ಮುಂಬೈ: ಇನ್ನೇನು ಒಂದು ವಾರದಲ್ಲಿ 15ನೇ ಆವೃತ್ತಿಯ ಐಪಿಎಲ್ ಕೂಟ ಆರಂಭವಾಗಲಿದೆ. ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ. ಆದರೆ ಸಿಎಸ್ ಕೆ ತಂಡದ ಪ್ರಮುಖ ಆಲ್ ರೌಂಡರ್ ಮೊಯಿನ್ ಅಲಿಗೆ ವಿಸಾ ಸಮಸ್ಯೆ ಎದುರಾಗಿದೆ.
ಭಾರತಕ್ಕೆ ಬರಲು ಮೊಯಿನ್ ಅಲಿ ಅವರ ವೀಸಾವನ್ನು ಇನ್ನೂ ಅನುಮೋದಿಸಲಾಗಿಲ್ಲ. ಹೀಗಾಗಿ ಇಂಗ್ಲೆಂಡ್ ಆಟಗಾರ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕೂಡಿಕೊಳ್ಳಲು ಭಾರತಕ್ಕೆ ಇನ್ನೂ ತೆರಳಿಲ್ಲ.
ಸಿಎಸ್‌ಕೆ ಸಿಇಒ ಕಾಸಿ ವಿಶ್ವನಾಥನ್ ಅವರು ಮೊಯಿನ್‌ನ ವೀಸಾ ಅನುಮೋದನೆಯಲ್ಲಿ ಏಕೆ ವಿಳಂಬವಾಗಿದೆ ಎಂದು ಫ್ರಾಂಚೈಸ್‌ಗೆ ಖಚಿತವಾಗಿಲ್ಲ ಆದರೆ ಸಮಸ್ಯೆಯನ್ನು ಶೀಘ್ರದಲ್ಲೇ ಪರಿಹರಿಸಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ:ಒಂದು ಕಾಲದ ವಿಶ್ವಕಪ್ ತಂಡದ ಆಟಗಾರ, ಪರ್ಪಲ್ ಕ್ಯಾಪ್ ವಿಜೇತ ಈಗ ನೆಟ್ ಬೌಲರ್!
“ನಾವು ಈ ಸಮಸ್ಯೆಯ ಬಗ್ಗೆ ಅವರೊಂದಿಗೆ ಮಾತನಾಡಿದ್ದೇವೆ. ಶೀಘ್ರದಲ್ಲೇ ಸಮಸ್ಯೆಯನ್ನು ಪರಿಹರಿಸುತ್ತಾರೆ ಎಂದುಕೊಂಡಿದ್ದೇವೆ. ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ನೀಡಲಾಗಿದೆ. ಆದರೆ ಅವರ ವೀಸಾ ಅನುಮೋದನೆ ಯಾಕೆ ಆಗಿಲ್ಲ ಎಂದು ತಿಳಿದಿಲ್ಲ. ಅವರು ತಮ್ಮ ವೀಸಾವನ್ನು ಪಡೆದ ತಕ್ಷಣ ಅವರು ಪ್ರಯಾಣ ಬೆಳೆಸುತ್ತಾರೆ” ಎಂದು ವಿಶ್ವನಾಥನ್ ಹೇಳಿದರು.
ಭಾರತಕ್ಕೆ ಆಗಮಿಸಿದ ನಂತರ ಮೊಯಿನ್ ಅಲಿ ಮೂರು ದಿನಗಳ ಕ್ವಾರಂಟೈನ್ ಗೆ ಒಳಗಾಗಬೇಕಾಗುತ್ತದೆ.