Advertisement

ಮೋಜೋಗೆ ಯೋಗರಾಜ ಭಟ್‌ ಧ್ವನಿ

10:55 AM Aug 01, 2017 | Team Udayavani |

ಚಿತ್ರಗಳ ನಿರೂಪಣೆ, ಹಿನ್ನೆಲೆ ಧ್ವನಿಯನ್ನು ಬೇರೆ ನಟರಿಂದ, ನಿರ್ದೇಶಕರಿಂದ ಕೊಡಿಸೋದು ಹೊಸ ಟ್ರೆಂಡ್‌. ಈಗಾಗಲೇ ಅನೇಕರು ಕೊಟ್ಟಿದ್ದಾರೆ ಕೂಡಾ. ಈಗ ನಿರ್ದೇಶಕ ಯೋಗರಾಜ ಭಟ್ಟರು ಕೂಡಾ ಸಿನಿಮಾವೊಂದಕ್ಕೆ ಧ್ವನಿ ನೀಡಿದ್ದಾರೆ.

Advertisement

ಅದು “ಮೋಜೋ’ ಚಿತ್ರಕ್ಕೆ. ನಿರ್ದೇಶಕ ಶ್ರೀಶ ಬೆಳಕವಾಡಿ ನಿರ್ದೇಶನದ ಈ ಚಿತ್ರಕ್ಕೆ ಭಟ್ಟರು ಧ್ವನಿಯಾಗಿದ್ದು, ಮನುಷ್ಯನ ಉಪಪ್ರಜ್ಞೆಗೆ ಇರುವ ಅಪಾರ ಶಕ್ತಿಯ ಪರಿಚಯ ಮಾಡಿಕೊಡುವ ಪೀಠಿಕೆಯಲ್ಲಿ ಭಟ್ಟರ ಧ್ವನಿ ಕೇಳಲಿದೆ.

ಯೋಗರಾಜ್‌ ಭಟ್ಟರ ಧ್ವನಿಯಲ್ಲೇ ಮಾಂತ್ರಿಕತೆ ಇದೆಯೆಂದು ಹೇಳುತ್ತಾ ಚಲನಚಿತ್ರದ ಆರಂಭಕ್ಕೆ ಅವರ ಧ್ವನಿಯು ಉತ್ತಮ ಆವೇಗವನ್ನು ನೀಡಿದೆ ಎಂಬುದು ಚಿತ್ರತಂಡದ ಮಾತು. ಈ ಚಿತ್ರವನ್ನು  ಪೂರ್ವಿ ಆರ್ಟ್ಸ್ ಬ್ಯಾನರಿನಲ್ಲಿ ಅಮೆರಿಕಾ ಮೂಲದ ಗಜಾನನ್‌ ಭಟ್‌ ಅವರು ನಿರ್ಮಿಸಿದ್ದಾರೆ.

ಈ ಹಿಂದೆ “ಕ’ ಸಿನಿಮಾದಲ್ಲಿ ಸಣ್ಣ ಪಾತ್ರ ಮಾಡಿದ್ದ ಮನು ಇಲ್ಲಿ ನಾಯಕ. ಚಿತ್ರೀಕರಣ ಅನುಭವ ಹಂಚಿಕೊಂಡರು. ನಾಯಕಿಯಾಗಿ ಅನುಷಾ ನಟಿಸಿದ್ದು, ಅವರಿಲ್ಲಿ ಮನೋವೈದೈಯಾಗಿ ನಟಿಸಿದ್ದಾರೆ. ಅನಂತ್‌ ಅರಸ್‌ ಛಾಯಾಗ್ರಹಣ ಮಾಡಿದ್ದಾರೆ. ಅಜನೀಶ್‌ ಲೋಕನಾಥ್‌ ಅವರ ಹಿನ್ನೆಲೆ ಸಂಗೀತ ಚಿತ್ರಕ್ಕಿದೆ. 

Advertisement

Udayavani is now on Telegram. Click here to join our channel and stay updated with the latest news.

Next