ಬಂಟ್ವಾಳ : ಅಮೂrರು ಗ್ರಾಮದ ಮೊಗರ್ನಾಡ್ ಧರ್ಮಕೇಂದ್ರದ ವಾರ್ಷಿಕ ಹಬ್ಬವು ಧರ್ಮಗುರು ಫಾ| ಡಾ| ಮಾರ್ಕ್ ಕಾಸ್ತೆಲಿನೊ ಅವರ ಮಾರ್ಗದರ್ಶನದಲ್ಲಿ ನಡೆಯಿತು.ಸಾಂಭ್ರಮಿಕ ಬಲಿಪೂಜೆಯ ಪ್ರಧಾನ ಧರ್ಮಗುರುಗಳಾಗಿ ಮೊಗರ್ನಾಡ್ ದೇವಾಲಯದ ಮಾಜಿ ಧರ್ಮಗುರು ಫಾ| ಮಥಾಯಸ್ ಪಿರೇರಾ ಅವರು ಸಂಭ್ರವಿದ ಬಲಿ ಪೂಜೆಯನ್ನು ಅರ್ಪಿಸಿದರು. 27 ಧರ್ಮಗುರುಗಳು ಈ ಬಲಿಪೂಜೆಯಲ್ಲಿ ಭಾಗವಹಿಸಿದ್ದರು.
ಮೊಗರ್ನಾಡ್ ದೇವಾಲಯದ ಮಾಜಿ ಸಹಾಯಕ ಧರ್ಮಗುರು ಫಾ| ಜೋಸೆಫ್ ಉದಯ್ ಫೆರ್ನಾಂಡಿಸ್ ಅವರು ಬಲಿಪೂಜೆಗೆ ಪ್ರಬೋಧನೆಯನ್ನು ಕೊಟ್ಟು ದೇವರ ವಾಕ್ಯದ ಪ್ರಕಾರ ಹಾಗೂ ಮಾತೆ ಮರಿಯಮ್ಮನವರ ಆದರ್ಶದಲ್ಲಿ ಜೀವಿಸಲು ಸರ್ವ ಭಕ್ತರಿಗೆ ಕರೆ ನೀಡಿದರು.
ಆಡಳಿತ ಮಂಡಳಿಯ ಉಪಾಧ್ಯಕ್ಷೆ ಜಾನೆಟ್ ಮೇರಿ ವಾಸ್, ಕಾರ್ಯದರ್ಶಿ ಎಡ್ವಿನ್ ಪಸನ್ನಾ ಹಾಗೂ
ಸಹಾಯಕ ಧರ್ಮಗುರುಗಳಾದ ಫಾ| ದೀಪಕ್ ಲಿಯೋ ಡೇಸಾ, ಸದಸ್ಯರು, ಸಮಾಜ ಬಾಂಧವರು ಭಾಗವಹಿಸಿದ್ದರು.