Advertisement

Malayalam Film Industry: ʼಅಮ್ಮʼ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಮೋಹನ್‌ ಲಾಲ್

04:23 PM Aug 27, 2024 | Team Udayavani |

ತಿರುವನಂತಪುರಂ: ಹೇಮಾ ಸಮಿತಿ ವರದಿ ಮಾಲಿವುಡ್‌ ಸಿನಿರಂಗದಲ್ಲಿ ಸಂಚಲನ ಸೃಷ್ಟಿಸಿದೆ. ಒಂದೊಂದೇ ಕಿರುಕುಳ ಪ್ರಕರಣ ಬೆಳಕಿಗೆ ಬರುತ್ತಿದೆ.

Advertisement

ನಟಿಯೊಬ್ಬರು ಲೈಂಗಿಕ ಕಿರುಕುಳ ಆರೋಪ ಮಾಡಿದ ಬೆನ್ನಲ್ಲೇ ಮಲಯಾಳಂ ಚಲನಚಿತ್ರ ಕಲಾವಿದರ ಸಂಘದ (Malayalam Movie Artistes) ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ನಟ ಸಿದ್ದೀಕ್‌ ಅವರು ರಾಜೀನಾಮೆ ಸಲ್ಲಿಸಿದ್ದರು. ನಟ ಸಿದ್ದೀಕ್ ಅವರ ರಾಜೀನಾಮೆ ಬಳಿಕ ಅವರ ಸ್ಥಾನಕ್ಕೆ ಜಗದೀಶ್ ಅವರನ್ನು ಪರಿಗಣಿಸಲಾಗಿತ್ತು.

17 ಸದಸ್ಯರ ಕಾರ್ಯಕಾರಿ ಸಮಿತಿಯ ಅಧ್ಯಕ್ಷರಾಗಿದ್ದ ಮೋಹನ್ ಲಾಲ್‌ ಅವರು ರಾಜೀನಾಮೆಯನ್ನು ಸಲ್ಲಿಸಿ ತಮ್ಮ ಸ್ಥಾನದಿಂದ ಕೆಳಗೆ ಇಳಿದಿದ್ದಾರೆ. ಕಾರ್ಯಕಾರಿ ಸಮಿತಿಯ ಎಲ್ಲ ಸದಸ್ಯರು ಜಂಟಿಯಾಗಿ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: Actress: “ನಾನು 3 ವರ್ಷದಿಂದ ಸೆ**ಕ್ಸ್‌ ಮಾಡಿಲ್ಲ, ಕಿಸ್‌ ಮಾಡಿಲ್ಲ..” ಎಂದ ಖ್ಯಾತ ನಟಿ.!

“ಸಮಿತಿಯ ಕೆಲ ಸದಸ್ಯರ ವಿರುದ್ಧ ಕೆಲವು ನಟಿಯರು ಮಾಡಿರುವ ಆರೋಪಗಳ ಹಿನ್ನೆಲೆಯಲ್ಲಿ ನೈತಿಕ ಆಧಾರದ ಮೇಲೆ ಕಾರ್ಯಕಾರಿ ಸಮಿತಿಯನ್ನು ವಿಸರ್ಜಿಸಲು ʼಅಮ್ಮʼ ನಿರ್ಧರಿಸಿದೆ. ಎರಡು ತಿಂಗಳೊಳಗೆ ಚುನಾವಣೆ ನಡೆದು ಹೊಸ ಸಮಿತಿ ರಚನೆಯಾಗಲಿದೆ” ಎಂದು ಪ್ರಕಟಣೆಯಲ್ಲಿ ʼಅಮ್ಮʼ ತಿಳಿಸಿದೆ.

Advertisement

ಮಲಯಾಳಂ ನಿರ್ದೇಶಕ ರಂಜಿತ್ (Malayalam director Ranjith), ನಟ ರಿಯಾಜ್‌ ಖಾನ್‌ (Riyaz Khan), ನಟ ಮುಕೇಶ್‌, ಮಣಿಯನ್ ಪಿಳ್ಳ ರಾಜು, ನಟ ಜಯಸೂರ್ಯ, ಚಂದ್ರಶೇಖರನ್ ಸೇರಿದಂತೆ ಹಲವು ಕಲಾವಿದರ ಮೇಲೆ ಕೆಲ ನಟಿಯರು ಅಸಭ್ಯ ವರ್ತನೆ ಹಾಗೂ ಲೈಂಗಿಕ ಕಿರುಕುಳದ ಆರೋಪವನ್ನು ಮಾಡಿದ್ದಾರೆ.

ತನಿಖೆಗೆ ಎಸ್‌ಐಟಿ ರಚನೆ: ಸಿಎಂ ಪಿಣರಾಯಿ ಚಿತ್ರ ನಟಿಯರು ತಮ್ಮ ವಿರುದ್ಧ ನಡೆದಿದ್ದ ಲೈಂಗಿಕ ದೌರ್ಜನ್ಯದ ವಿವರಗಳನ್ನು ಬಹಿರಂಗಪಡಿಸುತ್ತಲೇ ಅದರ ಬಗ್ಗೆ ತನಿಖೆ ನಡೆಸಲು ಕೇರಳ ಸರಕಾರ ಎಸ್‌ಐಟಿ ರಚಿಸಿದೆ.

ಸಿಎಂ ಪಿಣರಾಯಿ ವಿಜಯನ್‌ ನೇತೃತ್ವದಲ್ಲಿ ರವಿವಾರ ನಡೆದ ಹಿರಿಯ ಪೊಲೀಸ್‌ ಅಧಿಕಾರಿಗಳ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಹಿರಿಯ ಐಪಿಎಸ್‌ ಅಧಿಕಾರಿ ಸ್ಪರ್ಜನ್‌ ಕುಮಾರ್‌ ಅವರು ಸಮಿತಿಯ ನೇತೃತ್ವ ವಹಿಸಲಿದ್ದಾರೆ. ಒಟ್ಟು 7 ಮಂದಿಯ ಈ ಸಮಿತಿಯಲ್ಲಿ ಮಹಿಳಾ ಪೊಲೀಸ್‌ ಅಧಿಕಾರಿಗಳೂ ಇರಲಿದ್ದಾರೆ ಎಂದು ಪಿಣರಾಯಿ ವಿಜಯನ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next