Advertisement

10 % ಸರ್ಕಾರಕ್ಕೆ ಮೊಯ್ಲಿ ಟ್ವೀಟ್‌ ಸಾಕ್ಷಿ : ಯಡಿಯೂರಪ್ಪ 

02:21 PM Mar 16, 2018 | |

ಬೆಂಗಳೂರು: ಸಿದ್ದರಾಮಯ್ಯ ಸರ್ಕಾರ 10 % ಸರ್ಕಾರ ಎಂದು  ನಾವು ಆರೋಪಿಸುತ್ತಿದ್ದುದಕ್ಕೆ ವೀರಪ್ಪ ಮೊಯ್ಲಿ ಅವರ ಟ್ವೀಟ್‌ ಸಾಕ್ಷಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಟ್ವೀಟ್‌ ಮಾಡಿದ್ದಾರೆ. 

Advertisement

”ಕರ್ನಾಟಕದಲ್ಲಿ ಕೊನೆಗೂ ಯಾರದ್ದೋ ಮನಸಾಕ್ಷಿ ಅವರನ್ನು ಮಾತನಾಡುವಂತೆ ಮಾಡಿತು!ಮೊಯ್ಲಿ ಜಿ ಸರಿಯಾದುದನ್ನೇ ಹೇಳಿದ್ದಾರೆ. ಸಿದ್ದರಾಮಯ್ಯ ಅವರು 10 % ಸಿಎಂ ಎಂದು ನಾವು ನಿರಂತರವಾಗಿ ಹೇಳುತ್ತಾ ಬಂದಿದ್ದೆವೆ.ಕಾಂಟ್ರಾಕ್ಟರ್‌ಗಳು ಲೋಕೋಪಯೋಗಿ ಸಚಿವರ ಆಳವಾದ ಜೇಬುಗಳನ್ನು ತುಂಬಿಸುತ್ತಿದ್ದಾರೆ. ರಾಜ್ಯದ ರಸ್ತೆಗಳಲ್ಲಿ ಗುಂಡಿಗಳು ಬಿದ್ದಿವೆ. ಕಾಂಗ್ರೆಸ್ ಹಿರಿಯ ನಾಯಕನ ದೃಷ್ಟಿಕೋನ ನಮ್ಮ ವಿಚಾರಕ್ಕೆ  ಮೌಲ್ಯ ತಂದಿಟ್ಟಿದೆ.” ಎಂದು ಇಂಗ್ಲೀಷ್‌ನಲ್ಲಿ ಟ್ವೀಟ್‌ ಮಾಡಿದ್ದಾರೆ. 

”ಸಿದ್ದರಾಮಯ್ಯನವರದ್ದು ‘ಕಮಿಷನ್ ಸರ್ಕಾರ’ ಎಂದು ಇಲ್ಲಿ ತನಕ ಹಲವಾರು ಪುರಾವೆ ಒದಗಿಸಿದ್ದೇವೆ. ಆದರೂ ಸಿಎಂ  ರವರು ಅದೆಲ್ಲಾ ಸುಳ್ಳು ಎಂದು ಪ್ರತಿಪಾದಿಸುತ್ತ ಮತ್ತೆ ಮತ್ತೆ ಹಸಿ ಸುಳ್ಳುಗಳ ಬೇಲಿ ಕಟ್ಟುತ್ತಿದ್ದಾರೆ. 

ಸುಳ್ಳಿನ ಬೇಲಿಯ ಮುಳ್ಳು ಚುಚ್ಚುವುದೆಂದೆಂದೂ 
ಸುಳ್ಳಿನ ಬೇಲಿಗಿಂತ ದಿಟದ
ಬಯಲೇ ಲೇಸು ಕೇಳೆನ್ನ ಮತ್ತಿತಾಳಯ್ಯ” ಎಂದು ಕನ್ನಡದಲ್ಲಿ ಇನ್ನೊಂದು ಟ್ವೀಟ್‌ ಮಾಡಿದ್ದಾರೆ. 

ಮೊಯ್ಲಿ ಅವರ ಅಧಿಕೃತ ಟ್ವೀಟರ್‌ ಖಾತೆಯಲ್ಲಿ ‘ಕಾಂಗ್ರೆಸ್‌ ಹಣದ ರಾಜಕೀಯಕ್ಕೆ ಅಂತ್ಯ ಹಾಡಬೇಕಿದೆ. ರಸ್ತೆ ಗುತ್ತಿಗೆ ದಾರರು ಮತ್ತು  ಅವರೊಂದಿಗೆ ಅಪವಿತ್ರ ಸಂಬಂಧ ಹೊಂದಿರುವ ರಾಜ್ಯದ  ಪಿಡಬ್ಲ್ಯೂಡಿ  ಮಂತ್ರಿ ಮುಂಬರುವ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದು ಸಾಧ್ಯವಿಲ್ಲ’ ಎಂಬ ಟ್ವೀಟ್‌ ಮಾಡಲಾಗಿತ್ತು. ಆದರೆ ಟ್ವೀಟ್‌ ನಾನು ಮಾಡಿದ್ದಲ್ಲ ಎಂದು ಟ್ವೀಟನ್ನು ಅಳಿಸಿ ಹಾಕಿದ್ದರು. ಮೊಯ್ಲಿ ಅವರ ಟ್ವೀಟ್‌ ಕಾಂಗ್ರೆಸ್‌ನಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. 
 

Advertisement
Advertisement

Udayavani is now on Telegram. Click here to join our channel and stay updated with the latest news.

Next