ದೃಷ್ಟಿಯಿಂದ ಕಳೆದ ಡಿಸೆಂಬರ್ 2, 2021 ರಿಂದ ಸೇತುವೆಯ ಮೇಲೆ ಎಲ್ಲಾ ರೀತಿಯ ವಾಹನ ಸಂಚಾರವನ್ನು ನಿಷೇಧಗೊಳಿಸಲಾಯಿತು.

Advertisement

150 ಕೆಜಿ ಸ್ಫೋಟಕ ಬಳಕೆ:
450 ಮೀಟರ್ ಉದ್ದದ ಸೇತುವೆಯನ್ನು ಕೆಡವಲು ಸುಮಾರು 150 ಕೆಜಿ ಸ್ಫೋಟಕವನ್ನು ಬಳಸಿ ಕೆಡವಲಾಯಿತು. ಇದಕ್ಕೂ ಮುನ್ನ ಸೇತುವೆಯ ಸುತ್ತಮುತ್ತ ಜನಸಂಚಾರ ನಿಷೇಧಿಸಲಾಗಿತ್ತು ಬಳಿಕ ಭಾನುವಾರ ಸೇತುವೆಯನ್ನು ಕೆಡವಲಾಯಿತು. ಈ ದೃಶ್ಯವನ್ನು ಸೆರೆಹಿಡಿಯಲು ಸಾವಿರಾರು ಮಂದಿ ನೆರೆದಿದ್ದು, ಸೇತುವೆ ಕೆಡಹುವ ವಿಡಿಯೋವನ್ನು ತಮ್ಮ ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದಾರೆ ಅಲ್ಲದೆ ಕೆಲವರು ವಿಡಿಯೋ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಭಾರಿ ವೈರಲ್ ಆಗಿದೆ, ಅಲ್ಲದೆ ಸೇತುವೆ ನೆಲಸಮಗೊಳ್ಳುವ ವೇಳೆ ದಟ್ಟ ಧೂಳು ಎಬ್ಬಿದ್ದು ಕಿಲೋಮೀಟರ್ ದೂರದ ವರೆಗೆ ಧೂಳು ವ್ಯಾಪಿಸಿದೆ.

ಮುಂಜಾಗ್ರತಾ ಕ್ರಮ:
ಸೇತುವೆ ಕೆಡಹುವ ವೇಳೆ ಸಾಕಷ್ಟು ಮುನ್ನೆಚ್ಚರಿಕೆ ವಹಿಸಲಾಗಿತ್ತು, ಯಾವುದೇ ಕಟ್ಟಡಕ್ಕೆ ಹಾನಿಯಾಗದ ರೀತಿಯಲ್ಲಿ ಎಲ್ಲಾ ಸುರಕ್ಷಿತ ಕ್ರಮಗಳನ್ನು ಅನುಸರಿಸಿ ಸೇತುವೆಯನ್ನು ಸ್ಫೋಟಕ ಬಳಸಿ ಕೆಡವಲಾಗಿದೆ.

ಇದನ್ನೂ ಓದಿ: AI ಸೃಷ್ಟಿ: ಭಾರತದ ಕ್ರಿಕೆಟಿಗರು ಪ್ರಾಯಸ್ಥರಾದಾಗ ಹೀಗಿರ್ತಾರೆ ನೋಡಿ..!

Advertisement

Udayavani is now on Telegram. Click here to join our channel and stay updated with the latest news.

Next