ಲಂಡನ್: ಪಾಕಿಸ್ಥಾನದ ಮಾಜಿ ವೇಗಿ ಮೊಹಮ್ಮದ್ ಆಮಿರ್ ಕೆಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಬಾಲ್ ಹಾಕಲು ಕಷ್ಟವಾದ ಬ್ಯಾಟ್ಸಮನ್ ಮುಂತಾದ ಕುರಿತು ಆಮಿರ್ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬೌಲಿಂಗ್ ಮಾಡಲು ಕಷ್ಟವಾಗುವ ಬ್ಯಾಟ್ಸಮನ್ ಯಾರು ಎಂಬ ಪ್ರಶ್ನೆಗೆ ಆಮಿರ್, ಆಸೀಸ್ ಆಟಗಾರ ಸ್ಟೀವ್ ಸ್ಮಿತ್ ಹೆಸರು ಸೂಚಿಸಿದ್ದಾರೆ. ಈ ಕಾಲದಲ್ಲಿ ಸ್ಟೀವ್ ಸ್ಮಿತ್ ಗೆ ಬಾಲ್ ಹಾಕುವುದು ತುಂಬಾ ಕಷ್ಟದ ಕೆಲಸ. ಆತ ನಿಲ್ಲುವ ಶೈಲಿಯಿಂದ ಕಷ್ಟ ಎನ್ನುತ್ತಾರೆ ಆಮಿರ್.
ಇದನ್ನೂ ಓದಿ:‘ಭಗವಂತ ನಿಮಗೆ ಒಳ್ಳೆಯದನ್ನು ಮಾಡಲಿ’ : ಉಪ್ಪಿ ಗೆ ಹಿರಿಯ ನಟ ಉಮೇಶ್ ಹಾರೈಕೆ
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬಗ್ಗೆ ಮಾತನಾಡಿರುವ ಆಮಿರ್, ವಿರಾಟ್ ತಾನೂ ಕಿಂಗ್ ಕೊಹ್ಲಿ ಯಾಕೆಂದು ಮೂರು ಮಾದರಿಯಲ್ಲೂ ತೋರಿಸಿಕೊಟ್ಟಿದ್ದಾರೆ. ಅವರು ಒತ್ತಡದ ಪರಿಸ್ಥಿತಿಯನ್ನು ಇಷ್ಟಪಡುತ್ತಾರೆ. ವೈಯಕ್ತಿಕವಾಗಿ ನಾನು ಅವರಿಗೆ ಬಾಲ್ ಹಾಕಲು ಇಷ್ಟಪಡುತ್ತೇನೆ ಎಂದು ಆಮಿರ್ ಹೇಳಿದ್ದಾರೆ.
ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾಗೆ ಬಾಲ್ ಹಾಕುವ ಬಗ್ಗೆ ಮಾತನಾಡಿದ ಆಮಿರ್, ಇಬ್ಬರಿಗೂ ಬೌಲಿಂಗ್ ಮಾಡಲು ಇಷ್ಟ. ಆದರೆ ವಿರಾಟ್ ಕೊಹ್ಲಿಗಿಂತ ರೋಹಿತ್ ಶರ್ಮಾಗೆ ಬೌಲಿಂಗ್ ಹಾಕಲು ಸುಲಭ ಎಂದಿದ್ದಾರೆ.