ತುಮಕೂರು: ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಎನ್‌ಡಿಎ ಸರ್ಕಾರದ ವಿತ್ತ ಸಚಿವ ಅರುಣ್ ಜೇಟ್ಲಿ ಗುರುವಾರ ಸಂಸತ್ ಭವನದಲ್ಲಿ ಮಂಡಿಸಿದ 2018-19 ನೇ ಸಾಲಿನ ಬಜೆಟ್‌ನಲ್ಲಿ ಕಲ್ಪತರು ನಾಡಿಗೆ ಬಂಪರ್ ಕೊಡುಗೆ ನೀಡುತ್ತಾರೆಂದು ಇಟ್ಟಿದ್ದ ನಿರೀಕ್ಷೆ ಉಸಿಯಾಗಿದೆ ಆದರೆ ರಾಜ್ಯದಲ್ಲೇ ರೈಲ್ವೆ ಯೋಜನೆಗೆ ಜಿಲ್ಲೆಗೆ ಕೊಡುಗೆ ನೀಡಿರುವುದು ಸಂತಸ ಉಂಟು ಮಾಡಿದ್ದರೂ ಜಿಲ್ಲೆಯ ಅಭಿವೃದ್ಧಿಗಾಗಿ ನಿರೀಕ್ಷಿಸಿದಂತೆ ಬಜೆಟ್ ನಲ್ಲಿ ಘೋಷಣೆ ಆಗದೆ ಇರುವುದು ನಿರಾಶೆಯಾಗಿದೆ.
ಕೈಗಾರಿಕಾ ಕಾರಿಡಾರ್ ಘೋಷಣೆಯಿಲ್ಲ: ರಾಜಧಾನಿ ಬೆಂಗಳೂರಿಗೆ ಉಪನಗರವಾಗಿ ಬೆಳವಣಿಗೆಯಾಗುತ್ತಿರುವ ತುಮಕೂರಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದಲ್ಲಿ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಗುರುವಾರ ಮಂಡಿಸಿದ 5ನೇ ಬಜೆಟ್ ನಲ್ಲಿ ಕಲ್ಪತರು ನಾಡಿಗೆ ಕೈಗಾರಿಕಾ ಕಾರಿಡಾರ್‌ಮತ್ತು ಬೆಂಗಳೂರು-ಮುಂಬೈ ಇಂಡಸ್ಟ್ರಿಯಲ್ ಕಾರಿಡಾರ್‌ಯೋಜನೆಗಳಿಗೆ ಹೆಚ್ಚಿನ ಅನುದಾನಗಳನ್ನು ಘೋಷಣೆ ಮಾಡುತ್ತಾರೆ ಎನ್ನುವ ನಿರೀಕ್ಷೆ ಇತ್ತು ಅದು ಹುಸಿಯಾದಂತೆ ಕಾಣುತ್ತದೆ
ಆದರೆ ಜಿಲ್ಲೆಗೆ ನೇರವಾಗಿ ಸಬ್‌ಅರ್ಬನ್ ರೈಲು, ರಕ್ಷಣಾ ಇಲಾಖೆ ಕಾರಿಡಾರ್, ಮೆಡಿಕಲ್ ಕಾಲೇಜು ಪ್ರಯೋಜನ ಪಡೆಯಬಹುದಾಗಿರುವುದು ಸಂತಸ ಉಂಟು ಮಾಡಿದೆ. ಕೈಗಾರಿಕಾ ಕ್ಷೇತ್ರದಲ್ಲಿ ಹೆಚ್ಚು ಬೆಳವಣಿಗೆಗೆ ಪೂರಕವಾಗುವಂತೆ ವಿಶ್ವಮಟ್ಟದಲ್ಲಿ ತುಮಕೂರು ಬೆಳವಣಿಗೆಯಾಗುವಂತೆ ಗುಡಿ ಕೈಗಾರಿಕೆಗಳಿಗೆ ಹೆಚ್ಚು ಉತ್ತೇಜನ ನೀಡುವಂತಹ ಯೋಜನೆಗಳು ಚುನಾವಣೆಯ ಹೊಸ್ತಿಲಿನ ಈ ಬಜೆಟ್ ನಲ್ಲಿ ಘೋಷಣೆ ಆಗುತ್ತೆ ಎಂದು ನಿರೀಕ್ಷೆ ಜಿಲ್ಲೆಯ ಜನರಲ್ಲಿ ಇತ್ತು.
ಕೃಷಿಕರ ಸಂತಸ: ಈ ಬಜೆಟ್ ನಲ್ಲಿ ರೈತರಿಗೆ ಕನಿಷ್ಠ ದರ, ಬೆಳೆಗಳಿಗೆ ಬೆಲೆ ನಿಗದಿ ಸ್ವಾತಂತ್ರ್ಯ, ರೈತರಿಗೆ ಗ್ರಾಮಾಂತರ-ಇ ಬಜಾರ್, ರೈತರ ಕ್ಷಸ್ಟರ್, ಬಿದಿರು ಬೆಳೆ ಹಸಿರು ಬಂಗಾರ ಘೋಷಣೆ, ಮೀನುಗಾರರಿಗೆ, ಸಾವಯವ ಕೃಷಿಗೆ ಒತ್ತು, ಕೃಷಿ ಉತ್ಪ$ನ್ನ ಕಂಪನಿಗಳಿಗೆ ಶೇಕಡ 100 ರಷ್ಟು ತೆರಿಗೆ ರಹಿತಕ್ಕೆ ಜಿಲ್ಲೆಯ ಜನ ಸ್ವಾಗತಿಸಿದ್ದಾರೆ.
ದುಡಿಮೆದಾರರಿಗೆ ಒಂದೇ ದಿವಸದಲ್ಲಿ ಕಂಪನಿ ನೋಂದಣೆ, 2-3 ದಿವಸದಲ್ಲಿ ಪಾಸ್ ಪೋರ್ಟ್, ಆಪರೇಷನ್ ಗ್ರೀನ್, ಬಡವರಿಗೆ ಸ್ವಂತ ಮನೆ, ಉಚಿತ ವಿಧ್ಯುತ್, ಉಚಿತ ಗ್ಯಾಸ್, 3 ಸಂಸತ್ ಕ್ಷೇತ್ರಕ್ಕೆ ಒಂದು ಮೆಡಿಕಲ್ ಕಾಲೇಜು, ನರ್ಸರಿಯಿಂದ 12 ನೇ ತರಗತಿವರಿಗೆ ಬ್ಲಾಕ್ ಬೋರ್ಡ್ ಬದಲು ಡಿಜಿಟಲ್ ಬೋರ್ಡ್ ವ್ಯವಸ್ಥೆ, ಏಕಲವ್ಯ ಶಾಲೆ,ನ್ಯಾಷನಲ್ ಹೆಲ್ತ್ ಪಾಲಿಸಿ, ಎಸ್‌ಸಿ ಎಸ್‌ಟಿ ಗಳಿಗೆ ವಿಶೇಷ ಯೋಜನೆ,
ಮಹಿಳೆಯರಿಗೆ 26 ವಾರಗಳ ಹೆರಿಗೆ ರಜಾ, ಸ್ವಶಕ್ತಿ ಸಂಘಗಳ ಸಾಲ ಹೆಚ್ಚಳ, ಜಿಲ್ಲೆಗೊಂದು ಕೌಶಲ್ಯ ಕೇಂದ್ರ ಹೀಗೆ ಹಲವಾರು ಯೋಜನೆಗಳು ಉತ್ತಮವಾಗಿವೆ. ನಿರುದ್ಯೋಗಿಗಳಿಗೆ ಆಧಾರ್ ಮಾದರಿಯಲ್ಲಿ ಉದ್ಯೋಗ ಆಧಾರ್ ನಂಬರ್ ನಿಜಕ್ಕೂ ಉತ್ತಮವಾಗಿದೆ. ಇದರಿಂದ ಅಕೌಂಟಬಿಲಿಟಿ ದೊರಕಿದಂತಾಗುತ್ತದೆ, ನಿಜಕ್ಕೂ ನೀಡ್ ಬೇಸ್ಡ್ ಆಗಲಿದೆ ಈ ಎಲ್ಲಾ ಯೋಜನೆಗಳ ಬಗ್ಗೆ ನಾಗರಿಕರಿಂದ ಪ್ರಶಂಸೆ ಕೇಳಿ ಬಂದಿದೆ.
* ಚಿ.ನಿ. ಪುರುಷೋತ್ತಮ್