Advertisement

ಅಪ್ಪನ ದಾಖಲೆ ಮುರಿದ ಕ್ರಿಕೆಟಿಗ!

06:05 AM Nov 17, 2017 | Harsha Rao |

ವಡೋದರ: ಅಂಡರ್‌-19 ಕೂಚ್‌ ಬಿಹಾರ್‌ ಟ್ರೋಫಿ ಕ್ರಿಕೆಟ್‌ ಪಂದ್ಯದಲ್ಲಿ ಬರೋಡದ ಮೋಹಿತ್‌ ಮೊಂಗಿಯ ತಂದೆಯ ದಾಖಲೆಯನ್ನೇ ಮುರಿಯುವ ಮೂಲಕ ಸುದ್ದಿಯಾಗಿದ್ದಾರೆ. ಈ ಮೋಹಿತ್‌ ಮೊಂಗಿಯ ಬೇರೆ ಯಾರೂ ಅಲ್ಲ, ಭಾರತದ ಮಾಜಿ ಕೀಪರ್‌ ನಯನ್‌ ಮೊಂಗಿಯ ಅವರ ಮಗ!

Advertisement

ಕೇರಳ ವಿರುದ್ಧದ ಕೂಚ್‌ ಬಿಹಾರ್‌ ಪಂದ್ಯದಲ್ಲಿ ಮೋಹಿತ್‌ ಮೊಂಗಿಯ 240 ರನ್‌ ಬಾರಿಸಿ ಮೆರೆದರು. ಇದು ಪಂದ್ಯಾವಳಿಯ ಇತಿಹಾಸದಲ್ಲಿ ಬರೋಡದ ಪರ ದಾಖಲಾದ ಸರ್ವಾಧಿಕ ವೈಯ ಕ್ತಿಕ ರನ್‌. ಹಿಂದಿನ ದಾಖಲೆ ನಯನ್‌ ಮೊಂಗಿಯ ಹೆಸರಲ್ಲಿತ್ತು. ಅವರು 224 ರನ್‌ ಹೊಡೆದಿದ್ದರು. 
18ರ ಹರೆಯದ ಮೋಹಿತ್‌ ಮೊಂಗಿಯ ಎಡಗೈ ಸ್ಪಿನ್ನರ್‌ ಕೂಡ ಆಗಿದ್ದು, ಈ ವರ್ಷವಷ್ಟೇ ಬರೋಡ ಅಂಡರ್‌-19 ತಂಡದ ನಾಯಕನಾಗಿ ಆಯ್ಕೆಯಾಗಿದ್ದಾರೆ. ಅಂತರ್‌ ಜಿಲ್ಲಾ ಪಂದ್ಯವೊಂದರಲ್ಲಿ ಕೇವಲ 36 ಎಸೆತಗಳಿಂದ 91 ರನ್‌ ಬಾರಿಸುವ ಮೂಲಕ ಮೋಹಿತ್‌ ಆಯ್ಕೆಗಾರರ ಗಮನ ಸೆಳೆದಿದ್ದರು. ಅದೇ ಪಂದ್ಯದಲ್ಲಿ 6 ವಿಕೆಟ್‌ ಕಿತ್ತ ಸಾಧನೆಯೂ ಅವರದಾಗಿತ್ತು. 
“ಮಗ ನನ್ನ ಬ್ಯಾಟಿಂಗ್‌ ದಾಖಲೆಯನ್ನು ಮುರಿದ ಸುದ್ದಿ ತಿಳಿದು ಬಹಳ ಖುಷಿಯಾಗಿದೆ. ಆವನೀಗ ಅತ್ಯುತ್ತಮ ಬ್ಯಾಟಿಂಗ್‌ ಪ್ರದರ್ಶನ ನೀಡುತ್ತಿದ್ದಾನೆ. ಈ ದ್ವಿಶತಕಕ್ಕೆ ಮೋಹಿತ್‌ ಅರ್ಹನಾಗಿದ್ದಾನೆ. ಆದರೆ ಆತ ಇಷ್ಟಕ್ಕೇ ತೃಪ್ತನಾಗಬಾರದು. ಏಕೆಂದರೆ ಕ್ರಿಕೆಟ್‌ನಲ್ಲೀಗ ಭಾರೀ ಪೈಪೋಟಿ ಇದೆ. ಮುಂದಿನ ಹಂತಕ್ಕೆ ಆಯ್ಕೆಯಾಗಬೇಕಾದರೆ ಅತ್ಯುತ್ತಮ ಪ್ರದ
ರ್ಶನವನ್ನು ಕಾಯ್ದುಕೊಂಡು ಬರುವುದು ಅಗತ್ಯ…’ ಎಂದು ನಯನ್‌ ಮೊಂಗಿಯ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next