Advertisement

ಮೋದಿ ಮಾತಿಗಾಗಿ ಕಾತರ:ಇನ್ನೊಂದೆಡೆ ಕರಾಳ ದಿನ,ಪಕೋಡ ಪ್ರೊಟೆಸ್ಟ್‌

02:50 PM Feb 04, 2018 | Team Udayavani |

ಬೆಂಗಳೂರು: ಅರಮನೆ ಮೈದಾನದಲ್ಲಿ  ಭಾನುವಾರ ಆಯೋಜಿಸಲಾಗಿರುವ ಪರಿವರ್ತನಾ  ಯಾತ್ರೆ ಸಮಾರೋಪದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣಕ್ಕಾಗಿ ಎಲ್ಲರೂ ಪಕ್ಷದ ಲಕ್ಷಾಂತರ ಕಾರ್ಯಕರ್ತರು ಸೇರಿ ವಿರೋಧಿಗಳೂ ಕಾತರರಾಗಿ ಕಾಯುತ್ತಿದ್ದಾರೆ. 

Advertisement

ರಾಜ್ಯದ ಮೂಲೆಮೂಲೆಗಳಿಂದ ಲಕ್ಷಾಂತರ ಕಾರ್ಯಕರ್ತರು 500 ಕ್ಕೂ ಹೆಚ್ಚು ಬಸ್‌ಗಳು , ಕಾರುಗಳು  ಮತ್ತು ಬೈಕ್‌ಗಳಲ್ಲಿ ಆಗಮಿಸಿ ಜಮಾವಣೆ ಗೊಂಡಿದ್ದಾರೆ.  ಭಾನುವಾರ ಬೆಳಗ್ಗಿನಿಂದಲೆ ಕಾರ್ಯಕರ್ತರು ಬಂದು ಅರಮನೆ ಮೈದಾನದಲ್ಲಿ ಆಸೀನರಾಗಿದ್ದು  ಎಲ್ಲರಿಗೂ ಊಟದ ವ್ಯವಸ್ಥೆ ಮಾಡಲಾಗಿದೆ. 

ಪ್ರಧಾನಿ ಆಗಮನದ ಹಿನ್ನಲೆಯಲ್ಲಿ ಭದ್ರತೆಗಾಗಿ ವಿವಿಧ ಸ್ಥಳಗಳಲ್ಲಿ 4,500 ಕ್ಕೂ ಹೆಚ್ಚು ಪೊಲೀಸ್‌ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ . ಅವರಮನೆ ಮೈದಾನದಲ್ಲಿ 3 ಸಾವಿರಕ್ಕೂ ಹೆಚ್ಚು ಪೊಲೀಸರು ಭದ್ರೆ ಕೈಗೊಂಡಿದ್ದಾರೆ. 

ಸಮಾರಂಭದ ವೇದಿಕೆಯಲ್ಲಿ 27 ಪ್ರಮುಖರಿಗೆ ಮಾತ್ರ ಕುರ್ಚಿ ಹಾಕಲಾಗಿದೆ.
 
ಮಧ್ಯಾಹ್ನ 1 ಗಂಟೆಯ ವೇಳೆಗೆ ಪ್ರಧಾನಿ ಮೋದಿ ದೆಹಲಿಯಲ್ಲಿ ವಿಶೇಷ ವಿಮಾನವೇರಿ ಪ್ರಯಾಣ ಬೆಳೆಸಿದ್ದಾರೆ. 

ಕರಾಳ ದಿನ ಆಚರಣೆ 
ಮಹದಾಯಿ ನದಿ ನೀರು ಹಂಚಿಕೆ ವಿವಾದ ಬಗೆಹರಿಸುವಂತೆ ಆಗ್ರಹಿಸಿ  ಸ್ವಾತಂತ್ರ್ಯ ಉದ್ಯಾನದಲ್ಲಿ ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್‌ ನಾಗರಾಜ್‌ ನೇತೃತ್ವದಲ್ಲಿ ಎಲ್ಲ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಕರಾಳ ದಿನ ಆಚರಿಸುತ್ತಿದ್ದಾರೆ.  

Advertisement

ನೂರಾರು ಮಂದಿ ಕಾರ್ಯಕರ್ತರು  ಕಪ್ಪುಪಟ್ಟಿ ಕಟ್ಟಿಕೊಂಡು ಪ್ರತಿಭಟನೆ ನಡೆಸುತ್ತಿದ್ದು, ಸುತ್ತಲು ಪೊಲೀಸ್‌ ಸರ್ಪಗಾವಲು ಹಾಕಲಾಗಿದೆ.  ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಪ್ಪು ಬಾವುಟ ಪ್ರದರ್ಶನ ಮಾಡಲು ಮುಂದಾಗಿದ್ದು ಪೊಲೀಸರು ಅಶಕಾಶ ನೀಡುವ ಸಾಧ್ಯತೆಗಳು ಕಡಿಮೆ. 

ಜನಸಾಮಾನ್ಯರ ಪಕ್ಷದ ವತಿಯಿಂದಲೂ ನೂರಾರು ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ.  

ಪಕೋಡ ಪ್ರೊಟೆಸ್ಟ್‌ 

ಪಕೋಡ ಮಾರುವವನನ್ನು  ನಿರುದ್ಯೋಗಿ ಎನ್ನುತ್ತೀರಾ ಎಂಬ ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ಖಂಡಿಸಿ ಯವವಂತ ಪುರ ರಸ್ತೆಯಲ್ಲಿ 10 ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾರ್ಥಿಗಳು ಪಕೋಡ ಪ್ರೊಟೆಸ್ಟ್‌  ಮಾಡಿದರು. ಈ ವೇಳೆ ಪೊಲೀಸರು ಪ್ರತಿಭಟನಾ ನಿರತರನ್ನು ವಶಕ್ಕೆ ಪಡೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next