ಹೊಸದಿಲ್ಲಿ: ಗುಜರಾತ್ ಚುನಾವಣಾ ಕಾವು ಏರುತ್ತಿದ್ದಂತೆ ರಾಜಕೀಯ ವಾಕ್ಸಮರ ಮುಂದುವರಿದಿದ್ದು ಮಾಜಿ ಹಣಕಾಸು ಸಚಿವ, ಕಾಂಗ್ರೆಸ್ ಹಿರಿಯ ನಾಯಕ ಪಿ.ಚಿದಂಬರಂ ಬಿಜೆಪಿ ನಾಯಕರ ವಿರುದ್ಧ ಕಿಡಿ ಕಾರಿದ್ದಾರೆ.
ಸರಣಿ ಟ್ವೀಟ್‌ಗಳ ಮೂಲಕ ಪ್ರಧಾನಿ ಮೋದಿ ಕೇಂದ್ರಿಕೃತ ಚುನಾವಣಾ ಪ್ರಚಾರದ ವಿರುದ್ಧ ಕಿಡಿ ಕಾರಿದ್ದು,’ಮೋದಿ ಅವರ ಪ್ರಚಾರ ಅವರ ಬಗ್ಗೆಯೇ ಆಗಿದೆ. ಅವರ ಹಿಂದಿನ ಗುಜರಾತ್ ನ ಕುರಿತು ಹೇಳುತ್ತಿದ್ದಾರೆ. ಅವರು ತಾನು ಭಾರತದ ಪ್ರಧಾನಿ ಎನ್ನುವುದನ್ನೇ ಮರೆತಿದ್ದಾರೆ’ ಎಂದು ಬರೆದಿದ್ದಾರೆ.
‘ಗುಜಾರಾತ್ ಚುನಾವಣೆ ಮೋದಿ ಅವರ ವೈಯಕ್ತಿಕ ಅಲ್ಲ,ಇದು ಅಚ್ಛೇ ದಿನ್ 42 ತಿಂಗಳಿನಲ್ಲಿ ಬರದೇ ಇರುವ ಕುರಿತಾಗಿದ್ದು’ ಎಂದು ಇನ್ನೊಂದು ಟ್ವೀಟ್‌ನಲ್ಲಿ ಕುಟುಕಿದ್ದಾರೆ.
ಮೋದಿ ಅವರ ಗುಜಾರಾತ್ ಮಾದರಿ ಅಭಿವೃದ್ಧಿಯನ್ನು ಟೀಕಿಸಿರುವ ಚಿದಂಬರಂ ‘ಪ್ರಧಾನಿ ಯಾಕೆ ನಿರುದ್ಯೋಗದ ಕುರಿತು ಮಾತನಾಡುತ್ತಿಲ್ಲ? ಹೂಡಿಕೆಯಲ್ಲಿ ಕೊರತೆ, ರಫ್ತು ಉದ್ಯಮದಲ್ಲಿ ಕಳಪೆ ಸಾಧನೆ ಮತ್ತು ಬೆಲೆ ಏರಿಕೆ ಬಗ್ಗೆ ಅವರ ಬಳಿ ಯಾವುದೇ ಉತ್ತರವಿಲ್ಲ’ ಎಂದು ಬರೆದಿದ್ದಾರೆ.
ಇನ್ನೊಂದು ಟ್ವೀಟ್‌ನಲ್ಲಿ ‘ಮೋದಿ ಅವರಿಗೆ ಗಾಂಧೀಜಿ ಅವರು ಭಾರತೀಯ, ಗುಜರಾತ್‌ನವರು ಮತ್ತು ರಾಷ್ಟ್ರಪಿತ ಎನ್ನುವುದು ಮರೆತು ಹೋಗಿದೆ. ಗಾಂಧೀಜಿ ಅವರು ಸ್ವಾತಂತ್ರ್ಯ ಹೋರಾಟಕ್ಕೆ ಕಾಂಗ್ರೆಸ್ ಪಕ್ಷವನ್ನು ಅಸ್ತ್ರವನ್ನಾಗಿ ಬಳಸಿಕೊಂಡಿದ್ದರು’ ಎಂದು ಬರೆದಿದ್ದಾರೆ.
‘ಪ್ರಧಾನಿ ಮತ್ತು ಬಿಜೆಪಿ ಈಗ ಹತಾಶರಾಗಿ ಸರ್ದಾರ್ ಪಟೇಲ್‌ರನ್ನು ಅಪ್ಪಿಕೊಳ್ಳುತ್ತಿದ್ದು, ಆದರೆ ಅವರು ಆರ್‌ಎಸ್‌ಎಸ್‌ನ ವಿಭಜಕ ಸಿದ್ಧಾಂತವನ್ನು ವಿರೋಧಿಸಿದ್ದರು’ ಎಂದು ಬರೆದಿದ್ದಾರೆ.