Advertisement

Mohan Majhi: ಒಡಿಶಾದ ನೂತನ ಮುಖ್ಯಮಂತ್ರಿಯಾಗಿ ಮೋಹನ್ ಚರಣ್ ಮಾಝಿ ಪ್ರಮಾಣ ವಚನ ಸ್ವೀಕಾರ

05:41 PM Jun 12, 2024 | Team Udayavani |

ಒಡಿಶಾ: ಭಾರತೀಯ ಜನತಾ ಪಕ್ಷದ ನಾಯಕ ಮೋಹನ್ ಚರಣ್ ಮಾಝಿ ಅವರು ಒಡಿಶಾದ ಮುಖ್ಯಮಂತ್ರಿಯಾಗಿ ಬುಧವಾರ ಪ್ರಮಾಣ ವಚನ ಸ್ವೀಕರಿಸಿದರು,

Advertisement

ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಯ ಇತರ ಹಲವು ಪ್ರಮುಖ ನಾಯಕರ ಸಮ್ಮುಖದಲ್ಲಿ ಒಡಿಶಾ ರಾಜ್ಯಪಾಲ ರಘುಬರ್ ದಾಸ್ ಅವರು ಮೋಹನ್ ಚರಣ್ ಮಾಝಿ ಅವರಿಗೆ ಪ್ರಮಾಣ ವಚನ ಬೋಧಿಸಿದರು.

ಕರಾವಳಿ ರಾಜ್ಯದಲ್ಲಿ ಆಡಳಿತ ಪಕ್ಷವಾಗಿ ಬಿಜು ಜನತಾ ದಳದ 24 ವರ್ಷಗಳ ಆಡಳಿತವನ್ನು ಅಂತ್ಯಗೊಳಿಸುವ ಮೂಲಕ ಒಡಿಶಾ ಸಿಎಂ ಆದ ಮೊದಲ ಬಿಜೆಪಿ ನಾಯಕರಾಗಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೂಡ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಜೊತೆಗೆ ಕನಕ ವರ್ಧನ್ ಸಿಂಗ್ ದೇವ್ ಮತ್ತು ಪ್ರವತಿ ಪರಿದಾ ಒಡಿಶಾದ ಉಪಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದರು.

Advertisement

ಈ ವೇಳೆ ಸುರೇಶ್, ನಿತ್ಯಾನಂದ ಗೊಂಡ್, ರಬಿನಾರಾಯಣ ನಾಯ್ಕ್, ಕೃಷ್ಣ ಚಂದ್ರ ಪಾತ್ರ, ಮುಖೇಶ್ ಮಹಾಲಿಂಗ್, ಪೃಥ್ವಿರಾಜ್ ಹರಿಚಂದನ್, ಬಿಭೂತಿ ಭೂಷಣ್ ಜೆನಾ, ಕೃಷ್ಣ ಚಂದ್ರ ಮಹಾಪಾತ್ರ ಸೇರಿದಂತೆ ಎಂಟು ಬಿಜೆಪಿ ಶಾಸಕರು ಕೂಡ ಮಾಝಿ ಕ್ಯಾಬಿನೆಟ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಮಾಝಿ ಕಿಯೋಂಜಾರ್ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಡಿಯ ಮಿನಾ ಮಾಝಿ ವಿರುದ್ಧ ಸುಮಾರು 87,815 ಮತಗಳ ಅಂತರದಿಂದ ಜಯಗಳಿಸಿದ್ದಾರೆ. ಅವರು 2000 ರಲ್ಲಿ ಮೊದಲ ಬಾರಿಗೆ ಶಾಸಕರಾದರು ಮತ್ತು ನಂತರ 2004 ಮತ್ತು 2019 ರಲ್ಲಿ ಎರಡು ಬಾರಿ ಶಾಸಕರಾಗಿ ಆಯ್ಕೆಯಾದರು.

ಮಾಝಿ ಅವರು ಬಿಜೆಪಿಯ ರಾಜ್ಯ ಬುಡಕಟ್ಟು ಸಮಿತಿಯ ಕಾರ್ಯದರ್ಶಿಯಾಗಿ ಮತ್ತು ಬಿಜೆಪಿ ರಾಜ್ಯ ಎಸ್‌ಟಿ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.

ಇದನ್ನೂ ಓದಿ: Mangaluru: ಇಬ್ಬರು ಮುಸ್ಲಿಂ ಯುವಕರ ಜೊತೆ ಹಿಂದೂ ಯುವತಿ; ಮೂವರು ಪೊಲೀಸ್‌ ವಶಕ್ಕೆ

Advertisement

Udayavani is now on Telegram. Click here to join our channel and stay updated with the latest news.

Next