Advertisement

ಮೊಗವೀರ ವ್ಯವಸ್ಥಾಪಕ ಮಂಡಳಿ: 116ನೇ ಸಂಸ್ಥಾಪನಾ ದಿನಾಚರಣೆ

03:29 PM Aug 11, 2017 | |

ಮುಂಬಯಿ: ಫೋರ್ಟ್‌ ಪರಿಸರದಲ್ಲಿ 1902ರ ಆಗಸ್ಟ್‌ 9ರಂದು ದಿ| ಕಾಡಿಪಟ್ಣ ಚಂದು ಮಾಸ್ತರ್‌ ಅವರ ನೇತೃತ್ವದಲ್ಲಿ ಸ್ಥಾಪನೆಗೊಂಡ ಮೊಗವೀರ ವ್ಯವಸ್ಥಾಪಕ ಮಂಡಳಿಯು ಮರಾಠಿ ಮಣ್ಣಿನಲ್ಲಿ 115 ವರ್ಷಗಳನ್ನು ಪೂರೈಸಿರುವುದು ತುಳು-ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಿದೆ. ಮಂಡಳಿ ಕಳೆದ 115 ವರ್ಷಗಳಿಂದ ಜನತಾ ಸೇವೆಯೇ ಜನಾರ್ದನ ಸೇವೆ ಎಂಬ ಧ್ಯೇಯ ಧೋರಣೆಯೊಂದಿಗೆ ಸಾಮಾ ಜಿಕ, ಶೈಕ್ಷಣಿಕ, ಆರ್ಥಿಕ ಮತ್ತು ಸಾಹಿತ್ಯಕ ಕ್ಷೇತ್ರದಲ್ಲಿ ಅದ್ಭುತ ಸಾಧನೆಗೈದ ಸಂಸ್ಥೆ ಎಂದು ದಾಖಲಿಸಲ್ಪಟ್ಟಿದೆ. ಮಂಡಳಿಯ ಸಾಧನೆಯನ್ನು ಗುರುತಿಸಿ ಕರ್ನಾಟಕ ರಾಜ್ಯ ಸರಕಾರವು 2012ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದ್ದು, ಮುಂಬಯಿಯ ಸಾಮುದಾಯಕ ಸಂಸ್ಥೆಯೊಂದರ ಇತಿಹಾಸದಲ್ಲಿ ಪ್ರಾಮುಖ್ಯವಾದದ್ದು. ಈಗಾಗಲೇ ಶತಮಾನೋ ತ್ಸವವನ್ನು ಆಚರಿಸಿದ ಕರ್ನಾಟಕದ ಹೊರ ರಾಜ್ಯದಲ್ಲಿ ರುವ ಪ್ರಥಮ ಸಂಸ್ಥೆ ಎಂಬ ಮಾನ್ಯತೆಯನ್ನು ಪಡೆದಿದೆ. 

Advertisement

ಮಹಾರಾಷ್ಟÅ ರಾಜ್ಯ ಸರಕಾರವು ಮಂಡಳಿಯನ್ನು ಕನ್ನಡ ಭಾಷಾಅಲ್ಪಸಂಖ್ಯಾಕ ಸಂಸ್ಥೆ ಎಂದು ಗೌರವಿಸಿದೆ.ಇದರಿಂದಾಗಿ ಮಂಡಳಿಯ ಸಂಚಾಲಕತ್ವದಲ್ಲಿ ರುವ ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ  ತುಳು- ಕನ್ನಡಿಗರಿಗಾಗಿ ಶೇ. 50 ರಷ್ಟು ಮೀಸಲಾತಿಯನ್ನು ಒದಗಿಸಲಾಗುತ್ತಿದೆ. ಇದರ ಪ್ರಯೋಜನವನ್ನು ನೂರಾರು ಕನ್ನಡಿಗರು ಪಡೆಯುತ್ತಿದ್ದಾರೆ ಎನ್ನಲು ಸಂತೋಷವಾಗುತ್ತಿದೆ ಎಂದು ಮೊಗವೀರ ವ್ಯವಸ್ಥಾಪಕ  ಮಂಡಳಿಯ ಅಧ್ಯಕ್ಷ ಕೃಷ್ಣ ಕುಮಾರ್‌ ಎಲ್‌. ಬಂಗೇರ ಅವರು ನುಡಿದರು.

ಆ. 9ರಂದು ಪೂರ್ವಾಹ್ನ ಅಂಧೇರಿಯ ಶ್ರೀ ಮದ್ಭಾರತ ಮಂಡಳಿಯ ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನದಲ್ಲಿ ನಡೆದ ನಗರದ ಹಿರಿಯ ಸಾಮಾಜಿಕ, ಶೈಕ್ಷಣಿಕ, ಸಾಹಿತ್ಯಕ ಸಂಘಟನೆಯಾದ ಮೊಗವೀರ ವ್ಯವಸ್ಥಾಪಕ ಮಂಡಳಿಯ 116ನೇ ವರ್ಷಕ್ಕೆ ಪಾದಾರ್ಪಣೆಗೈದ ನಿಮಿತ್ತ ವಿಶೇಷ ಪೂಜೆಯನ್ನು ನೆರವೇರಿಸಿ ಮಾತನಾಡಿದ ಅವರು, ಮಂಡಳಿಯ ಇಂಟರ್‌ನ್ಯಾಷನಲ್‌ ಶಾಲೆಯು ಉತ್ತಮ ದರ್ಜೆಯಲ್ಲಿ ಸಾಗುತ್ತಿದ್ದು, 2014ರಲ್ಲಿ ನಿರ್ಮಿಸಲಾದ ಹೊಸ ಶೈಕ್ಷಣಿಕ ಸಂಕುಲದಲ್ಲಿ ಉಚ್ಚ ಶಿಕ್ಷಣಕ್ಕೆ ಸಂಬಂಧಪಟ್ಟಂತೆ ವಿವಿಧ ಶೈಕ್ಷಣಿಕ ವಿಭಾಗಗಳು ಕಾರ್ಯವೆಸಗುತ್ತಿವೆ. ಸುಮಾರು ಮೂರು ಸಾವಿರ ವಿದ್ಯಾರ್ಥಿಗಳು ಮಂಡಳಿಯ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಮೊಗವೀರ ಸಮುದಾಯದ ವಿದ್ಯಾರ್ಥಿಗಳಿಗೆ ಶುಲ್ಕದಲ್ಲಿ ಶೇ. 30ರಷ್ಟು ರಿಯಾಯಿತಿ ಹಾಗೂ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಸಹಾಯಧನ, ವೈದ್ಯಕೀಯ ನೆರವು, ಮೀನುಗಾರಿಕೆಯ ಸಂದರ್ಭದಲ್ಲಿ ಮರಣ ಹೊಂದಿದ ಸಂಬಂಧಿಕರಿಗೆ ಪರಿಹಾರ ಧನ, ವಿಧವೆಯರ ಮಕ್ಕಳಿಗೆ ವಿದ್ಯಾಭ್ಯಾಸಕ್ಕಾಗಿ ಸಹಾಯಧನ, ಉಚ್ಚ ಶಿಕ್ಷಣಕ್ಕಾಗಿ ಬಡ್ಡಿ ರಹಿತ ವಿದ್ಯಾರ್ಥಿ ವೇತನ ಇತ್ಯಾದಿ ಸಹಾಯಧನಕ್ಕಾಗಿ ಪ್ರತೀ ವರ್ಷ ಸುಮಾರು 25 ರಿಂದ 30 ಲಕ್ಷ  ರೂ. ಗಳನ್ನು ವಿನಿಯೋಗಿಸಲಾಗುತ್ತಿದೆ. ಮಂಡಳಿಯು ಭವಿಷ್ಯದಲ್ಲಿ ನೂತನ ಯೋಜನೆಗಳನ್ನು ಹೊಂದಿದ್ದು, ಅದರಲ್ಲಿ ಶೈಕ್ಷಣಿಕ ಸಂಕುಲವನ್ನು ವಿಸ್ತರಿಸಿ, ಇನ್ನೂ ಹೆಚ್ಚಿನ ವಿಭಾಗಗಳನ್ನು ತೆರೆಯುವುದು, ಉಪನಗರದಲ್ಲಿರುವ ಮಂಡಳಿಯ ಶಾಖೆ ಗಳಿಗೆ ಸ್ವಂತ ಕಚೇರಿಯನ್ನು ಒದಗಿಸು ವುದು, ಸಾಮಾಜಿಕ ಕ್ಷೇತ್ರದ ವಿವಿಧ ಯೋಜನೆಗಳನ್ನು ಪರಿಷ್ಕರಿಸುವುದು ಮತ್ತು ವೃದ್ಧಿಸುವುದು ಮೊದಲಾದ ಮಂಡಳಿಯ ಕಾರ್ಯಕ್ರಮಗಳಿಗೆ ಸರ್ವರ ಪ್ರೋತ್ಸಾಹ, ಸಹಕಾರ ಸದಾಯಿರಲಿ ಎಂದರು.

ಪೂಜಾ ಸಂದರ್ಭದಲ್ಲಿ ಮೊಗವೀರ ವ್ಯವಸ್ಥಾಪಕ ಮಂಡಳಿಯ ಪಾರುಪತ್ಯ ಗಾರರಾದ ಅಜಿತ್‌ ಜಿ. ಸುವರ್ಣ, ಉಪಾಧ್ಯಕ್ಷ ಶ್ರೀನಿವಾಸ ಪಿ. ಸುವರ್ಣ, ಧನ ಸಂಗ್ರಹ ಸಮಿತಿಯ ಕಾರ್ಯಾಧ್ಯಕ್ಷ ಹರೀಶ್‌ ವಿ. ಪುತ್ರನ್‌, ಮೊಗವೀರ ಪತ್ರಿಕೆಯ ಸಂಪಾದಕ ಅಶೋಕ್‌ ಸುವರ್ಣ, ಶ್ರೀ ಮದ್ಭಾರತ ಮಂಡಳಿಯ ಕಾರ್ಯಕರ್ತರಾದ ದೇವದಾಸ್‌ ಕರ್ಕೇರ, ಅಶೋಕ್‌ ಕರ್ಕೇರ ಮೊದ ಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next