Advertisement

ಮೋದಿ ನೀಡಿದ್ದ ಭರವಸೆ ಹುಸಿ

07:15 AM Mar 18, 2019 | |

ಚಿಕ್ಕಬಳ್ಳಾಪುರ: ಪ್ರಧಾನಿ ನರೇಂದ್ರ ಮೋದಿ ಅವರು 2014ರಲ್ಲಿ ಚುನಾವಣಾ ಪೂರ್ವದಲ್ಲಿ ಕೊಟ್ಟ ಯಾವುದೇ ಭರವಸೆಯನ್ನು ಈಡೇರಿಸಿಲ್ಲ, ಮೋದಿ ಅವರು ಮೋಡಿ ಮಾಡುವುದು ಬಿಟ್ಟರೆ ದೇಶದ ಅಭಿವೃದ್ಧಿಗೆ ಏನು ಕೊಡುಗೆ ನೀಡಿಲ್ಲ ಎಂದು ಎಂದು ರಾಜ್ಯ ಕಾಂಗ್ರೆಸ್‌ ಕಾನೂನು ಘಟಕದ ಜಂಟಿ ಕಾರ್ಯದರ್ಶಿ ಎಸ್‌.ಎನ್‌.ನಾಗರಾಜ್‌ ಹೇಳಿದರು. 

Advertisement

ನಗರದ ಪತ್ರಕರ್ತರ ಭವನದಲ್ಲಿ ಭಾನುವಾರ ಈ ಕುರಿತು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕೇಂದ್ರದಲ್ಲಿ ಕಳೆದ ಐದು ವರ್ಷಗಳ ಕಾಲ ದುರಾಡಳಿತ ನೀಡಿದ್ದಾರೆ ಎಂದು ಆರೋಪಿಸಿದ ಅವರು, ಸರ್ವಾಧಿಕಾರಿ ಆಡಳಿತ ಕೊಟ್ಟ ಮೋದಿ ಅವರನ್ನು ಕ್ಷೇತ್ರದ ಮತದಾರರು ಈ ಬಾರಿ ತಿರಸ್ಕರಿಸಬೇಕು ಎಂದು ಹೇಳಿದರು. 

ಜನರನ್ನು ವಿಭಜಿಸುವ ಕಾರ್ಯ: ಈ ಹಿಂದೆ 10 ವರ್ಷಗಳ ಕಾಲ ಯುಪಿಎ-1 ಹಾಗೂ 2 ರ ಸರ್ಕಾರ ಕೊಟ್ಟ ಜನಪರವಾದ ಯೋಜನೆ, ಕಾರ್ಯಕ್ರಮಗಳನ್ನು ಬಿಜೆಪಿ ಸರ್ಕಾರ ನಕಲು ಮಾಡಿದ್ದು ಬಿಟ್ಟರೆ ಏನು  ಕೊಡುಗೆ ನೀಡಿಲ್ಲ. ಜನರನ್ನು ಜಾತಿ, ಧರ್ಮದ ಹೆಸರಿನಲ್ಲಿ ಕೆರಳಿಸಿ ವಿಭಜಿಸುವ ಕಾರ್ಯ ಮಾಡಿದೆ ಎಂದು ಆರೋಪಿಸಿದರು. 

ಕಾಂಗ್ರೆಸ್‌ ಸರ್ಕಾರ ಇದ್ದಾಗ ದೇಶಕ್ಕೆ ಆಧಾರ್‌ ಕಾರ್ಡ್‌ ಪರಿಚಯವಾಗಿದ್ದು, ಗ್ರಾಮೀಣಾಭಿವೃದ್ಧಿ, ಐಟಿಬಿಪಿ, ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ, ಮಾಹಿತಿ ಹಕ್ಕು ಕಾಯ್ದೆ, ಕಡ್ಡಾಯ ಶಿಕ್ಷಣ ಹಕ್ಕ ಮತ್ತಿತರ ಕಾನೂನುಗಳನ್ನು ಜಾರಿಗೆ ತಂದು ಬಡವರ ಪರವಾದ ಆಡಳಿತ ಕೊಟ್ಟಿದೆ.

ಆದರೆ ಕಳೆದ ಐದು ವರ್ಷದಲ್ಲಿ ಮೋದಿ ಸರ್ಕಾರ ಅಂಬಾನಿ, ಅದಾನಿಯನ್ನು ಬೆಳೆಸುವುದು ಬಿಟ್ಟರೆ ದೇಶದಲ್ಲಿ ಬಡತನ, ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಲಿಲ್ಲ. ಕೃಷಿ, ಕೈಗಾರಿಕೆ, ಶಿಕ್ಷಣ ಕ್ಷೇತ್ರವನ್ನು ಬಿಜೆಪಿ ಸರ್ಕಾರ ಸಂಪೂರ್ಣ ಕಡೆಗಣಿಸಿತು ಎಂದು ಅವರು ಕಿಡಿಕಾರಿದರು. ರಾಜ್ಯದಲ್ಲಿ ಕಾಂಗ್ರೆಸ್‌ ಜೆಡಿಎಸ್‌ ಮೈತ್ರಿ ಸರ್ಕಾರ ಇದ್ದು, ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಗೆಲುವಿಗೆ ಎರಡು ಪಕ್ಷಗಳ ನಾಯಕರು, ಮುಖಂಡರು ಶ್ರಮಿಸಬೇಕಿದೆ ಎಂದರು. 

Advertisement

ರಾಜಕೀಯಕ್ಕೆ ಬಳಕೆ: ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಕೀಲ ಕೆ.ಜಯರಾಮರೆಡ್ಡಿ ಮಾತನಾಡಿ, ಪಾಕಿಸ್ತಾನದ ಉಗ್ರರ ತಾಣಗಳ ಮೇಲೆ ಭಾರತೀಯ ಸೇನೆ ನಡೆಸಿದ ವೈಮಾನಿಕ ದಾಳಿಯನ್ನು ಬಿಜೆಪಿ ರಾಜಕೀಯವಾಗಿ ಬಳಸಿಕೊಳ್ಳುವ ಮೂಲಕ ದೇಶದ ಸೈನಿಕರಿಗೆ ಅವಮಾನ ಮಾಡುತ್ತಿದೆ ಎಂದು ದೂರಿದರು. 

ರಾಜ್ಯ ಕಾಂಗ್ರೆಸ್‌, ಜೆಡಿಎಸ್‌ ಸಮ್ಮಿಶ್ರ ಸರ್ಕಾರ ಕಳೆದ ಆರೇಳು ತಿಂಗಳಿಂದ ರೈತರ ಸಾಲ ಮನ್ನಾ ಸೇರಿದಂತೆ ಅನೇಕ ಜನಪರವಾದ ಯೋಜನೆಗಳನ್ನು ಜಾರಿಗೆ ತಂದಿದೆ. ಸಂಸದ ಎಂ.ವೀರಪ್ಪ ಮೊಯ್ಲಿ ಕೂಡ ಈ ಭಾಗಕ್ಕ ಎತ್ತಿನಹೊಳೆ ಸೇರಿದಂತೆ ಜಿಲ್ಲೆಯ ನೀರಾವರಿ ಸಮಸ್ಯೆ ನೀಗಿಸಲು ಪ್ರಾಮಾಣಿಕವಾಗಿ ದುಡಿಯುತ್ತಿದೆ ಎಂದರು. 

ಸುದ್ದಿಗೋಷ್ಠಿಯಲ್ಲಿ  ಕಾಂಗ್ರೆಸ್‌ ಕಾನೂನು ಹಾಗೂ ಮಾನವ ಹಕ್ಕು ವಿಭಾಗದ ತಾಲೂಕು ಅಧ್ಯಕ್ಷ ವಕೀಲ ಮುನಿರಾಜು, ಜಿಲ್ಲಾ ಖಜಾಂಚಿ ಗೋಪಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next