ಕೊಚ್ಚಿ: ಸೂಪರ್ ಸ್ಟಾರ್ ಮೋಹನ್ ಲಾಲ್ ವೃತ್ತಿ ಬದುಕಿನ ವಿಶೇಷ ಸಿನಿಮಾಗಳಲ್ಲಿ ಒಂದಾಗಿರುವ ʼದೃಶ್ಯಂʼ ದೊಡ್ಡಮಟ್ಟದ ಹಿಟ್ ಆಗಿದ್ದು ಗೊತ್ತೇ ಇದೆ. ಬಹುತೇಕ ಭಾರತದ ಎಲ್ಲಾ ಭಾಷೆಗಳಲ್ಲಿ ರಿಮೇಕ್ ಆದ ಬಳಿಕ ಗಟಿದಾಟಿ ವಿದೇಶಿ ಭಾಷೆಯಲ್ಲೂ ಸಿನಿಮಾ ರಿಮೇಕ್ ಆಗಿ ಸದ್ದು ಮಾಡಿದೆ.
ಇದೀಗ ʼದೃಶ್ಯಂʼ ಸಿನಿಮಾ ತೆರೆಕಂಡ 10 ವರ್ಷದ ಬಳಿಕ ಮತ್ತೊಮ್ಮೆ ಬಿಗ್ ಸ್ಕ್ರೀನ್ ನಲ್ಲಿ ಸಿನಿಮಾ ತೆರೆ ಕಾಣಲಿದೆ. ಈ ಬಾರಿ ಹಾಲಿವುಡ್ ರಂಗದಲ್ಲಿ ಎನ್ನುವುದು ವಿಶೇಷ.
ಜೀತು ಜೋಸೆಫ್ ನಿರ್ದೇಶನದ ʼದೃಶ್ಯಂʼ ಸಿನಿಮಾದ ಸೀಕ್ವೆಲ್ ಕೂಡ ರಿಲೀಸ್ ಆಗಿತ್ತು. ಮೋಹನ್ ಲಾಲ್, ಮೀನಾ, ಅನ್ಸಿಬಾ ಹಾಸನ್ ಮತ್ತು ಎಸ್ತರ್ ಅನಿಲ್ ಮುಂತಾದವರು ಕಾಣಿಸಿಕೊಂಡಿದ್ದರು.
ಹಾಲಿವುಡ್ ನಲ್ಲಿ ಸಿನಿಮಾ ರಿಮೇಕ್ ಆಗಲು ಸಿದ್ದವಾಗುತ್ತಿದೆ. ಇದು ʼದೃಶ್ಯಂʼನ ಮೊದಲ ಅಂತಾರಾಷ್ಟ್ರೀಯ ರಿಮೇಕ್ ಅಲ್ಲ. ಈ ಹಿಂದೆ ಚೀನಾದಲ್ಲಿ ರಿಮೇಕ್ ಆಗಿ ಅಲ್ಲಿನ ಸಿನಿವಲಯದಲ್ಲಿ ಸಖತ್ ಸದ್ದು ಮಾಡಿತ್ತು. ಇದಲ್ಲದೆ ಈಗಾಗಲೇ ಸಿನಿಮಾ ಕೊರಿಯನ್ ಭಾಷೆಯಲ್ಲೂ ರಿಮೇಕ್ ಆಗಲಿದೆ ಎಂದು ನಿರ್ಮಾಪಕರಾದ ಕುಮಾರ್ ಮಂಗತ್ ಪಾಠಕ್ ಮತ್ತು ಅಭಿಷೇಕ್ ಪಾಠಕ್ 2023 ರಲ್ಗಲಿ ಅನೌನ್ಸ್ ಮಾಡಿದ್ದರು.
“ಪನೋರಮಾ ಸ್ಟುಡಿಯೋಸ್ ಗಲ್ಫ್‌ಸ್ಟ್ರೀಮ್ ಪಿಕ್ಚರ್ಸ್ ಮತ್ತು JOAT ಫಿಲ್ಮ್‌ಗಳೊಂದಿಗೆ ಸಹಯೋಗದೊಂದಿಗೆ ʼದೃಶ್ಯಂʼ ಸಿನಿಮಾ ಹಾಲಿವುಡ್ ನಲ್ಲಿ ರಿಮೇಕ್ ಆಗಿ ಬರಲು ಸಿದ್ದವಾಗುತ್ತಿದೆ ಎಂದು ವರದಿ ಆಗಿದೆ.
ಹಾಲಿವುಡ್ ರಿಮೇಕ್ ನಲ್ಲಿ ಸಿನಿಮಾ ಬಂದರೆ ʼದೃಶ್ಯಂʼ ಭಾರತದ ಮೊದಲ ‘ಪ್ಯಾನ್-ವರ್ಲ್ಡ್ ಬ್ಲಾಕ್‌ಬಸ್ಟರ್’ ಆಗಲಿದೆ.