Advertisement

ಕೋವಿಡ್ ಪತ್ತೆಗೆ ಥರ್ಮಲ್‌ ಸ್ಕ್ಯಾನರ್‌

06:02 PM Apr 12, 2020 | Naveen |

ಮೊಳಕಾಲ್ಮೂರು: ತಾಲೂಕಿನ ಗಡಿ ಭಾಗದ ಚೆಕ್‌ ಪೋಸ್ಟ್‌ ಗಳಲ್ಲಿ ಕೋವಿಡ್ ವೈರಸ್‌ನ ಸೋಂಕಿತರನ್ನು ಪತ್ತೆ ಹಚ್ಚಲು ಥರ್ಮಲ್‌ ಸ್ಕ್ಯಾನರ್‌ನ ಸೌಲಭ್ಯ ಕಲ್ಪಿಸಲಾಗಿದೆ ಎಂದು ತಹಶೀಲ್ದಾರ್‌ ಎಂ.ಬಸವರಾಜ್‌ ತಿಳಿಸಿದ್ದಾರೆ.

Advertisement

ಪಟ್ಟಣದ ಹೊರವಲಯದ ಗಡಿ ಭಾಗದಲ್ಲಿರುವ ಎದ್ದುಲಬೊಮ್ಮಯ್ಯನಹಟ್ಟಿ ಯ ಚೆಕ್‌ಪೋಸ್ಟ್‌ ನಲ್ಲಿ ಕೋವಿಡ್ ವೈರಸ್‌ ಅನ್ನು ಪತ್ತೆ ಹಚ್ಚುವ ಥರ್ಮಲ್‌ ಸ್ಕ್ಯಾನರ್‌ಗೆ ಚಾಲನೆ ನೀಡಿ ಅವರು ಮಾತನಾಡಿದರು. ತಾಲೂಕಿನಲ್ಲಿನ ಎದ್ದುಲಬೊಮ್ಮಯ್ಯನಹಟ್ಟಿ ಮತ್ತು ತಮ್ಮೇನಹಳ್ಳಿ ಚೆಕ್‌ ಪೋಸ್ಟ್‌ ಗಳಲ್ಲಿ ತಾಲೂಕಿಗೆ ಒಳ ಬರುವವರಲ್ಲಿ ಕೋವಿಡ್ ವೈರಸ್‌ ಸೋಂಕು ಇರುವುದನ್ನು ಉಷ್ಣಾಂಶದ ಮೂಲಕ ಪತ್ತೆ ಹಚ್ಚಲು ಎರಡು ಥರ್ಮಲ್‌ ಸ್ಕ್ಯಾನರ್‌ ಗಳನ್ನು ನೀಡಲಾಗಿದೆ. ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಆರೋಗ್ಯಾ ಧಿಕಾರಿಗಳು ಈ ಥರ್ಮಲ್‌ ಸ್ಕ್ಯಾನರ್‌ ಸೌಲಭ್ಯ ಕಲ್ಪಿಸಲಾಗಿದೆ. ಈ ಸ್ಕ್ಯಾನರ್‌ ನಿಂದ ಒಳ ಬರುವವರನ್ನು ಉಷ್ಣಾಂಶ ಪರಿಶೀಲಿಸಲು ಸಹಕಾರಿಯಾಗಿದೆ ಎಂದು ತಿಳಿಸಿದರು.

ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಡಿ.ಚಿದಾನಂದಪ್ಪ ಮಾತನಾಡಿ, ಥರ್ಮಲ್‌ ಸ್ಕ್ಯಾನರ್‌ ನಿಂದ ನಿಯೋಜನೆಗೊಂಡ ಅಧಿಕಾರಿ ಸಿಬ್ಬಂದಿಗಳಿಂದ ತಪಾಸಣೆ ಮಾಡಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. 38 ಡಿಗ್ರಿಸೆಲ್ಸಿಯಸ್‌ ಕ್ಕಿಂತಲೂ ಹೆಚ್ಚಿದ್ದಲ್ಲಿ ಅಂತವರನ್ನು ವಾಪಾಸ್‌ ಕಳುಹಿಸಲಾಗುವುದು, ಕಡಿಮೆ ಉಷ್ಣಾಂಶ ಇದ್ದಲ್ಲಿ ಸಾಮಾನ್ಯ ವೆಂದು ಪರಿಗಣಿಸಲಾಗುವುದು ಎಂದರು. ಪ್ರಭಾರಿ ತಾಲೂಕು ಆರೋಗ್ಯ ಅಧಿಕಾರಿ ಡಾ| ಪದ್ಮಾವತಿ , ಜಿಲ್ಲಾ ಆರೋಗ್ಯ ಮೇಲ್ವಿಚಾರಕ ಶ್ರೀನಿವಾಸ್‌, ಕಂದಾಯ ನಿರೀಕ್ಷಕ ಉಮೇಶ್‌, ಗ್ರಾಮ ಲೆಕ್ಕಾಧಿಕಾರಿ ಮಾಲೇಕರ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next