Advertisement

ಮನೆ ಎದುರು ಮೂರ್ಛೆ ಹೋಗಿದ್ದ ವಲಸೆ ಕಾರ್ಮಿಕನಿಗೆ ಶಮಿ ನೆರವು

04:21 PM Apr 17, 2020 | keerthan |

ಲಕ್ನೋ: ಕೊರೊನಾ ವೈರಸ್‌ ಹೊಡೆತದಿಂದ ದೇಶಾದ್ಯಂತ ಜನ ತತ್ತರಿಸಿದ್ದಾರೆ. ಅದರಲ್ಲೂ ವಲಸೆ ಕಾರ್ಮಿಕರು ಒಪ್ಪತ್ತಿನ ಊಟಕ್ಕೂ ದಿನನಿತ್ಯ ಹರಸಾಹಸ ಮಾಡಬೇಕಾಗಿ ಬಂದಿದೆ. ಇಂತಹ ವಲಸೆ ಕಾರ್ಮಿಕರಿಗೆ ಕ್ರಿಕೆಟಿಗ ಮೊಹಮ್ಮದ್‌ ಶಮಿ ನೆರವು ನೀಡಿ ರಕ್ಷಿಸಿದ್ದಾರೆ. ಇನ್ಸಾಗ್ರಾಂ ಚಾಟ್‌ ನಲ್ಲಿ ಸ್ವತಃ ಮೊಹಮ್ಮದ್‌ ಶಮಿ ಸ್ಪಿನ್ನರ್‌ ಯಜುವೇಂದ್ರ ಚಹಲ್‌ ಜತೆಗೆ ಈ ಘಟನೆಯನ್ನು ಹೇಳಿಕೊಂಡಿದ್ದಾರೆ.

Advertisement

ಹೇಗಾಯಿತು? “ವಲಸೆ ಕಾರ್ಮಿಕನೊಬ್ಬ ಹಸಿನಿವಿನಿಂದ ಬಳಲಿ ಲಕ್ನೋದ ಹೈವೇ ಬದಿಯಲ್ಲಿರುವ ನನ್ನ ಮನೆ ಸಮೀಪ ಕುಸಿದು ಬಿದ್ದಿದ್ದ. ಆತನಿಗೆ ಊಟ, ನೀರು ನೀಡಿ ಉಪಚರಿಸಿದೆ. ಆತ ಚೇತರಿಸಿಕೊಂಡ ಬಳಿಕ ತನ್ನ ಬಗೆಗಿನ ಮಾಹಿತಿಯನ್ನು ನೀಡಿದ.

ಆತ ಲಾಕ್ ‌ಡೌನ್‌ನಿಂದಾಗಿ ಕೆಲಸವಿಲ್ಲದೆ ಕಷ್ಟಕ್ಕೆ ಸಿಲುಕಿದ್ದ, ರಾಜಸ್ಥಾನದಿಂದ ಕಾಲ್ನಡಿಗೆಯಲ್ಲೇ ತನ್ನೂರು ಬಿಹಾರಕ್ಕೆ ಹೊರಟಿದ್ದ, ಲಕ್ನೋದಿಂದ ಬಿಹಾರಕ್ಕೆ ಭಾರೀ ಅಂತರದ ದೂರವಿದೆ. ನಡೆದು ಸುಸ್ತಾಗಿ ನನ್ನ ಮನೆಯ ಹತ್ತಿರ ಬಿದ್ದದ್ದನ್ನು ನಾನು ಸಿಸಿಟಿವಿಯಲ್ಲಿ ನೋಡಿದ್ದೆ, ಇಂತಹ ನೂರಾರು ಕಾರ್ಮಿಕರು ದಿನನಿತ್ಯ ನಡೆದುಕೊಂಡೇ ಹೋಗುವುದನ್ನು ನಾನು ನೋಡಿದ್ದೇನೆ. ಇಂತಹ ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡಲು ನನ್ನಿಂದಾದ ಪ್ರಯತ್ನ ಮಾಡುತ್ತಿದ್ದೇನೆ. ಅವರ ಪರಿಸ್ಥಿತಿ ಕಂಡು ಮನಸ್ಸು ಕರಗಿದೆ’ ಎಂದು ಶಮಿ ಹೇಳಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next