Advertisement
ಅದೇ ರೀತಿ ಕ್ರೀಡಾ ಕ್ಷೇತ್ರದ ಸಾಧಕ ಕಮಲಾಕ್ಷ ಅಮೀನ್ ಬೋಳಾರ, ವೈದ್ಯಕೀಯ ಕ್ಷೇತ್ರದಲ್ಲಿ ಡಾ| ಭರತ್‌ರಾಜ್ ಬೊಕ್ಕಪಟ್ಣ ಹಾಗೂ ಮೀನುಗಾರಿಕಾ ಕ್ಷೇತ್ರದ ಸಾಧಕ ರಘುನಾಥ್ ಎಸ್. ಪುತ್ರನ್ ಇವರು ನೇಮಕಗೊಂಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಮೊಗವೀರ ಯುವ ವೇದಿಕೆಯ ವತಿಯಿಂದ ಮೊಗವೀರ ಕುಲಗುರು ಮಾಧವ ಮಂಗಳ ಪೂಜರಾರ ಸವಿನೆನಪಿಗಾಗಿ ಮೊಗವೀರ ಸಾಧನಾ ಪ್ರಶಸ್ತಿಯನ್ನು ಪ್ರತೀ ವರ್ಷ ನೀಡಲಾಗುತ್ತದೆ. ಪ್ರಶಸ್ತಿ ಪ್ರಧಾನ ಸಮಾರಂಭವು ಮಾ. 11 ರಂದು ಸಂಜೆ 6 ರಿಂದ ಬಂಟರ ಭವನ ಸುರತ್ಕಲ್ ಇಲ್ಲಿ ನಡೆಯಲಿದೆ.
ಇವರ ಹಲವಾರು ಶಿಷ್ಯೆಯಂದಿರು ವಿದೇಶದಲ್ಲಿ ನೆಲೆಸಿ ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ಭರತನಾಟ್ಯವನ್ನು ವಿದೇಶಿಯರಿಗೆ ಕಲಿಸಿಕೊಡುತ್ತಿದ್ದಾರೆ. ದೇಶದ ವಿವಿಧ ರಾಜ್ಯಗಳು ಸೇರಿದಂತೆ ವಿದೇಶಿ ನೆಲದಲ್ಲೂ ನೃತ್ಯ ರೂಪಕ ಸೇರಿದಂತೆ ವೈವಿಧ್ಯಮಯ ನೃತ್ಯ ಪ್ರಕಾರಗಳನ್ನು ಪ್ರದರ್ಶಿಸಿದ ಹೆಗ್ಗಳಿಕೆ ಡಾ| ಮೀನಾಕ್ಷೀ ರಾಜು ಶ್ರೀಯಾನ್ ಇವರದ್ದಾಗಿದೆ. ಮೀನಾಕ್ಷೀ ರಾಜು ಶ್ರೀಯಾನ್ ಇವರು ಉತ್ತಮ ಸಂಘಟಕಿಯಾಗಿಯೂ ಹೆಸರು ಮಾಡಿದವರು. ಅವರ ಸಿದ್ಧಿ-ಸಾಧನೆಗಳಿಗೆ ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರಶಸ್ತಿಗಳಲ್ಲದೆ, ವಿವಿಧ ಜಾತೀಯ, ತುಳು- ಕನ್ನಡಪರ ಸಂಘಟನೆಗಳ ಸಮ್ಮಾನ- ಪುರಸ್ಕಾರಗಳು ಲಭಿಸಿವೆ.
Related Articles
ಮುಂಬಯಿ ವಿಶ್ವ ವಿದ್ಯಾಲ ಯದ ಎಂ.ಎ, ಎಂ.ಫಿಲ್, ಪಿಎಚ್.ಡಿ ಪದವಿ ಪಡೆದಿರುವ ಜಿ. ಪಿ. ಕುಸುಮಾ ಅವರು ಕವಯತ್ರಿ, ಲೇಖಕಿ, ಅನು ವಾದಕಿ, ರಂಗನಟಿಯಾಗಿ ಮುಂಬಯಿ ಕನ್ನಡಿಗರ ಸಾಂಸ್ಕೃತಿಕ ಬದುಕಿನಲ್ಲಿ ಹಾಸು ಹೊಕ್ಕಾಗಿದ್ದಾರೆ. ತುಳು-ಕನ್ನಡ ಎರಡೂ ಭಾಷೆಯಲ್ಲಿ ಸಾಹಿತ್ಯ ಕೃಷಿ ಮಾಡುತ್ತಿರುವ ಇವರು ಮುಂಬಯಿಯ ಸಿಟಿ ಸಿವಿಲ್ ಮತ್ತು ಸೆಶನ್ ಕೋರ್ಟಿನಲ್ಲಿ ಉದ್ಯೋಗಿಯಾಗಿದ್ದಾರೆ. ಅಖೀಲ ಭಾರತ ಸಾಹಿತ್ಯ ಸಮ್ಮೇಳನವೂ ಸೇರಿದಂತೆ ಅನೇಕ ಸಂಘ-ಸಂಸ್ಥೆಗಳಲ್ಲಿ ತಮ್ಮ ಕವನ ಮತ್ತು ಪ್ರಬಂಧ ಮಂಡನೆಯನ್ನು ಮಾಡಿದ್ದಾರೆ. ಹಲವಾರು ಪ್ರಶಸ್ತಿ, ಪ್ರತಿಭಾ ಪುರಸ್ಕಾರ ಗಳನ್ನು ಪಡೆದುಕೊಂಡಿದ್ದಾರೆ.
Advertisement