ಮುಂಬೈ: ಟೀಂ ಇಂಡಿಯಾದ ವೇಗದ ಬೌಲರ್ ಮೊಹಮ್ಮದ್ ಶಮಿ ಅವರು ಅಕ್ಟೋಬರ್ ನಲ್ಲಿ ನಡೆಯುವ ಟಿ20 ವಿಶ್ವಕಪ್ ನ ಪ್ರಸ್ತುತ ಯೋಜನೆಯ ಭಾಗವಾಗಿಲ್ಲ. ಆದರೆ ಮುಂದಿನ ವರ್ಷ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ನಲ್ಲಿ ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡಕ್ಕೆ ಉತ್ತಮ ಆಯ್ಕೆಯಾಗಬಹುದು ಎಂದು ಭಾರತದ ಮಾಜಿ ವೇಗಿ ಆಶಿಶ್ ನೆಹ್ರಾ ಅಭಿಪ್ರಾಯ ಪಟ್ಟಿದ್ದಾರೆ.
ಮೊಹಮ್ಮದ್ ಶಮಿ ಅವರು ಟೆಸ್ಟ್ ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಏಕೈಕ ಟೆಸ್ಟ್ ಪಂದ್ಯದ ಭಾಗವಾಗಿದ್ದಾರೆ. ವಿಶೇಷವೆಂದರೆ 31 ವರ್ಷದ ವೇಗಿ ಶಮಿ 2021 ರ ಟಿ20 ವಿಶ್ವಕಪ್‌ನಲ್ಲಿ ನಮೀಬಿಯಾ ವಿರುದ್ಧ ತಮ್ಮ ಅಂತಿಮ ಅಂತಾರಾಷ್ಟ್ರೀಯ ಟಿ20 ಪಂದ್ಯವಾಡಿದ್ದರು. ಬಳಿಕ ಭಾರತ ತಂಡದ ಪರ ಯಾವುದೇ ಟಿ20 ಪಂದ್ಯದಲ್ಲಿ ಶಮಿ ಆಡಿಲ್ಲ.
ಇದನ್ನೂ ಓದಿ:‘ಮೇಡ್ ಇನ್ ಚೈನಾ’ ಚಿತ್ರ ವಿಮರ್ಶೆ: ವರ್ಚುವಲ್ ನಲ್ಲಿ ಹೊಸ ಅನುಭವ
“ಟಿ20 ವಿಶ್ವಕಪ್ ಗಾಗಿ ಭಾರತ ತಂಡ ಸದ್ಯದ ಯೋಜನೆಯಲ್ಲಿ ಅವರು ಕಾಣಿಸಿಕೊಂಡಿಲ್ಲ ಎಂದು ತೋರುತ್ತಿದೆ. ಆದರೆ ಅವರ ಸಾಮರ್ಥ್ಯಗಳ ಬಗ್ಗೆ ನಮಗೆಲ್ಲರಿಗೂ ತಿಳಿದಿದೆ. ಅವರು ಈ ವರ್ಷದ ಟಿ 20 ವಿಶ್ವಕಪ್‌ನಲ್ಲಿ ಆಡದಿದ್ದರೂ, ಭಾರತವು ಖಂಡಿತವಾಗಿಯೂ ಅವರನ್ನು 2023 ರ ಏಕದಿನ ವಿಶ್ವಕಪ್ ಗೆ ಪರಿಗಣಿಸುತ್ತದೆ. ಐಪಿಎಲ್ ನಂತರ ಶಮಿ ವಿಶ್ರಾಂತಿಯಲ್ಲಿದ್ದಾರೆ. ಟೆಸ್ಟ್ ಪಂದ್ಯದ ನಂತರ ಇಂಗ್ಲೆಂಡ್ ನಲ್ಲಿ ಏಕದಿನ ಸರಣಿಯಲ್ಲಿ ಅವರು ಆಡಬಹುದು” ಎಂದು ನೆಹ್ರಾ ಕ್ರಿಕ್‌ಬಜ್ ಗೆ ತಿಳಿಸಿದರು.