ವರದಿ: ವೀರೇಂದ್ರ ನಾಗಲದಿನ್ನಿ
ಗದಗ: ಕೋವಿಡ್ ಸೋಂಕಿನ ಸಂಭವನೀಯ 3ನೇ ಅಲೆ ವಿರುದ್ಧ ಜಿಲ್ಲಾಡಳಿತ ರಣ ಕಹಳೆ ಮೊಳಗಿಸಿದೆ. ಉತ್ತರ ಕರ್ನಾಟಕದಲ್ಲೇ ಮೊದಲ ಬಾರಿಗೆ ಇಲ್ಲಿನ ಸರಕಾರಿ ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಅತ್ಯಾಧುನಿಕ ಹಾಗೂ ಸಂಪೂರ್ಣ ಆಕ್ಸಿಜನೈಸ್ಡ್ 100 ಹಾಸಿಗೆಗಳ ಮಾಡ್ಯುಲಸ್ ಆಸ್ಪತ್ರೆ ತಲೆ ಎತ್ತಲಿದೆ.
ಶಿಪ್ಪಿಂಗ್ ಕಂಟೇನರ್ ಮಾದರಿಯ ಈ ಆಸ್ಪತ್ರೆಯನ್ನು ತುರ್ತು ಪರಿಸ್ಥಿತಿಯಲ್ಲಿ ಬೇಕಾದ ಕಡೆ ಸ್ಥಳಾಂತರಿಸಬಹುದಾಗಿದೆ. ವಿವಿಧ ಸೌಲಭ್ಯಗಳ ಕೊರತೆ ಮಧ್ಯೆಯೂ ಮೊದಲ ಹಾಗೂ ಎರಡನೇ ಅಲೆಯನ್ನು ಜಿಮ್ಸ್ ನೆರವಿನೊಂದಿಗೆ ಜಿಲ್ಲಾಡಳಿತ ಸಮರ್ಥವಾಗಿ ನಿಭಾಯಿಸಿದೆ. 3ನೇ ಅಲೆ ಎದುರಾಗಲಿದೆ ಎಂಬ ತಜ್ಞರ ಅಭಿಪ್ರಾಯದ ಹಿನ್ನೆಲೆಯಲ್ಲಿ ಜಿಮ್ಸ್‌ನಲ್ಲಿ ವೈದ್ಯಕೀಯ ಸೌಲಭ್ಯಗಳನ್ನು ಸಿದ್ಧಗೊಳಿ ಸುವ ಜೊತೆಗೆ ಹೆಚ್ಚುವರಿ 100 ಹಾಸಿಗೆಗಳ ಮಾಡ್ಯುಲರ್ ಆಸ್ಪತ್ರೆ ವ್ಯವಸ್ಥೆಗೊಳಿಸಿದೆ.
ಏನಿದು ಮಾಡ್ಯುಲಸ್ ಆಸ್ಪತ್ರೆ: ಒಂದು ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ಕನಿಷ್ಟವೆಂದರೂ ಒಂದು ವರ್ಷ ಬೇಕಾಗುತ್ತದೆ. ಶಿಪ್ಪಿಂಗ್ ಕಂಟೇನರ್ ಮಾದರಿಯ 100 ಹಾಸಿಗೆಗಳ ಮಾಡ್ಯುಲರ್ ಆಸ್ಪತ್ರೆ ಕೇವಲ 15 ದಿನಗಳಲ್ಲಿ ತಲೆ ಎತ್ತಿ ನಿಂತಿದೆ. ಇತ್ತೀಚೆಗೆ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವರಾಗಿದ್ದ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಅವರ ಪ್ರಯತ್ನದಿಂದಾಗಿ ಬೆಂಗಳೂರಿನ ಯುನೈಟೆಡ್ ವೇಸ್ ಸಂಸ್ಥೆಯ ಸಿಎಸ್‌ಆರ್ ನಿಧಿ ಯಡಿ ಮಾಡ್ಯುಲರ್ ಆಸ್ಪತ್ರೆಯನ್ನು ಕೊಡುಗೆಯಾಗಿ ನೀಡುತ್ತಿದೆ.
ಚೆನ್ನೈ ಮೂಲದ ಮಾಡ್ಯುಲಸ್ ಹೌಸಿಂಗ್ ಲಿ. ಎಂಬ ಸಂಸ್ಥೆ ಮಾಡ್ಯುಲರ್ ಆಸ್ಪತ್ರೆ ನಿರ್ಮಿಸುತ್ತಿದೆ. ಕಬ್ಬಿಣ ಹಾಗೂ ಫೋರ್ಮ್ ಒಳಗೊಂಡಿರುವ ಗೋಡೆಗಳು, ಮೇಲ್ಛಾವಣಿಯ ರೆಡಿಮೇಡ್ ಆಸ್ಪತ್ರೆ ಇದಾಗಿದೆ. ಸಂಪೂರ್ಣ ಹವಾ ನಿಯಂತ್ರಿತವಾಗಿದ್ದು, ಎಷ್ಟೇ ಬಿಸಿಲು, ಚಳಿ, ಗಾಳಿ ಮಳೆಯಿದ್ದರೂ ಆಸ್ಪತ್ರೆ ಒಳಾಂಗಣದಲ್ಲಿ ವಾತಾವರಣ ಬದಲಾಗುವುದಿಲ್ಲ. ಅಲ್ಲದೇ, ಸುಮಾರು 25 ವರ್ಷಗಳ ಕಾಲ ಬಾಳಿಕೆ ಬರಲಿದೆ. 20 x20 ಹಾಗೂ 10 x10 ಅಳತೆಯ ಬೃಹತ್ ಪೆಟ್ಟಿಗೆ ಆಕಾರದ ಮಾಡ್ಯುಲರ್‌ಗಳನ್ನು ಬಳಸಿ 100 ಹಾಸಿಗೆಗಳ ಆಸ್ಪತ್ರೆ ಸಿದ್ಧಗೊಳಿಸಲಾಗುತ್ತಿದೆ. ಅದರಲ್ಲಿ 10 ಹಾಸಿಗೆಗಳ ಐಸಿಯು ನಿರ್ಮಿಸಲಾಗುತ್ತಿದ್ದು, ಇನ್ನುಳಿದ 90 ಹಾಸಿಗೆಗಳು ಆಕ್ಸಿಜನೈಸ್ಡ್ ಆಸ್ಪತ್ರೆಯನ್ನಾಗಿ ಅಭಿವೃದ್ಧಿಪಡಿಸುತ್ತಿರುವುದು ವಿಶೇಷ.
ಪಿಡಿಯಾಟ್ರಿಕ್ ಐಸಿಯು ಸಿದ್ಧ: ಜಿಲ್ಲೆಯ ರೋಣ ಮೂಲದವರಾದ ತೆಲಂಗಾಣದ ಹಿರಿಯ ಐಪಿಎಸ್ ಅ ಧಿಕಾರಿ ವಿಶ್ವನಾಥ ಚನ್ನಪ್ಪ ಸಜ್ಜನರ್ ಅವರ ಪ್ರಯತ್ನದಿಂದ ಜಿಲ್ಲಾ ಆಸ್ಪತ್ರೆಯ 2ನೇ ಮಹಡಿಯಲ್ಲಿ ಖಾಸಗಿ ಸಂಸ್ಥೆಯ ನೆರವಿನೊಂದಿಗೆ ಮಕ್ಕಳ ತೀವ್ರ ನಿಗಾ ಘಟಕ ಸಿದ್ಧವಾಗಿದೆ. ಹೈದರಾಬಾದ್ ಮೂಲದ “ನಿರ್ಮಾಣ’ ಎಂಬ ಸಂಸ್ಥೆಯ ಸಿಎಸ್‌ಆರ್ ಯೋಜನೆ ಯಡಿ ಮಕ್ಕಳ ಚಿಕಿತ್ಸೆಗೆ ಅಗತ್ಯವಿರುವ 20 ವೆಂಟಿಲೇಟರ್ ಹಾಸಿಗೆಗಳನ್ನು ವ್ಯವಸ್ಥೆ ಗೊಳಿಸಿದೆ. ಜತೆಗೆ ಹೈದರಾಬಾದ್ ಮೂಲದ ಮೇಘಾ ಎಂಜಿನಿಯರಿಂಗ್ ಸಂಸ್ಥೆಯಿಂದ ಪ್ರತಿ ನಿಮಿಷಕ್ಕೆ 500 ಲೀ. ಆಕ್ಸಿಜನ್ ಉತ್ಪಾದನಾ ಘಟಕ ತಲೆ ಎತ್ತುತ್ತಿರುವುದು ಜಿಮ್ಸ್ ವೈದ್ಯಕೀಯ ಸೌಲಭ್ಯಗಳಿಗೆ ಮತ್ತಷ್ಟು ಬಲ ಸಿಕ್ಕಂತಾಗಿದೆ.
ಕೋವಿಡ್ 3ನೇ ಸಮರಕ್ಕೆ ಸಿದ್ಧತೆ: ಕೋವಿಡ್ -1, 2ನೇ ಅಲೆಯಲ್ಲಿ ಬೆಡ್ ಮತ್ತು ವೆಂಟಿ ಲೇಟರ್‌ಗಳ ಅಗತ್ಯತೆ ಮನಗಂಡಿರುವ ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವರು, ಸ್ಥಳೀಯ ಜನಪ್ರತಿನಿ ಧಿಗಳು ಜಿಮ್ಸ್ ಆಸ್ಪತ್ರೆ ಉನ್ನತೀಕರಿಸಿದ್ದಾರೆ. ಆಸ್ಪತ್ರೆಯ ಎಲ್ಲಾ 440 ಬೆಡ್‌ಗಳಿಗೂ ಆಕ್ಸಿಜನ್ ಒದಗಿಸಿದೆ. ಜತೆಗೆ 110 ಬೆಡ್‌ಗಳಿಗೆ ವೆಂಟಿಲೇಟರ್ ಕಲ್ಪಿಸಿದೆ. ಈ ಮೂಲಕ ಪ್ರತಿ ನಾಲ್ವರು ರೋಗಿಗ ಳಲ್ಲಿ ಒಬ್ಬರು ವೆಂಟಿಲೇಟರ್ ಸಹಿತ ಚಿಕಿತ್ಸೆ ದೊರೆಯುವಂತೆ ಮಾಡಲಾಗಿದೆ. ಆಸ್ಪತ್ರೆ ಒಟ್ಟು ಬೆಡ್‌ಗಳಲ್ಲಿ ಶೇ.25 ವೆಂಟಿಲೇ ಟರ್ ಬೆಡ್ ಹೊಂದಿದೆ ಎಂಬುದು ಗಮನಾರ್ಹ.