Advertisement

ಮೋದಿ ಪ್ರಮಾಣವಚನ ಹಿನ್ನೆಲೆ; ಈಶ್ವರಪ್ಪ ನೇತೃತ್ವದಲ್ಲಿ 1 ಲಕ್ಷ ಲಡ್ಡು ವಿತರಣೆ

10:56 AM Jun 01, 2019 | Team Udayavani |

ಶಿವಮೊಗ್ಗ:ನರೇಂದ್ರ ಮೋದಿ ಪ್ರಮಾಣವಚನ ಹಿನ್ನೆಲೆಯಲ್ಲಿ ಮಾಜಿ ಡಿಸಿಎಂ, ಶಿವಮೊಗ್ಗ ನಗರ ಶಾಸಕ ಈಶ್ವರಪ್ಪ ನೇತೃತ್ವದಲ್ಲಿ ಶುಕ್ರವಾರ ಒಂದು ಲಕ್ಷ ಲಡ್ಡು ವಿತರಿಸಿದರು.ಶಿವಮೊಗ್ಗದ ಶಿವಪ್ಪ ನಾಯಕ ವೃತ್ತದಿಂದ ಗಾಂಧಿ ಬಜಾರ್ ಮೂಲಕ ರಾಮಣ್ಣ ಶ್ರೇಷ್ಠಿ ಪಾರ್ಕ್ ವರೆಗೂ ಪಾದಯಾತ್ರೆಯಲ್ಲಿ ತೆರಳಿ ಸಾರ್ವಜನಿಕರಿಗೆ ಲಡ್ಡು ವಿತರಣೆ ಮಾಡಿದರು.

Advertisement

ಈ ವೇಳೆ ಸುದ್ದಿಗಾರರ ಜೊತೆ ಮಾತನಾಡಿದ ಅವರು, ನರೇಂದ್ರ ಮೋದಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುವ ಕಾರ್ಯಕ್ರಮವನ್ನು ಜನ ಹಬ್ಬದ ರೀತಿಯಲ್ಲಿ ಆಚರಿಸುತ್ತಿದ್ದಾರೆ. ಇಂದು ಇಡೀ ದೇಶದಲ್ಲಿ ಹಬ್ಬದ ವಾತಾವರಣವಿದೆ. ಹೀಗಾಗಿ ಶಿವಮೊಗ್ಗದ 300 ಬೂತ್ ಗಳ ವ್ಯಾಪ್ತಿಯ ಎಲ್ಲ ಮನೆಗಳಿಗೆ ಸಿಹಿ ಹಂಚಿದ್ದೇವೆ ಎಂದರು.

ಶಿವಮೊಗ್ಗದ ಒಂದು ಲಕ್ಷ ಮನೆಗಳಿಗೆ ಲಡ್ಡು ಹಂಚಿದ್ದೇವೆ. ನಾವು ಕರ್ನಾಟಕದಲ್ಲಿ 22 ಲೋಕಸಭಾ ಕ್ಷೇತ್ರ ಗೆಲ್ಲುವ ನಿರೀಕ್ಷೆಯಲ್ಲಿದ್ದೆವು. ಆದರೆ ಜನ ನಮ್ಮನ್ನು 25 ಕ್ಷೇತ್ರಗಳಲ್ಲಿ ಗೆಲ್ಲಿಸಿದ್ದಾರೆ. ಜನತೆಗೆ ಎಷ್ಟು ಕೃತಜ್ಞತೆ ಸಲ್ಲಿಸಿದರೂ ಸಾಲದು. ಇನ್ನು ಐದು ವರ್ಷಗಳಲ್ಲಿ ದೇಶ ಉನ್ನತ ಮಟ್ಟಕ್ಕೆ ಏರುವುದರಲ್ಲಿ ಅನುಮಾನವೇ ಇಲ್ಲ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next