Advertisement
ಕ್ಷೇತ್ರದ ವ್ಯಾಪ್ತಿಯಲ್ಲಿರುವ ಕಾಂಗ್ರೆಸ್ ಪ್ರಾಬಲ್ಯದ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಸಾಧಿರುವುದು, ಬಿಜೆಪಿಯ ಬಿ.ಎನ್.ಬಚ್ಚೇಗೌಡ 1.81 ಲಕ್ಷದಷ್ಟು ಭಾರೀ ಮತಗಳ ಅಂತರದಿಂದ ಗೆಲುವು ಸಾಧಿಸಿರುವುದು ಕ್ಷೇತ್ರದಲ್ಲಿದ್ದ ಮೊಯ್ಲಿ ವಿರೋಧಿ ಅಲೆಯನ್ನು ಪುಷ್ಟೀಕರಿಸಿದೆ.
Related Articles
Advertisement
2009, 2014 ಲೋಕಸಭಾ ಚುನಾವಣೆಗಳ ಫಲಿತಾಂಶ ಗಮನಿಸಿದರೆ ಸ್ಪಷ್ಟವಾಗುತ್ತದೆ. ಆದರೆ ಈ ಬಾರಿ ಕ್ಷೇತ್ರದಲ್ಲಿ ದ್ವಿಕೋನ ಸ್ಪರ್ಧೆ ಏರ್ಪಟ್ಟಿದ್ದರಿಂದ ಕ್ಷೇತ್ರದ ಪ್ರಬಲ ಸಮು ದಾಯ ಒಕ್ಕಲಿಗ ಮತಗಳು ಬಿಜೆಪಿ ಅಭ್ಯರ್ಥಿ ಬಚ್ಚೇಗೌಡ ಕೈ ಹಿಡಿದಿದ್ದರಿಂದ ದಳಪತಿ ಗಳು ಕೈ ಹಿಡಿಯದ ಕಾರಣ ದಿಂದ ಕ್ಷೇತ್ರದಲ್ಲಿ ಬಿಜೆಪಿ ಸುಲಭವಾಗಿ ಜಯ ಸಾಧಿಸಿ ಗೆಲುವಿನ ನಗೆ ಬೀರಿದೆ.
ಮೊಯ್ಲಿಗೆ ತಟ್ಟಿದ ನೀರಾವರಿ ಬಿಸಿ: ಮತ್ತೂಂದೆಡೆ ಕಾಂಗ್ರೆಸ್ ಅಭ್ಯರ್ಥಿ ಎಂ.ವೀರಪ್ಪ ಮೊಯ್ಲಿ ಸೋಲಿಗೆ ಮೈತ್ರಿ ಧರ್ಮಪಾಲನೆ ಆಗದಿರುವುದು ಒಂದೆಡೆಯಾದರೆ ಕ್ಷೇತ್ರದಲ್ಲಿ ಉಲ್ಬಣಿಸಿದ್ದ ನೀರಾ ವರಿ ಬಿಸಿ ಕೂಡ ಮೊಯ್ಲಿಗೆ ಬಿಸಿ ತುಪ್ಪವಾಗಿತ್ತು. ಸದಾ ಬರದಿಂದ ಕಂಗೆಟ್ಟಿರುವ ಜಿಲ್ಲೆಯ ಜನತೆ ದಶಕಗಳಿಂದಲೂ ಶಾಶ್ವತ ನೀರಾವರಿಗಾಗಿ ಧ್ಯಾನ ಮಾಡುತ್ತಿದ್ದಾರೆ. ಆದರೆ ಹತ್ತು ವರ್ಷ ಕ್ಷೇತ್ರದ ಸಂಸದರಾದರೂ ಕನಿಷ್ಠ ಈ ಭಾಗಕ್ಕೆ ಶುದ್ಧ ಕುಡಿಯುವ ನೀರು ಕಲ್ಪಿಸಲಿಲ್ಲ. ಎತ್ತಿನಹೊಳೆ ಯೋಜನೆ, ಹೆಬ್ಟಾಳ ಹಾಗೂ ನಾಗವಾರ ತ್ಯಾಜ್ಯ ನೀರನ್ನು ಕೂಡ ಸಕಾಲದಲ್ಲಿ ತಂದು ಕೆರೆಗಳಿಗೆ ತುಂಬಿಸಿ ಜಿಲ್ಲೆಯ ಅಂತರ್ಜಲ ವೃದ್ಧಿಗೆ ತ್ವರಿತವಾಗಿ ಕ್ರಮಗೊಳ್ಳಲಿಲ್ಲ ಎಂಬ ಅಸಮಾಧಾನ, ಆಕ್ರೋಶಕ್ಕೆ ಈ ಬಾರಿ ಮೊಯ್ಲಿ ತುತ್ತಾಗಬೇಕಾಯಿತು. ಒಂದು ರೀತಿ ಮೋದಿ ಹವಾ ಜೊತೆಗೆ ಕ್ಷೇತ್ರದಲ್ಲಿ ತೀವ್ರತರದಲ್ಲಿ ಸೃಷ್ಟಿಯಾಗಿದ್ದ ತನ್ನ ವಿರೋಧಿಅಲೆಗೆ ವಿರೋಧಿ ಮೊಯ್ಲಿ ಗೆಲುವು ಸಾಧಿಸ ಲಾಗದೇ ಬಿಜೆಪಿ ವಿರುದ್ಧ ಸೋಲು ಒಪ್ಪಿಕೊಳ್ಳಬೇಕಾಯಿತು.
● ಕಾಗತಿ ನಾಗರಾಜಪ್ಪ