Advertisement

Durand Cup 2024: ಚೊಚ್ಚಲ ಡುರಾಂಡ್‌ ಕಪ್‌ ಗೆದ್ದ ನಾರ್ತ್‌ ಈಸ್ಟ್‌

10:58 PM Aug 31, 2024 | Team Udayavani |

ಕೋಲ್ಕತಾ: ನಾರ್ತ್‌ ಈಸ್ಟ್‌ ಯುನೈಟೆಡ್‌ ತಂಡ ಮೊದಲ ಬಾರಿ ಡುರಾಂಡ್‌ ಕಪ್‌ ಫ‌ುಟ್‌ಬಾಲ್‌ ಚಾಂಪಿಯನ್‌ ಆಗಿದೆ. ಶನಿವಾರ ಸಾಲ್ಟ್ ಲೇಟ್‌ ಮೈದಾನದಲ್ಲಿ ನಡೆದ ಫೈನಲ್‌ನಲ್ಲಿ ಬಲಿಷ್ಠ ಮೋಹನ್‌ ಬಗಾನ್‌ ವಿರುದ್ಧ ಶೂಟೌಟ್‌ನಲ್ಲಿ 4-3 ಅಂತರದಿಂದ ಜಯಿಸಿತು. ಇದರಿಂದ 18ನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದ ಮೋಹನ್‌ ಬಗಾನ್‌ಗೆ ನಿರಾಸೆಯಾಗಿದೆ.

Advertisement

ನಿಗದಿತ ಅವಧಿಯಲ್ಲಿ ಪಂದ್ಯ 2-2ರಿಂದ ಡ್ರಾಗೊಂಡಿತ್ತು. ಶೂಟೌಟ್‌ನಲ್ಲಿ, ಮೊದಲ ಬಾರಿಗೆ ಫೈನಲ್‌ಗೇರಿದ್ದ ನಾರ್ತ್‌ ಈಸ್ಟ್‌ ಯುನೈಟೆಡ್‌ ತಂಡ 4-3 ಅಂತರದ ಗೆಲುವು ದಾಖಲಿಸಿತು.

 

Advertisement

Udayavani is now on Telegram. Click here to join our channel and stay updated with the latest news.

Next