Advertisement

Actor Siddique: ಬಂಧನದ ಭೀತಿಯಿಂದ ತಲೆಮರೆಸಿಕೊಂಡ ನಟ ಸಿದ್ದೀಕ್: ಲುಕೌಟ್ ನೋಟಿಸ್ ಜಾರಿ

03:28 PM Sep 26, 2024 | Team Udayavani |

ತಿರುವನಂತಪುರಂ: ಮಾಲಿವುಡ್‌ ಸಿನಿಮಾರಂಗದಲ್ಲಿ ಸಂಚಲನ ಸೃಷ್ಟಿಸಿದ ಹೇಮಾ ಸಮತಿ ವರದಿ (Hema Committee report) ಬಳಿಕ ಹಲವು ನಟರ ಮೇಲೆ ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯದ ಆರೋಪ ಕೇಳಿ ಬಂದಿದೆ.

Advertisement

ಮೊದಲಿಗೆ ಮಲಯಾಳಂ ನಿರ್ದೇಶಕ ರಂಜಿತ್ (Malayalam director Ranjith) ವಿರುದ್ಧ ಆರೋಪ ಕೇಳಿ ಬಂದ ಬಳಿಕ ಸಾಲು ಸಾಲಾಗಿ ಕೆಲ ಖ್ಯಾತ ಕಲಾವಿದರ ಮೇಲೆ ನಟಿಯರು ಲೈಂಗಿಕ ಕಿರುಕುಳ ಹಾಗೂ ಅತ್ಯಾಚಾರ ಆರೋಪವನ್ನು ಮಾಡಿ ದೂರು ದಾಖಲಿಸಿದ್ದರು.

ಇದನ್ನೂ ಓದಿ: ಶಂಕರ್‌ ನಿರ್ದೇಶನದಲ್ಲಿ ಐತಿಹಾಸಿಕ ಸಿನಿಮಾ; 2 ದಶಕದ ಬಳಿಕ ಜತೆಯಾಗಲಿದ್ದಾರೆ ಸೂರ್ಯ- ವಿಕ್ರಮ್

ಹಿರಿಯ ನಟ ಸಿದ್ದೀಕ್ (Malayalam actor Siddique) ಅವರ ಮೇಲೂ ಅತ್ಯಾಚಾರ ಆರೋಪ ಕೇಳಿ ಬಂದಿದೆ.

Advertisement

2016ರ ಜನವರಿ 28ರಂದು ತಿರುವನಂತಪುರಂನ ಹೊಟೇಲ್‌ನಲ್ಲಿ ಸಿನಿಮಾವೊಂದರ ಪ್ರಿವ್ಯೂ ಶೋ ಬಳಿಕ ಸಿದ್ದೀಕ್‌ ತನ್ನ ಮೇಲೆ ಅತ್ಯಾಚಾರವೆಸಗಿದ್ದರು ಎಂದು ನಟಿಯೊಬ್ಬರು ಆರೋಪಿಸಿದ್ದರು. ಪೊಲೀಸರು ನಟನ ವಿರುದ್ಧ ಎಫ್‌ ಐಆರ್‌ ದಾಖಲಿಸಿದ್ದರು.

ಈ ಆರೋಪದ ಬಳಿಕ ಮಲಯಾಳಂ ಚಲನಚಿತ್ರ ಕಲಾವಿದರ ಸಂಘದ (Malayalam Movie Artistes) ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.

ಈ ಪ್ರಕರಣ ಸಂಬಂಧ ಬಂಧನದ ಭೀತಿಯಲ್ಲಿದ್ದ ಸಿದ್ದೀಕ್‌ ಹೈಕೋರ್ಟ್‌ಗೆ ಸೆ.24 ರಂದು ನಿರೀಕ್ಷಣಾ ಜಾಮೀನು ಅರ್ಜಿಯನ್ನು ಸಲ್ಲಿಸಿದ್ದರು. ಆದರೆ ಆ ಅರ್ಜಿ ವಜಾ ಆಗಿತ್ತು. ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಲು ಸುಪ್ರೀಂ ಕೋರ್ಟ್‌ಗೆ ಹೋಗಿದ್ದಾರೆ. ಆದರೆ ಅದೇ ಸಮಯದಲ್ಲಿ ಕ್ರೈಂ ಬ್ರಾಂಚ್ ಕೊಚ್ಚಿ ಪೊಲೀಸರಿಗೆ ಸಿದ್ದೀಕ್ ಅವರನ್ನು ಬಂಧಿಸಲು ಆದೇಶಿದೆ.

ಈ ಹಿನ್ನೆಲೆಯಲ್ಲಿ ಪೊಲೀಸರು ಅವರ ಬಂಧನಕ್ಕೆ ಮುಂದಾಗಿದ್ದು, ಸಿದ್ದೀಕ್‌ ತಲೆಮರೆಸಿಕೊಂಡಿದ್ದಾರೆ. ಅವರ ಮೊಬೈಲ್‌ ಕೂಡ ಸ್ವಿಚ್ಡ್‌ ಆಫ್‌ ಆಗಿದೆ. ಇದೀಗ ಸಿದ್ದೀಕ್ ವಿರುದ್ಧ ಕೇರಳದ ಎಲ್ಲಾ ಜಿಲ್ಲಾ ಪೊಲೀಸ್ ಮುಖ್ಯಸ್ಥರಿಗೆ ಲುಕೌಟ್ ನೋಟಿಸ್ ಜಾರಿ ಮಾಡಲಾಗಿದೆ. ಎಲ್ಲಾ ಪೊಲೀಸ್ ಠಾಣೆಗಳಿಗೂ ಸಿದ್ದೀಕ್ ಫೋಟೋ ಹಾಗೂ ಅವರ ಬಗ್ಗೆ ಮಾಹಿತಿಯನ್ನು ನೀಡಲಾಗಿದೆ.

ಸಿದ್ದೀಕ್‌ ವಿರುದ್ಧ ಅತ್ಯಾಚಾರ (ಸೆಕ್ಷನ್ 376) ಮತ್ತು ಕ್ರಿಮಿನಲ್ ಬೆದರಿಕೆ (ಸೆಕ್ಷನ್ 506) ಆರೋಪ ಮೇಲೆ ದೂರು ದಾಖಲಿಸಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next