ಮುಂಬಯಿ: ಕರ್ನಾಟಕ ನ್ಪೋರ್ಟಿಂಗ್ ಅಸೋಸಿಯೇಶನ್ ಚರ್ಚ್‌ಗೇಟ್ ಕ್ರೀಡಾಂಗಣಲ್ಲಿ ಆಯೋಜಿತ 21ನೇ ವಾರ್ಷಿಕ ಪ್ರತಿಷ್ಠಿತ ರಮಾನಾಥ ಪಯ್ಯಡೆ ಸ್ಮಾರಕ ಫುಟ್ಬಾಲ್ ಪಂದ್ಯಾಟದಲ್ಲಿ ಮೊಗವೀರ ತಂಡ ಸತತ 2ನೇ ಬಾರಿಗೆ ವಿನ್ನರ್ ಪ್ರಶಸ್ತಿಯನ್ನು ಪಡೆದಿದೆ.
ಮಾ. 19ರಂದು ಚರ್ಚ್‌ಗೇಟ್ ಪರಿಸರದ ಕರ್ನಾಟಕ ನ್ಪೋರ್ಟಿಂಗ್ ಅಸೋಸಿಯೇಶನ್ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯಾಟದಲ್ಲಿ ಮೊಗವೀರ ತಂಡವು ಜೈ ಭಾರತ್ ತಂಡವನ್ನು ಎದುರಿಸಿ ಪೂರ್ಣಾವಧಿಯಲ್ಲಿ ಯಾವುದೇ ರೀತಿಯ ಫಲಿತಾಂಶವಿಲ್ಲದೆ ಡ್ರಾ ಮಾಡಿಕೊಂಡಿತ್ತು. ಆನಂತರ ಪೆನಲ್ಟಿ ಶೂಟೌಟ್ ಟ್ರೈಬೇಕರ್ ನಿಯಾಮಾನುಸಾರ ನಡೆದಿದ್ದು, ಮೊಗವೀರ ತಂಡವು 7-6 ಅಂತರದಿಂದ ವಿರೋಚಿತ ಗೆಲುವನ್ನು ಸಾಧಿಸಿದ್ವಿತೀಯ ಬಾರಿಗೆ ರಮಾನಾಥ ಪಯ್ಯಡೆ ಫುಟ್ಬಾಲ್ ಪ್ರಶಸ್ತಿಯನ್ನು ಜಯಿಸಿತು.
ವಿಜಯಿ ತಂಡದ ಪರವಾಗಿ ಹಿತೇಶ್ ಕರ್ಕೇರ, ಬ್ಲೋಟೆಕ್ ಮೆಂಡಿಸ್, ಕೆವಿನ್ ಡಿಸಿಲ್ವಾ, ಪ್ರಖ್ಯಾತ್ ಶೆಟ್ಟಿ, ಪ್ರಣೀಲ್ ಮೆಂಡನ್, ಮೆಲ್‌ರೋಯ್ ನರೊನ್ಹಾ, ಅಕ್ಷಯ್ ಬಾಂದೇಕರ್ ಅವರು ಗೋಲು ಹೊಡೆದರು. ಜೈಭಾರತದ ತಂಡದ ಪರವಾಗಿ ರಿಶಿಕ್ ಶೆಟ್ಟಿ, ರಶೀದ್ ಶೇಖ್, ಪ್ರಶಾಂತ್ ಕಾಂಬ್ಳೆ, ರವಿ ರಾಥೋಡ್, ಗಣೇಶ್ ಶೆಟ್ಟಿ, ತೃಪೆ¤àಶ್ ಮೆಹ್ತಾ ಅವರು ಗೋಲು ಹೊಡೆದರು.
ಪಂದ್ಯಾಟದ ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಸತ್ಯವಿಜಯ ತಂಡವು ಟ್ರೈಬೇಕರ್‌ನಲ್ಲಿ ಕರ್ನಾಟಕ ಅಮೆಚೂರ್ ತಂಡವನ್ನು 5-3 ಅಂತರದಿಂದ ಸೋಲಿಸಿತು. ಈ ಪಂದ್ಯಾಟದಲ್ಲಿ ಬೆಸ್ಟ್ ಗೋಲ್ ಕೀಪರ್ ರಾಜೇಶ್ ಬಂಗೇರ, ಡಿಫೆಂಡರ್ ಕೇತನ್ ಕಾಳಶ್ವೇರRರ್, ಮಿಡ್ಲ್ ಫೀಲ್ಡರ್ ಸಾಗರ್ ಸಾಲ್ಯಾನ್, ಫಾರ್ವರ್ಡರ್ ತುಷಾರ್ ಪೂಜಾರಿ ವೈಯಕ್ತಿಕ ಪ್ರಶಸ್ತಿಯನ್ನು ಪಡೆದರು. ಸಮಾರೋಪ ದಲ್ಲಿ ಯುವ ಸೇನಾ ಅಧ್ಯಕ್ಷ ಆದಿತ್ಯಾ ಠಾಕ್ರೆ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಪ್ರಶಸ್ತಿ ಪ್ರದಾನಿಸಿದರು.
ವಿಶೇಷ ಅತಿಥಿಗಳಾಗಿ ರಮಾನಾಥ ಪಯ್ಯಡೆ, ಛತ್ರಪತಿ ಶಿವಾಜಿ ಪ್ರಶಸ್ತಿ ಪುರಸ್ಕೃತ ಗೌರವ್ ಜಯ ಶೆಟ್ಟಿ, ಫುಟ್ಬಾಲ್ ಸಂಘಟನೆಯ ಪದಾಧಿಕಾರಿಗಳಾದ ಸೌತರ್ ವಾಜ್, ಉದಯ ಬ್ಯಾನರ್ಜಿ, ಶೋಧನ್ ಶೆಟ್ಟಿ, ಸುರೇಶ್ ಬಂಜನ್, ಸುಧಾರಾಣೆ ಉಪಸ್ಥಿತರಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ನ್ಪೋರ್ಟಿಂಗ್ ಅಸೋಸಿಯೇಶನ್‌ನ ಅಧ್ಯಕ್ಷ, ಪಂದ್ಯಾಟದ ಪ್ರಾಯೋಜಕ ಡಾ| ಪದ್ಮನಾಭ ಶೆಟ್ಟಿ ಅವರು ವಹಿಸಿದ್ದರು. ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ಗೋವಿಂದ ಪುತ್ರನ್, ಹರೀಶ್ ಪೂಜಾರಿ, ರವಿ ಅಂಚನ್, ಪ್ರೇಮನಾಥ್ ಕೋಟ್ಯಾನ್, ಸಾಲ್ಸ್‌ಡೋರ್ ಡಿ’ಸೋಜಾ, ಸುರೇಶ್ ಮೆಂಡನ್, ವಸಂತ ಉಚ್ಚಿಲ್, ನಾಗರಾಜ ಶೆಟ್ಟಿ, ಸುಕುಮಾರ್ ಹತ್ತಂಗಡಿ, ಎಸ್. ಪಿ. ಶೆಟ್ಟಿ, ಕೃಷ್ಣ ಶೆಟ್ಟಿ, ಜಯ ಎ. ಶೆಟ್ಟಿ ಮೊದಲಾದವರು ಸಮಾರಂಭದ ಯಶಸ್ಸಿಗೆ ಸಹಕರಿಸಿದರು.