Advertisement

31ಕ್ಕೆ ಸ್ವಕುಳಸಾಳಿ ಗುರುಪೀಠ ಲೋಕಾರ್ಪಣೆ

12:57 PM Jan 24, 2020 | Naveen |

ಮೊಳಕಾಲ್ಮೂರು: ಪಟ್ಟಣದ ಹಾನಗಲ್‌ ರಸ್ತೆಯ ಪಿ.ಟಿ. ಹಟ್ಟಿ ಬಳಿ ನಿರ್ಮಾಣಗೊಂಡ ಸ್ವಕುಳಸಾಳಿ ಸಮಾಜದ ಗುರುಪೀಠ ಜ. 31 ರಂದು ಲೋಕಾರ್ಪಣೆಯಾಗಲಿದೆ.

Advertisement

ರೇಷ್ಮೆ ಸೀರೆ ನೇಕಾರಿಕೆ ಕಾಯಕದಲ್ಲಿ ತೊಡಗಿರುವ ಸ್ವಕುಳಸಾಳಿ ಸಮಾಜದ ಆರಾಧ್ಯದೈವವಾಗಿರುವ ಭಗವಾನ್‌ ಜಿಹ್ವೇ ಶ್ವರಸ್ವಾಮಿ ಆರಾಧನೆಗಾಗಿ ರಾಜ್ಯದಲ್ಲಿಯೇ ಅತ್ಯಂತ ಹಿಂದುಳಿದ ಗಡಿ ಭಾಗದಲ್ಲಿರುವ ಮೊಳಕಾಲ್ಮೂರು ಪಟ್ಟಣದಲ್ಲಿ ನಿರ್ಮಾಣವಾಗಿರುವ ಪ್ರಪ್ರಥಮ ಗುರುಪೀಠ ಇದಾಗಿದೆ. ತಾಲೂಕಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಸ್ವಕುಳಸಾಳಿ ಸಮಾಜ ಧಾರ್ಮಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ, ಔದ್ಯೋಗಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ಪ್ರಗತಿ ಸಾ ಸಲು ಗುರುಪೀಠದ ನಿರ್ಮಾಣದ ಮುಖ್ಯ ಧ್ಯೇಯವಾಗಿದೆ.

ಸ್ವಕುಳಸಾಳಿ ಸಮಾಜದ ಗುರುಪೀಠ ನಿರ್ಮಾಣ ಕಾರ್ಯಕ್ಕಾಗಿ ಸ್ವಕುಳಸಾಳಿ ಸಮಾಜದ ರಾಜ್ಯಾಧ್ಯಕ್ಷ ಚಂದ್ರಕಾಂತ ಎನ್‌. ಭಂಡಾರೆ ಹಾಗೂ ಗುರುಪೀಠ ಸ್ಥಾಪನಾ ಸಮಿತಿ ಅಧ್ಯಕ್ಷ ನೀಲಕಂಠಪ್ಪ ಎಸ್‌. ರೋಖಡೆ ಹಾಗೂ ಸಮಾಜದ ಗಣ್ಯರು ಶ್ರಮಿಸಿದ್ದಾರೆ.

ಜ. 31 ರಂದು ಸ್ವಕುಳಸಾಳಿ ಸಮಾಜದ ಗುರುಪೀಠದ ಮಹಾದ್ವಾರದ ಉದ್ಘಾಟನೆ
ಹಾಗೂ ಸ್ವಕುಳಸಾಳಿ ಸಮಾಜದ ಬೃಹತ್‌ ಸಮಾವೇಶವನ್ನು ಆಯೋಜಿಸಲಾಗಿದೆ.
ಸ್ವಕುಳ ಸಾಳಿ ಸಮಾಜದ ಗುರುಪೀಠದ ಲೋಕಾರ್ಪಣೆ ಮತ್ತು ಗುರುಗಳ ಪಟ್ಟಾಭಿಷೇಕ ಸಮಾರಂಭವನ್ನು ಆಯೋಜಿಸಲಾಗಿದೆ.

ಹರಿದ್ವಾರದ ಪತಂಜಲಿ ಯೋಗಪೀಠದ ಯೋಗ ಋಷಿ ಬಾಬಾ ರಾಮದೇವ್‌ ಹಾಗೂ ಹಲವು
ಮಠಗಳ ಸ್ವಾಮೀಜಿಗಳು, ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ಆರೋಗ್ಯ ಮತ್ತು ಕುಟುಂಬಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು, ಸಂಸದ ಎ.
ನಾರಾಯಣಸ್ವಾಮಿ, ನೇಕಾರ ಸಮುದಾಯಗಳ ಒಕ್ಕೂಟದ ಅಧ್ಯಕ್ಷ ಕೆ.ಸಿ. ಕೊಂಡಯ್ಯ, ಮಾಜಿ ಸಚಿವ ಎಚ್‌.ಆಂಜನೇಯ, ಸ್ವಕುಳಸಾಳಿ ಸಮಾಜದ ರಾಜ್ಯ ನಾಯಕ ಪಿ.ಜಿ.ಆರ್‌. ಸಿಂಧ್ಯಾ ಹಾಗೂ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಸ್ವಕುಳಸಾಳಿ ಸಮಾಜದ ರಾಜ್ಯಾಧ್ಯಕ್ಷ ಚಂದ್ರಕಾಂತ ಎನ್‌. ಭಂಡಾರೆ ತಿಳಿಸಿದ್ದಾರೆ.

Advertisement

ನೂತನ ಪೀಠಾಧಿಪತಿಯಾಗಿ ಆನಂದಭಾರತೀ ಶ್ರೀ ನಿಯುಕ್ತಿ
ಶ್ರೀ ಆನಂದ ಭಾರತೀ ಸ್ವಾಮೀಜಿಯವರನ್ನು ಸ್ವಕುಳಸಾಳಿ ಸಮಾಜದ ಗುರುಪೀಠದ
ಮಠಾಧಿಪತಿಗಳನ್ನಾಗಿ ನಿಯುಕ್ತಿ ಮಾಡಲಾಗಿದೆ. ಮೂಲತಃ ಮೊಳಕಾಲ್ಮೂರು
ಪಟ್ಟಣದವರೇ ಆಗಿರುವ ಇವರು ಹರಿದ್ವಾರದ ಪತಂಜಲಿ ಯೋಗಪೀಠದ
ಯೋಗ ಋಷಿ ಬಾಬಾ ರಾಮದೇವ್‌ ಅವರ ಶಿಷ್ಯರಾಗಿದ್ದಾರೆ. ಅಲ್ಲದೆ ಪತಂಜಲಿ ಯೋಗ ಪೀಠದ ಆಚಾರ್ಯ ಪ್ರದ್ಯುಮ್ನ ಗುರೂಜಿಯವರಿಂದ ಬ್ರಹ್ಮಚರ್ಯ ದೀಕ್ಷೆ ಪಡೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next