Advertisement

ಮೊಹಮ್ಮದ್‌ ಕೊಡುಗೆ ಅನನ್ಯ: ಬಿ.ಎಸ್‌. ಯಡಿಯೂರಪ್ಪ

12:47 AM Oct 29, 2022 | Team Udayavani |

ಮಂಗಳೂರು: ಚಿತ್ರಕಲೆಯನ್ನು ಯುವಜನಾಂಗಕ್ಕೆ ಧಾರೆಯೆರೆದ ಶ್ರೇಷ್ಠ ಕಲಾವಿದರಲ್ಲಿ ಓರ್ವರಾಗಿರುವ ಬಿ.ಜಿ. ಮೊಹಮ್ಮದ್‌ ಅವರು ಈ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಅನನ್ಯವಾದುದು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೇಳಿದ್ದಾರೆ.

Advertisement

ನಗರದ ಕುದ್ಮುಲ್ ರಂಗರಾವ್‌ ಪುರಭವನದಲ್ಲಿ ಶುಕ್ರವಾರ ಬಿ.ಜಿ. ಮೊಹಮ್ಮದ್‌ ಅವರ ಜನ್ಮ ಶತಮಾನೋತ್ಸವ ಸಮಾರಂಭ ಮತ್ತು ಚಿತ್ರಕಲಾ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶ್ರೇಷ್ಠ ಚಿತ್ರಕಲಾವಿದ ಬಿ.ಜಿ.ಮೊಹಮ್ಮದ್‌ ಅವರ ಜನ್ಮ ಶತಮಾನೋತ್ಸವದಲ್ಲಿ ಭಾಗವಹಿಸುತ್ತಿರುವುದು ನನಗೆ ಅತೀವ ಸಂತಸ ತಂದಿದೆ. ಅವರ ಗೌರ ವಾರ್ಥ ಅಂಚೆ ಇಲಾಖೆ ವಿಶೇಷ ಲಕೋಟೆ ಬಿಡುಗಡೆ ಮಾಡು ತ್ತಿರು ವುದು ಹೆಮ್ಮೆಯ ಸಂಗತಿ ಎಂದರು.

ಸ್ಮರಣಸಂಚಿಕೆಯನ್ನು ಬಿಡುಗಡೆ ಗೊಳಿಸಿದ ಮಂಗಳೂರು ವಿ.ವಿ. ಕುಲಪತಿ ಪ್ರೊ| ಪಿ.ಎಸ್‌. ಯಡಪಡಿ ತ್ತಾಯ ಮಾತನಾಡಿ ಚಿತ್ರಕಲಾವಿದ ರಾಗಿ ಅಪೂರ್ವ ಕಲಾಕೃತಿಗಳನ್ನು ನೀಡಿರುವ, ಅಸಂಖ್ಯಾಕ ಚಿತ್ರ ಕಲಾ ವಿದರನ್ನು ರೂಪಿಸಿದ ಮೊಹಮ್ಮದ್‌ ಉನ್ನತ ಸಾಧಕ ಎಂದರು.

ಕರ್ನಾಟಕ ವೃತ್ತದ ಮುಖ್ಯ ಪೋಸ್ಟ್‌ ಮಾಸ್ಟರ್‌ ಜನರಲ್‌ ಎಸ್‌.ರಾಜೇಂದ್ರ ಕುಮಾರ್‌ ವಿಶೇಷ ಅಂಚೆ ಲಕೋಟೆ ಬಿಡುಗಡೆ ಮಾಡಿದರು. ಶಾಸಕ ವೇದವ್ಯಾಸ ಕಾಮತ್‌, ವಿಧಾನ ಪರಿಷತ್‌ ಸದಸ್ಯರಾದ ಪ್ರತಾಪಸಿಂಹ ನಾಯಕ್‌, ಭಾರತಿ ಶೆಟ್ಟಿ, ಮೇಯರ್‌ ಜಯಾನಂದ ಅಂಚನ್‌ ಉಪಸ್ಥಿತರಿದ್ದರು.

ಜನ್ಮಶತಮಾನೋತ್ಸವ ಸಮಾ ರಂಭ ಸಮಿತಿ ಅಧ್ಯಕ್ಷ ಕೋಟಿ ಪ್ರಸಾದ್‌ ಆಳ್ವ, ಬಿ.ಜಿ.ಮಹಮ್ಮದ್‌ ಅವರ ಪುತ್ರರಾದ ಶಬ್ಬೀರ್‌ ಅಲಿ, ಶಮೀರ್‌ ಅಲಿ ಉಪಸ್ಥಿತರಿದ್ದರು. ಸಮಿತಿ ಕಾರ್ಯದರ್ಶಿ ಗಣೇಶ್‌ ಸೋಮ ಯಾಜಿ ಸ್ವಾಗತಿಸಿದರು. ಪ್ರೊ| ಅನಂತ ಪದ್ಮನಾಭ ರಾವ್‌ ಪ್ರಸ್ತಾವಿಸಿದರು.

Advertisement

ಕಾರ್ಯಕ್ರಮ ಮೂರು ದಿನಗಳ ಕಾಲ ನಡೆಯಲಿದ್ದು ಅ.29ರಂದು ಬೆಳಗ್ಗೆ 10.30ಕ್ಕೆ 10 ವರ್ಷದ ಒಳಗಿನ ಮಕ್ಕಳ ಚಿತ್ರಕಲಾಸ್ಪರ್ಧೆ, ಸಂಜೆ 4ಕ್ಕೆ ಚಿತ್ರಕಲಾ ಪ್ರಾತ್ಯಕ್ಷಿಕೆ, ಅ.30ರಂದು ಬೆಳಗ್ಗೆ 10ರಿಂದ ಆಶು ಚಿತ್ರರಚನೆ, ಸಂಜೆ ಚಿತ್ರಕಲಾ ಪ್ರಾತ್ಯಕ್ಷಿಕೆ ಹಾಗೂ ಸಮ್ಮಾನ ನಡೆಯಲಿದೆ.

ಯುವಜನಾಂಗಕ್ಕೆ ಪ್ರೇರಣೆಯಾಗಲಿ
ರಾಜ್ಯೋತ್ಸವ ಪುರಸ್ಕೃತ ಬಿ.ಜಿ.ಮೊಹಮ್ಮದ್‌ ಅವರ ಜನ್ಮಶತಮಾನೋತ್ಸ ವವನ್ನು ಆಚರಿಸುತ್ತಿರುವುದು ಅಭಿನಂದನೀಯ. ಅವರ ಚಿತ್ರಕಲೆಯ ಸಾಧನೆ, ಪ್ರೇರಣೆ ಯುವಜನಾಂಗಕ್ಕೆ ಸ್ಪೂರ್ತಿಯಾಗಲಿ,ಇನ್ನಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಚಿತ್ರ ಕಲಾವಿದರು ಮೂಡಿಬರಲಿ ಎಂದು ಯಡಿಯೂರಪ್ಪ ಹಾರೈಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next