ಚಿತ್ರದುರ್ಗ/ಹೊಸನಗರ/ಶೃಂಗೇರಿ: ಪ್ರಧಾನಿ ನರೇಂದ್ರ ಮೋದಿ ಅವರ ಪತ್ನಿ ಜಶೋದಾ ಬೆನ್ ಬುಧವಾರ ಹೊಸನಗರದ ರಾಮಚಂದ್ರಾಪುರ ಮಠ, ಶೃಂಗೇರಿ ಹಾಗೂ ಚಿತ್ರದುರ್ಗದ ನೀಲಕಂಠೇಶ್ವರಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಬೆಂಗಳೂರಿನಿಂದ ಚಿತ್ರದುರ್ಗ ಮಾರ್ಗವಾಗಿ ಹೊಸನಗರಕ್ಕೆ ತೆರಳುವ ಮಾರ್ಗಮಧ್ಯೆ ಚಿತ್ರದುರ್ಗ ದಲ್ಲಿನ ನೀಲಕಂಠೇಶ್ವರಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ, ದರ್ಶನ ಪಡೆದರು. ಬೆಳಗ್ಗೆ 9:30ರ ಸುಮಾರಿಗೆ ದೇವಾಲಯಕ್ಕೆ ಆಗಮಿಸಿ, ಅಭಿಷೇಕ, ಅಷ್ಟೋತ್ತರ ಹಾಗೂ ಮಹಾಮಂಗಳಾರತಿ ಸೇವೆ ಸಲ್ಲಿಸಿದರು.
ವಿಶೇಷವೆಂದರೆ, ಜಶೋದಾ ಬೆನ್ ಅವರು ಪ್ರತಿ ದಿನ ಶಿವನ ದರ್ಶನವಾಗದೆ ಒಂದು ಹನಿ ನೀರನ್ನೂ ಸೇವಿಸು ವುದಿಲ್ಲ. ನೀಲಕಂಠೇಶ್ವರ ದೇವಸ್ಥಾನದ ಮುಂದೆ ಕಾರು ಬಂದು ನಿಲ್ಲುತ್ತಿದ್ದಂತೆ ಜಶೋದಾ ಬೆನ್, ಇದು ಶಿವನ ದೇವಸ್ಥಾನವೇ ಎಂದು ಖಚಿತ ಪಡಿಸಿ ಕೊಂಡರು. ನಂತರ ಶಿವನ ದರ್ಶನವಾಗದೆ ನೀರು, ಆಹಾರ ಸೇವಿಸುವುದಿಲ್ಲ. ಹಾಗಾಗಿ, ಎಲ್ಲಿಗೆ ಹೋದರೂ ಮೊದಲು ಅಲ್ಲಿರುವ ಶಿವ ದೇವಾಲಯಕ್ಕೆ ತೆರಳುತ್ತಾರೆ ಎಂದು ಅವರ ಜತೆಗೆ ಆಗಮಿಸಿದ್ದ ರಾಘವೇಂದ್ರ ತಿಳಿಸಿದರು.
ರಾಮಚಂದ್ರಾಪುರ ಮಠಕ್ಕೆ ಭೇಟಿ: ಬಳಿಕ, ಶಿವಮೊಗ್ಗ ಜಿಲ್ಲೆ ಹೊಸನಗರದ ರಾಮಚಂದ್ರಾಪುರ ಮಠದಲ್ಲಿ ನಡೆದ ಕೃಷ್ಣಾರ್ಪಣಂ ಕಾರ್ಯಕ್ರಮದಲ್ಲಿ ಪಾಲ್ಗೊಂ ಡರು. ಮಧ್ಯಾಹ್ನದ ವೇಳೆಗೆ ಆಗಮಿಸಿದ ಜಶೋ ದಾರಿಗೆ ಆರತಿ ಎತ್ತಿ ಸ್ವಾಗತ ಕೋರಲಾಯಿತು. ಅಲ್ಲಿಂದ ನೇರವಾಗಿ ಗೋವರ್ಧನ ಗಿರಿಧಾರಿ ಗೋಪಾಲಕನ ಸನ್ನಿ ಧಿಗೆ ತೆರಳಿ ದೇವರ ದರ್ಶನ ಪಡೆದರು.
ನಂತರ, ದೇವಾಲಯದಲ್ಲಿ ರಜತ ಛತ್ರ ಸಮರ್ಪಣೆ ಮೂಲಕ ತಮ್ಮ ಹರಕೆ ತೀರಿಸಿದರು. ಮಂಗಳಾರತಿ ಸ್ವೀಕರಿಸಿದ ನಂತರ ರಾಘವೇಶ್ವರ ಶ್ರೀಗಳು ಸಾನ್ನಿಧ್ಯ ವಹಿಸಿದ್ದ ಧರ್ಮಸಭೆಗೆ ಆಗಮಿಸಿದರು. ವೇದಿಕೆ ಮೇಲೇರುತ್ತಿ ದ್ದಂತೆ ಭಕ್ತಾ ದಿಗಳಿಗೆ ಕೈಗಳನ್ನು ಮೇಲಕ್ಕೆತ್ತಿ ಧನ್ಯವಾದ ಸಮರ್ಪಿಸಿದರು. ಧರ್ಮಸಭೆಯಲ್ಲಿ ಮಾತನಾಡಿದ ಬಳಿಕ ರಾಘವೇಶ್ವರ ಶ್ರೀಗಳ ಆಶೀರ್ವಾದ ಪಡೆದರು. ಶ್ರೀಗಳು ಅವರನ್ನು ಶಾಲು ಹೊದಿಸಿ, ಮಂತ್ರಾಕ್ಷತೆ ನೀಡಿ ಸನ್ಮಾನಿಸಿ, ಗೌರವಿಸಿದರು.
ಶೃಂಗೇರಿ ಶಾರದಾಂಬೆಗೆ ಪೂಜೆ: ರಾಮಚಂದ್ರಾಪುರ ಮಠದಿಂದ ಹೊರಟ ಜಶೋದಾ ಬೆನ್, ಶೃಂಗೇರಿಯ ಶಾರದಾ ಪೀಠಕ್ಕೆ ಭೇಟಿ ನೀಡಿದರು. ಶಾರದಾಂಬಾ ದೇಗುಲದ ಹೊರ ಆವರಣದ ವಿದ್ಯಾಶಂಕರ ದೇಗುಲ, ಸುಬ್ರಹ್ಮಣ್ಯ ದೇವಸ್ಥಾನ, ತೋರಣ ಗಣಪತಿ, ಶಂಕರಾಚಾರ್ಯರ ದೇಗುಲಕ್ಕೆ ಭೇಟಿ ನೀಡಿ, ಪೂಜೆ ಸಲ್ಲಿಸಿದರು.
ನಂತರ, ಶಾರದಾಂಬಾ ದೇಗುಲಕ್ಕೆ ತೆರಳಿ ಒಳ ಪ್ರಾಂಗಣದ ಶಕ್ತಿಗಣಪತಿ, ಶಾರದಾಂಬೆಗೆ ವಿಶೇಷ ಪೂಜೆ ನೆರವೇರಿಸಿದರು. ನರಸಿಂಹವನದಲ್ಲಿರುವ ಗುರುಭವನದಲ್ಲಿ ಜಗದ್ಗುರು ಶ್ರೀ ಭಾರತೀತೀರ್ಥ ಸ್ವಾಮೀಜಿಗಳ ದರ್ಶನ-ಆಶೀರ್ವಾದ ಪಡೆದರು. ಮಠದ ಅತಿಥಿ ಗೃಹದಲ್ಲೇ ವಾಸ್ತವ್ಯ ಹೂಡಿದ್ದಾರೆ.
ದೇಶ ಸುಭಿಕ್ಷೆ ಮತ್ತು ಸಮೃದ್ಧಿಯಿಂದ ಇರಬೇಕಾದರೆ ಒಳ್ಳೆಯ ಮನಸ್ಸುಗಳಿಂದ ಇಲ್ಲಿರುವ ದೇವಶಕ್ತಿಗಳಲ್ಲಿ ಪ್ರಾರ್ಥಿಸಬೇಕು. ಸಮಷ್ಠಿಯ ಪ್ರಾರ್ಥನೆಯ ಫಲವಾಗಿ ಇಂದು ರಾಮಮಂದಿರವೂ ನಿರ್ಮಾಣವಾಗುತ್ತಿದೆ. ಅದು ದೇಶ ಒಳ್ಳೆಯ ದಾರಿಯತ್ತ ಸಾಗುತ್ತಿದೆ ಎನ್ನುವುದಕ್ಕೆ ಸಾಕ್ಷಿ.
-ಜಶೋಧ ಬೆನ್, ಪ್ರಧಾನಿ ಮೋದಿ ಪತ್ನಿ