ಲಂಡನ್: ಪಾಕಿಸ್ತಾನದ ಮಾಜಿ ವೇಗಿ ಮೊಹಮ್ಮದ್ ಆಮಿರ್ ಅವರು ಮುಂದಿನ ವರ್ಷದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಆಡುತ್ತಾರೆಯೇ? ಈ ಬಗ್ಗೆ ಹಲವಾರು ಸುದ್ದಿಗಳು ಹರಿದಾಡುತ್ತಿದೆ. ಈ ಬಗ್ಗೆ ಆಮಿರ್ ಅವರೇ ಹೇಳಿಕೊಂಡಿದ್ದಾರೆ.
ಪಾಕಿಸ್ತಾನದ ಆಮಿರ್ ಅವರು ಮುಂದಿನ ವರ್ಷದ ಬ್ರಿಟಿಷ್ ಪಾಸ್ಪೋರ್ಟ್ ಪಡೆಯಲಿದ್ದಾರೆ. ಆಮಿರ್ ಅವರು 2016 ರಲ್ಲಿ ಬ್ರಿಟಿಷ್ ಪ್ರಜೆ ಮತ್ತು ವಕೀಲರಾದ ನರ್ಜಿಸ್ ಖಾನ್ ಅವರನ್ನು ವಿವಾಹವಾದರು. ಅಲ್ಲದೆ 2020 ರಲ್ಲಿ ಇಂಗ್ಲೆಂಡ್ ಗೆ ಹೋಗಿ ನೆಲೆಸಿದರು. ಅವರು ಈಗ ಕೇವಲ ಒಂದು ವರ್ಷದಲ್ಲಿ ತಮ್ಮ ಬ್ರಿಟಿಷ್ ಪಾಸ್‌ಪೋರ್ಟ್ ಸ್ವೀಕರಿಸಲಿದ್ದಾರೆ.
“ಇನ್ನೂ ಒಂದು ವರ್ಷವಿದೆ. ಆಗ ಯಾವ ಪರಿಸ್ಥಿತಿ ಇರುತ್ತದೆ ಎಂದು ನನಗೆ ಗೊತ್ತಿಲ್ಲ. ನಾನು ಯಾವಾಗಲೂ ಒಂದು ಒಂದು ಹೆಜ್ಜೆ ಇಡುತ್ತೇನೆ. ಒಂದು ವರ್ಷದ ನಂತರ ನಾನು ಎಲ್ಲಿರುತ್ತೇನೆ ಎಂದು ನನಗೆ ತಿಳಿದಿಲ್ಲ. ಭವಿಷ್ಯ ಯಾರಿಗೂ ತಿಳಿದಿಲ್ಲ. ನಾನು ಪಾಸ್‌ಪೋರ್ಟ್ ಪಡೆದಾಗ, ನನಗೆ ಸಿಗುವ ಉತ್ತಮ ಅವಕಾಶವನ್ನು ನಾನು ಖಂಡಿತವಾಗಿ ಬಳಸಿಕೊಳ್ಳುತ್ತೇನೆ” ಎಂದು ಆಮಿರ್ ಹೇಳಿದರು.
ಇದನ್ನೂ ಓದಿ:Maharashtra Politics: ಮುಂಬೈನಲ್ಲಿ ಹೊಸ ಕಚೇರಿ ತೆರೆದ ಅಜಿತ್ ಪವಾರ್ ಬಣದ ಎನ್ ಸಿಪಿ
“ನಾನು ಇಂಗ್ಲೆಂಡ್ ಗಾಗಿ ಆಡುವುದಿಲ್ಲ, ನಾನು ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಆಡಿದ್ದೇನೆ, ನಾನು ಏನು ಆಡಬೇಕಿದ್ದರೂ ಅದು ಪಾಕಿಸ್ತಾನಕ್ಕಾಗಿ ಮಾತ್ರ” ಎಂದು ಅವರು ಹೇಳಿದರು.
2008 ರ ಉದ್ಘಾಟನಾ ಋತುವಿನಲ್ಲಿ ಪಾಕಿಸ್ತಾನಿ ಆಟಗಾರರು ಐಪಿಎಲ್ ನ ಭಾಗವಾಗಿದ್ದರು ಆದರೆ ಎರಡು ರಾಷ್ಟ್ರಗಳ ನಡುವಿನ ಹದಗೆಟ್ಟ ರಾಜಕೀಯ ಸಂಬಂಧಗಳ ಕಾರಣದಿಂದ ಪಾಕ್ ಆಟಗಾರರಿಗೆ ಐಪಿಎಲ್ ನಲ್ಲಿ ಭಾಗವಹಿಸುವಿಕೆಯನ್ನು ನಿಷೇಧಿಸಲಾಗಿದೆ.