Advertisement

ಮೊಹರಂ ಆಚರಣೆ: ಖರೀದಿ ಜೋರು

11:03 AM Sep 09, 2019 | Suhan S |

ಗಜೇಂದ್ರಗಡ: ಪಟ್ಟಣದ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಸರ್ವ ಧರ್ಮಿಯರ ಭಾವೈಕ್ಯತೆ ಹಬ್ಬವಾದ ಮೊಹರಂ ಆಚರಣೆ ಪ್ರಯುಕ್ತ ಪಟ್ಟಣದ ಮಾರುಕಟ್ಟೆಯಲ್ಲಿ ರವಿವಾರ ಖರೀದಿ ಜೋರಾಗಿ ನಡೆಯಿತು.

Advertisement

ನಭಿಯವರ ಮೊಮ್ಮಗ ಇಮಾಮ್‌ ಹುಸೇನ್‌ ಅವರ ಕುಟುಂಬದವರು ಇಸ್ಲಾಂ ಧರ್ಮದ ಕಟ್ಟುಪಾಡುಗಳನ್ನು ಪಾಲಿಸಲು ಎಂದು ಪ್ರಾಣತ್ಯಾಗ ಮಾಡಿದ ಸ್ಮರಣಾರ್ಥ, ಮುಸ್ಲಿಮರು ಶೋಕದ ಹಬ್ಬವಾಗಿ ಆಚರಿಸಿದರೆ, ಹಿಂದೂಗಳು ಪಂಚಾ ದೇವರನ್ನು ಮಸೀದಿಯಲ್ಲಿ ಕೂರಿಸಿ ಭಾವೈಕ್ಯತೆಯಿಂದ ಆಚರಿಸುವ ಮೊಹರಂ ಹಬ್ಬದ ಪ್ರಯುಕ್ತ ಪಟ್ಟಣದ ಮಾರುಕಟ್ಟೆಯಲ್ಲಿ ಹಬ್ಬಕ್ಕೆ ಬೇಕಾಗುವ ಧವಸ ಧಾನ್ಯ ಸೇರಿ, ಲಾಡಿ, ಹೂವಿನ ಸರ, ಮಕ್ತುಂ ಸಕ್ಕರೆ, ಮಕಾನ್‌ ಮಾರಾಟ ಜೋರಾಗಿತ್ತು. ಸ್ಥಳೀಯ ಜೋಡು ರಸ್ತೆ, ದುರ್ಗಾ ವೃತ್ತ, ಕಾಲಕಾಲೇಶ್ವರ ವೃತ್ತ, ಸರಾಫ್‌ ಬಜಾರನಲ್ಲಿನ ಅಂಗಡಿಗಳಲ್ಲಿ ಹಬ್ಬಕ್ಕೆ ಬೇಕಾಗುವ ಸಾಮಗ್ರಿಗಳ ಖರೀದಿ ಜೋರಾಗಿತ್ತು.

ಇನ್ನೊಂದೆಡೆ ಜೋಡು ರಸ್ತೆಗಳುದ್ದಕ್ಕೂ ಹುಲಿ ವೇಷಧಾರಿಗಳ ಮಾಲೆ, ಲಾಡಿ ಮತ್ತು ನವಿಲು ಗರಿಗಳ ಹೆಚ್ಚಾಗಿತ್ತು. ಇದಲ್ಲದೇ ಕಾಲಕಾಲೇಶ್ವರ ವೃತ್ತದಲ್ಲಿ ಮಕಾನ್‌ ಮಾರಾಟವು ನಡೆಯಿತು. ಜತೆಗೆ ಕುಂಬಾರರು ಮಣ್ಣಿನಿಂದ ಸಿದ್ದಪಡಿಸಿದ್ದ ಮಡಿಕೆ, ಕುಡಿಕೆಗಳನ್ನು ಖರೀದಿಸಲು ಜನರು ಮುಗಿ ಬಿದ್ದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next