Advertisement

ಸಂಸದ ತೇಜಸ್ವಿ ಸೂರ್ಯರಿಂದ ಸೌಹರ್ಧತೆಗೆ ಭಂಗ: ಮೊಯಿದಿನ್ ಬಾವ ಆರೋಪ

08:31 PM May 07, 2021 | Team Udayavani |

ಕೂಳೂರು : ಸಂಸದ ತೇಜಸ್ವಿ ಸೂರ್ಯ ಅವರು , 207 ಮಂದಿ ಬಿಬಿಎಂಪಿ ವಾರ್ ರೂಮ್ ಸಿಬ್ಬಂದಿ ಹೆಸರಿದ್ದರೂ ಬರೀ 17 ಮಂದಿ ಮುಸ್ಲಿಮರ ಹೆಸರನ್ನು ಹೇಳುವ ಮೂಲಕ ತಾವೊಬ್ಬ ಕೋಮುವಾದಿ ಎಂಬುದನ್ನು ಸಾಬೀತುಪಡಿಸಿದ್ದಾರೆ ಎಂದು ಮಾಜಿ ಶಾಸಕ ಮೊಯಿದಿನ್ ಬಾವ  ಆರೋಪಿಸಿದ್ದಾರೆ.

Advertisement

ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಡಿದ ಅವರು  “ಒಂದು ಸಮುದಾಯವನ್ನು ಹೀಯಾಳಿಸಿ ಈ ಹಿಂದೆಯೂ ತೇಜಸ್ವಿ ಸೂರ್ಯ ಪಂಕ್ಚರ್ ಹಾಕುವವರು ಎಂದಿದ್ದರು. ಎಲ್ಲಾ ಸಮುದಾಯಗಳಿಗೂ ಅದರದ್ದೇ ಆದ ಗೌರವಿದ್ದು ಆರೋಪಿಸುವ ಮೊದಲು ಸತ್ಯಾಸತ್ಯತೆ ಪರಿಶೀಲಿಸಬೇಕು.ಚಾಮರಾಜನಗರದಲ್ಲಿ ಆಕ್ಸಿಜನ್ ಇಲ್ಲದೆ ಸಾವನ್ನಪ್ಪಿರುವ 24 ಮಂದಿಯ ಪ್ರಕರಣ ಮುಚ್ಚಿಹಾಕಲು ಉದ್ದೇಶ ಪೂರ್ವಕವಾಗಿ ಬೆಡ್ ಬ್ಲಾಕಿಂಗ್ ಪ್ರಕರಣ ಎಳೆದು ತರಲಾಗಿದೆ.  ಇದೀಗ  ಬಹುತೇಕ ಮಾಧ್ಯಮಗಳಲ್ಲಿ ಬೆಡ್ ಬ್ಲಾಕಿಂಗ್ ದಂಧೆಯಲ್ಲಿ ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿಯ ಹೆಸರು ಕೇಳಿಬಂದಿದ್ದು ಬಿಜೆಪಿ ಸರಕಾರ  ಕಠಿಣ ಕ್ರಮ ಕೈಗೊಳ್ಳ ಬೇಕು ಎಂದು ಆಗ್ರಹಿಸಿದರು.

ಬಹರೈನ್ ನಿಂದ ಅಲ್ಲಿನ ರಾಜಕುಮಾರ್ ಉಚಿತ  ಕೊಡುಗೆಯಾಗಿ ನೀಡಿದ  ಆಕ್ಸಿಜನ್  ಬಂದರಿಗೆ ಬಂದ ಸಂದರ್ಭ  ಬಿಜೆಪಿ ಸಂಸದರ ಸಹಿತ ಶಾಸಕರು, ಮುಖಂಡರು ಛಾಯಾಚಿತ್ರಕ್ಕೆ ಫೋಸ್ ನೀಡಿ  ಪ್ರಚಾರ ಗಿಟ್ಟಿಸಿಕೊಂಡಿದ್ದಾರೆ. ಮೋದಿ ಅವರ ಸಾಧನೆ ಎಂಬಂತೆ ಬಿಂಬಿಸಿದ್ದಾರೆ. ಕನಿಷ್ಠ ರಾಜಕುಮಾರನಿಗೆ ಗೌರವ ಸಲ್ಲಿಸಿ ಕೃತಜ್ಞತೆ ಸಲ್ಲಿಸುವ ಹೇಳಿಕೆ ಕೊಡಬೇಕಿತ್ತು.  ಇನ್ನಾದರೂ ಸತ್ಯ ಒಪ್ಪಿಕೊಳ್ಳಿ, ಎಲ್ಲದಕ್ಕೂ ಮೋದಿ ಕೊಟ್ಟಿದ್ದು ಎಂದು ಜನರನ್ನು ನಂಬಿಸುವ ಪ್ರಯತ್ನ ಮಾಡಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.ಸುದ್ದಿಗೋಷ್ಟಿಯಲ್ಲಿ ಹ್ಯಾರಿಸ್ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next