ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಮಹತ್ವಾಕಾಂಕ್ಷೆಯ ಮೇಕ್ ಇನ್ ಇಂಡಿಯಾ ಯೋಜನೆಯಿಂದಾಗಿ ರಕ್ಷಣಾ ಇಲಾಖೆಗೆ 1 ಲಕ್ಷ ಕೋಟಿ ರೂ. ವಿದೇಶಿ ವಿನಿಮಯ ರೂಪದಲ್ಲಿ ಉಳಿತಾಯವಾಗಿದೆ. ಕಳೆದ ಎರಡು ವರ್ಷಗಳಲ್ಲಿ, ಆರು ಕ್ಷಿಪಣಿಗಳನ್ನು ಡಿಆರ್‌ಡಿಒ ದೇಶೀಯವಾಗಿ ನಿರ್ಮಿಸಿದೆ. ಅಲ್ಲದೆ ಇನ್ನಷ್ಟು ಹೊಸ ಶಸ್ತ್ರಗಳು ಅಭಿವೃದ್ಧಿಗೊಳ್ಳುತ್ತಿವೆ. ಸರಕಾ ರದ ಈ ನಿರ್ಧಾರದಿಂದಾಗಿ ದೇಶದ ರಕ್ಷಣಾ ವಲಯದ ಕಂಪೆನಿಗಳಿಗೆ ಹೆಚ್ಚು ಪ್ರೋತ್ಸಾಹ ನೀಡಿದಂತಾಗಿದೆ. ಇಲ್ಲವಾದರೆ ಇದನ್ನು ನಾವು ವಿದೇಶದಿಂದ ಖರೀದಿಸಬೇಕಾಗಿತ್ತು ಎಂದು ರಕ್ಷಣಾ ವಲಯದ ಮೂಲಗಳು ತಿಳಿಸಿವೆ.
ಎನ್‌ಡಿಎ ಸರಕಾರದಲ್ಲಿ ಈವರೆಗೆ ಮೂವರು ರಕ್ಷಣಾ ಸಚಿವರಾಗಿದ್ದರೂ ಎಲ್ಲರೂ ದೇಶಿ ಯೋಜ ನೆಗಳಿಗೆ ಒತ್ತು ನೀಡಿದ್ದಾರೆ. ಸೇನಾಧಿ ಕಾರಿಗಳು ಕೂಡ ದೇಶೀಯವಾಗಿ ವಿನ್ಯಾಸ ಗೊಳಿಸಿದ ಶಸ್ತ್ರಾಸ್ತ್ರಗಳಿಗೇ ಆದ್ಯತೆ ನೀಡಿದ್ದು, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಸಂಶೋಧನೆಗೆ ಹೆಚ್ಚಿನ ಕಾಲಾವಕಾಶ ನೀಡಲಾಗಿದೆ.
ಆಕಾಶ್ ಯಶಸ್ಸು: ಈ ಹಿಂದೆ ಆಕಾಶ್ ಕ್ಷಿಪಣಿಗಳನ್ನು ಡಿಆರ್‌ಡಿಒ ಅಭಿವೃದ್ಧಿಪಡಿಸಿ ತ್ತಾದರೂ, ಇದನ್ನು ಖರೀದಿಸಲು ಸರಕಾರ ಒಪ್ಪಿರಲಿಲ್ಲ. ಬದಲಿಗೆ ವಿದೇಶದಿಂದ ಶಾರ್ಟ್ ರೇಂಜ್ ಕ್ಷಿಪಣಿಗಳನ್ನು ಖರೀದಿಸಲು ನಿರ್ಧರಿಸ ಲಾಗಿತ್ತು. ಆದರೆ ಆಕಾಶ್ ಕ್ಷಿಪಣಿಗಳನ್ನು ಡಿಆರ್‌ಡಿಒ ಸುಧಾರಿಸಿದ್ದು, ಎನ್‌ಡಿಎ ಸರಕಾರ ಬಂದ ನಂತರ ಇದಕ್ಕೆ ಆದ್ಯತೆ ನೀಡಲಾಯಿತು. ಈ ಹಿನ್ನೆಲೆಯಲ್ಲಿ ರಷ್ಯಾ, ಇಸ್ರೇಲ್ ಮತ್ತು ಸ್ವೀಡನ್‌ನಿಂದ ಖರೀದಿಸಲು ನಿರ್ಧರಿಸಲಾಗಿದ್ದ ಯೋಜನೆಯನ್ನು ರದ್ದುಗೊಳಿಸಿ, ಆಕಾಶ್ ಖರೀದಿಸಲು ನಿರ್ಧರಿಸಲಾಗಿದೆ. ಇದರಿಂದ 30 ಸಾವಿರ ಕೋಟಿ ವಿದೇಶಿ ವಿನಿಮಯ ಉಳಿತಾಯ ವಾಗಿದೆ. ಇನ್ನೊಂದೆಡೆ ಡಿಆರ್‌ಡಿಒದ ಹೆಲಿನಾ ಮತ್ತು ಎನ್‌ಎಜಿ ಪರೀಕ್ಷೆಗಳೂ ಯಶಸ್ವಿಯಾಗು ತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ವಿದೇಶ ವಿನಿಮಯ ಉಳಿತಾಯವಾಗಲಿದೆ.
9 ಲಕ್ಷ ಹಿರಿಯ ನಾಗರಿಕರಿಂದ ಸಬ್ಸಿಡಿ ತ್ಯಾಗ
ಹೊಸದಿಲ್ಲಿ: ರೈಲ್ವೆ ಇಲಾಖೆಯ ಮನವಿ ಮೇರೆಗೆ ಕಳೆದ 3 ತಿಂಗಳಲ್ಲಿ 9 ಲಕ್ಷ ಹಿರಿಯ ನಾಗರಿಕರು “ಟಿಕೆಟ್ ಸಬ್ಸಿಡಿಯನ್ನು ಸ್ವಯಂ ಪ್ರೇರಿತರಾಗಿ ಬಿಟ್ಟುಕೊಟ್ಟಿದ್ದು, ಪರಿಣಾಮ ಇಲಾಖೆಗೆ 40 ಕೋಟಿ ರೂ. ಉಳಿತಾಯ ವಾಗಿದೆ. ಕಳೆದ ವರ್ಷ ಈ ಯೋಜನೆಯನ್ನು ಇಲಾಖೆ ಆರಂಭಿಸಿತ್ತು. ಇದರ ಪ್ರಕಾರ, ಹಿರಿಯ ನಾಗರಿಕರು ರೈಲ್ವೆ ಟಿಕೆಟ್ ಖರೀದಿ ಸಮಯದಲ್ಲಿ ಶೇ. 50ರಷ್ಟು ರಿಯಾಯಿತಿ ಪಡೆಯಬಹುದು ಅಥವಾ ಟಿಕೆಟ್‌ನ ಪೂರ್ತಿ ಹಣ ಸಂದಾಯ ಮಾಡುವ ಅವಕಾಶ ನೀಡಲಾಗಿತ್ತು. ರೈಲ್ವೇ ಇಲಾಖೆ ಆರ್ಥಿಕ ಹೊರೆ ಕಡಿಮೆ ಮಾಡಲು ಈ ಯೋಜನೆ ಆರಂಭಿಲಾಗಿತ್ತು. ಜುಲೈ – ಅಕ್ಟೋಬರ್ ಅವಧಿಯಲ್ಲಿ 22 ಲಕ್ಷ ಪುರುಷರು, 2.67 ಲಕ್ಷ ಮಹಿಳೆಯರು ಸಬ್ಸಿಡಿ ತ್ಯಾಗ ಮಾಡಿದ್ದಾರೆ.