Advertisement

ಉತ್ತಮ ಸಾಧನೆಗೆ ಕೋವಿಡ್‌ ಅಡ್ಡಿ: ಖಮರ್‌

09:05 AM Jun 01, 2021 | Team Udayavani |

ದುಬೈ: ಏಶ್ಯನ್‌ ಬಾಕ್ಸಿಂಗ್‌ ಚಾಂಪಿಯನ್‌ ಶಿಪ್‌ನಲ್ಲಿ ಭಾರತವ ವನಿತೆಯರು ಹತ್ತಕ್ಕೆ ಹತ್ತು ಪದಕ ಗೆದ್ದಿರಬಹುದು, ಆದರೆ ಕೋವಿಡ್‌ನಿಂದ ಅಭ್ಯಾಸಕ್ಕೆ ಅಡ್ಡಿಯಾಗದೇ ಇದ್ದಲ್ಲಿ ಇನ್ನೂ ಉತ್ತಮ ಫ‌ಲಿತಾಂಶ ಕಾಣಬಹುದಿತ್ತು ಎಂದು ರಾಷ್ಟ್ರೀಯ ಕೋಚ್‌ ಮೊಹಮ್ಮದ್‌ ಅಲಿ ಖಮರ್‌ ಅಭಿಪ್ರಾಯಪಟ್ಟಿದ್ದಾರೆ.

Advertisement

ಈ ಕೂಟದಲ್ಲಿ ಪಾಲ್ಗೊಂಡ ಭಾರತದ 10 ವನಿತೆಯರು ಒಟ್ಟು 10 ಪದಕ ಜಯಿಸಿದ್ದಾರೆ. ಆದರೆ ಚಿನ್ನ ಮಾತ್ರ ಒಂದೇ. ಉಳಿದಂತೆ 3 ಬೆಳ್ಳಿ, 6 ಕಂಚಿನ ಪದಕಗಳಾಗಿದ್ದವು. “ನಾವು ಇನ್ನೂ ಹೆಚ್ಚಿನ ಚಿನ್ನ ಗೆಲ್ಲಬಹುದಿತ್ತು. ಬೆಳ್ಳಿ ಗೆದ್ದವರು ಸೂಕ್ಷ್ಮ ಅಂತರದಲ್ಲಿ ಚಾಂಪಿಯನ್‌ ಪಟ್ಟದಿಂದ ವಂಚಿತರಾದರು. ಎಲ್ಲರೂ ಗರಿಷ್ಠ ಸಾಮರ್ಥ್ಯವನ್ನೇ ತೋರಿದರು. ಆದರೆ ಇನ್ನಷ್ಟು ಉತ್ತಮ ತರಬೇತಿ ದೊರೆತದ್ದೇ ಆದರೆ ನಮ್ಮವರಿಂದ ಇನ್ನೂ ಉತ್ತಮ ಪ್ರದರ್ಶನ ಹೊಮ್ಮುತ್ತಿತ್ತು. ಇದಕ್ಕೆ ಕೊರೊನಾ ನಿರ್ಬಂಧ ಎದುರಾಯಿತು’ ಎಂದು ಖಮರ್‌ ಹೇಳಿದರು.

ಇದನ್ನೂ ಓದಿ:ಸಿನಿಮಾ ಅವಕಾಶ ಹೆಸರಲ್ಲಿ ಸತತ ಅತ್ಯಾಚಾರ: ಬಾಲಿವುಡ್ ನ 9 ಮಂದಿಯ ವಿರುದ್ಧ ಮಾಡೆಲ್ ದೂರು

ವನಿತೆಯರ ಕೊನೆಯ ಪದಕ ಸ್ಪರ್ಧೆಯಲ್ಲಿ ಭಾರತದ ಅನುಪಮಾ (+81 ಕೆ.ಜಿ.) ಕೂಡ ಬೆಳ್ಳಿಗೆ ತೃಪ್ತಿಪಟ್ಟರು. ಹಾಲಿ ಚಾಂಪಿಯನ್‌ ಪೂಜಾ ರಾಣಿ ಮಾತ್ರ ಚಿನ್ನದ ಒಡತಿ ಎನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next