Advertisement

ಮೊಗವೀರ ವ್ಯವಸ್ಥಾಪಕ ಮಂಡಳಿ ಮೀರಾ-ಭಾಯಂದರ್‌ : ಮನವಿ ಪತ್ರ ಬಿಡುಗಡೆ

09:11 PM Mar 30, 2019 | Team Udayavani |

ಮುಂಬಯಿ: ಸ್ವಾತಂತ್ರ್ಯ ಪೂರ್ವದಲ್ಲಿ ಧರ್ಮಾರ್ಥ ಮೊಗವೀರ ರಾತ್ರಿ ಶಾಲೆಯನ್ನು ಸ್ಥಾಪಿಸಿ ಸಂಪೂರ್ಣ ಸಾಕ್ಷರತೆಗಾಗಿ ಶ್ರಮಿಸಿದ 117 ಸಂವತ್ಸವರದ ಹಿರಿಯ ಸಂಸ್ಥೆ ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ ಇದು ಸಾಂಸ್ಕೃತಿಕ, ಸಾಮಾಜಿಕ, ಶೈಕ್ಷಣಿಕ, ಸಾಹಿತ್ಯಿಕ ಹಾಗೂ ಆರ್ಥಿಕ ಕ್ಷೇತ್ರಗಳ ಕಾರ್ಯ ಯೋಜನೆಗಳು ತಳಮಟ್ಟದ ಸ್ವಜಾತಿ ಬಾಂಧವರಿಗೆ ತಲುಪಲು ಅಲ್ಲಲ್ಲಿ ಶಾಖೆಗಳನ್ನು ತೆರೆದಿದೆ. ಇದರ ಮೀರಾ ಭಾಯಂದರ್‌ ಶಾಖೆಗೆ ಹಲವಾರು ಜನಪರ ಕಾರ್ಯಕ್ರಮಗಳನ್ನು ಆಯೋಜಿಸಲು ಸ್ವಂತ ಜಾಗದ ಆವಶ್ಯಕತೆ ಇದೆ. ಈ ಉನ್ನತ ಮಟ್ಟದ ಯೋಜನೆ ಸಾಕಾರಗೊಳ್ಳಲು ಪ್ರತಿಯೊಬ್ಬ ಸದಸ್ಯ ಕೈಜೋಡಿಸಬೇಕು ಎಂದು ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ ಮೀರಾ ಭಾಯಂದರ್‌ ಶಾಖೆಯ ಗೌರವ ಕಾರ್ಯದರ್ಶಿಯಾದ ಗಂಗಾಧರ ಎಸ್‌. ಬಂಗೇರ ವಿನಂತಿಸಿದರು.

Advertisement

ಮಾ. 24ರಂದು ಮೀರಾರೋಡು ಪೂರ್ವದ, ಭಾರತಿ ಪಾರ್ಕ್‌ ಸಮೀಪದ ಯೂನಿಟ್‌ ಕಟ್ಟಡದಲ್ಲಿರುವ ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ ಇದರ ಮೀರಾ-ಭಾಯಂದರ್‌ ಶಾಖೆಯ ಸ್ವಂತ ಜಾಗ ಖರೀದಿಯ ಮನವಿ ಪತ್ರದ ರೂಪುರೇಷೆಯ ಬಗ್ಗೆ ಮಾತನಾಡಿದ ಅವರು, 19ನೆಯ ಶತಮಾನದ ಆದಿಯಲ್ಲಿ ಸ್ಥಾಪನೆಗೊಂಡಿರುವ ಮುಂಬಯಿ ಮೊಗ

ವೀರ ವ್ಯವಸ್ಥಾಪಕ ಮಂಡಳಿ ತುಳುಕನ್ನಡಿಗರ ಒಂಟಿತನಕ್ಕೆ ಮಾತೃ ವಾತ್ಯಲ್ಯದ ಆರೈಕೆ ನೀಡಿ ಬೆಳೆಸಿದ ಮಹಾನ್‌ ಸಂಸ್ಥೆಯಾಗಿದೆ. ಮೊಗವೀರ ಕೋ ಆಪರೆಟೀವ್‌ ಬ್ಯಾಂಕಿನ ಮೂಲಕ ಮಾನವ ಸಂಪನ್ಮೂಲಗಳನ್ನು ಕ್ರೋಢೀಕರಿಸಿ ಸ್ವಾವಲಂಬಿ ಬದುಕಿಗೆ ಪ್ರಾಧಾನ್ಯ ನೀಡಿದೆ. ಮೊಗವೀರ ಪತ್ರಿಕೆಯ ಮುಖಾಂತರ ಆನೇಕ ಪ್ರತಿಭೆಗಳನ್ನು ಬೆಳಕಿಗೆ ತಂದಿದೆ. ಇವೆಲ್ಲ ಸಹೃದಯಿಗಳಾದ ತಮ್ಮರೆಲ್ಲರ ಅಪೂರ್ವ ಸಹಕಾರದಿಂದ ಸಾಧ್ಯವಾಯಿತು ಎಂದು ನುಡಿದು ಸಂತಸ‌ ವ್ಯಕ್ತಪಡಿಸಿದರು.

ಕಾರ್ಯಾಧ್ಯಕ್ಷ ಸುರೇಶ್‌ ಎಸ್‌. ಕುಂದರ್‌ ಅವರು ಮಾತನಾಡಿ, ಸಮಾಜದ ಹಿತ ದೃಷ್ಟಿಯಿಂದ ಸ್ವಂತ ಜಾಗದ ಯೋಜನೆ ಬಹು ಮೂಲ್ಯವಾಗಿದ್ದು, ನಿಧಿ ಸಂಗ್ರಹ ಅದರ ಯಶಸ್ಸಿನ ಬುನಾದಿಯಾಗಿದೆ. ತುಳು-ಕನ್ನಡಿಗರು, ಸಮಾಜ ಬಾಂಧವರು ಆರ್ಥಿಕ ನೆರವು, ಪೋತ್ಸಾಹದ ಭರವಸೆಯೊಂದಿಗೆ ಕಾರ್ಯಪ್ರವೃತ್ತರಾಗಬೇಕು ಎಂದು ವಿನಂತಿಸಿದರು.

ನಿಧಿ ಸಂಗ್ರಹ ಸಮಿತಿಯ ಕಾರ್ಯಾಧ್ಯಕ್ಷ ಸತೀಶ್‌ ಪುತ್ರನ್‌ ಕುರ್ಕಾಲ… ಅವರು ಮನವಿ ಪತ್ರ ಬಿಡುಗಡೆಗೊಳಿಸಿ ಶುಭ ಕೋರಿದರು. ಕೋಶಾಧಿಕಾರಿ ತಿಲಕ್‌ ಎನ್‌. ಸುವರ್ಣ ದಾನಿಗಳ ನೆರವು ಯಾಚಿಸಿದರು. ಉಪಕಾರ್ಯಾಧ್ಯಕ್ಷ ಧನಂಜಯ ಎನ್‌. ಸಾಲ್ಯಾನ್‌, ಜತೆ ಕಾರ್ಯದರ್ಶಿ ಸಂದೀಪ್‌ ಜಿ. ಕುಂದರ್‌, ಜತೆ ಕೋಶಾಧಿಕಾರಿ ಹರೀಶ್‌ ಎಸ್‌. ಕೋಟ್ಯಾನ್‌, ಸಮಿತಿಯ ಸದಸ್ಯರಾದ ಶಂಕರ್‌ ಆರ್‌. ಕೋಟ್ಯಾನ್‌, ಶಿವರಾಜ್‌ ಎಂ. ಕಾಂಚನ್‌, ಲೋಕನಾಥ ಎ. ಪುತ್ರನ್‌, ಯೋಗೀಶ್‌ ಡಿ. ಸಾಲ್ಯಾನ್‌, ರವಿ ಎನ್‌. ಸುವರ್ಣ, ಸುದೇಶ್‌ ಆರ್‌. ಸಾಲ್ಯಾನ್‌, ಯಾದವೇಶ್‌ ಎನ್‌. ಪುತ್ರನ್‌, ರವಿ ಎ. ಪುತ್ರನ್‌, ನವೀನ್‌ ಚಂದ್ರ ಡಿ. ತಿಂಗಳಾಯ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸೂರ್ಯಕಲಾ ಡಿ. ಸುವರ್ಣ, ಉಪ ಕಾರ್ಯಾಧ್ಯಕ್ಷೆ ಪ್ರಭಾವತಿ ಎಚ್‌. ಅಮೀನ್‌, ಕಾರ್ಯದರ್ಶಿ ಅಮಿತಾ ಎಸ್‌. ಶ್ರೀಯಾನ್‌, ಜತೆ ಕಾರ್ಯದರ್ಶಿ ಶೋಭಾ ರವಿರಾಜ್‌, ಮೊಗವೀರ ಬ್ಯಾಂಕಿನ ನಿರ್ದೇಶಕ ಜಯಶೀಲಾ ಬಿ. ತಿಂಗಳಾಯ, ಯುವ ವಿಭಾಗದ ಕಾರ್ಯಾಧ್ಯಕ್ಷ ಸಂಪತ್‌ ಬಿ. ಶ್ರೀಯಾನ್‌, ಉಪ ಕಾರ್ಯಾಧ್ಯಕ್ಷ ಪೂಜಾ ವಿ. ಅಮೀನ್‌, ಕಾರ್ಯದರ್ಶಿ ಪ್ರಮೋದ್‌ ಆರ್‌. ಪುತ್ರನ್‌, ಜತೆ ಕಾರ್ಯದರ್ಶಿ ಅನಿಲ್‌ ಕರ್ಕೇರ, ಮಹಿಳಾ ಸದಸ್ಯೆಯರು, ಮುಖ್ಯಕಚೇರಿಯ ಸದಸ್ಯರು, ಯುವ ವಿಭಾಗದ ಸದಸ್ಯರು, ನಿಧಿಸಂಗ್ರಹ ಸಮಿತಿಯ ಸದಸ್ಯರು, ಪರಿಸರದ ಹಿತೈಷಿ ಗಳು ಅಧಿಕ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

Advertisement

ಚಿತ್ರ-ವರದಿ: ರಮೇಶ್‌ ಅಮೀನ್‌

Advertisement

Udayavani is now on Telegram. Click here to join our channel and stay updated with the latest news.

Next