Advertisement

Modi ಅವರ ದೇಹ ಭಾಷೆ, ಆತ್ಮವಿಶ್ವಾಸದಲ್ಲಿ ಭಾರೀ ಬದಲಾವಣೆಯಾಗಿದೆ: ರಾಹುಲ್ ಗಾಂಧಿ

09:13 PM Aug 22, 2024 | Team Udayavani |

ಜಮ್ಮು: ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರ ದೇಹ ಭಾಷೆ, ಆತ್ಮವಿಶ್ವಾಸದಲ್ಲಿ ಭಾರೀ ಬದಲಾವಣೆಯಾಗಿದೆ ಎಂದು ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿಕೆ ನೀಡಿದ್ದಾರೆ.

Advertisement

ಗುರುವಾರ(ಆ 21)ಚುನಾವಣ ಪ್ರಚಾರ ಸಭೆಯಲ್ಲಿ ಮಾತನಾಡಿದ ರಾಹುಲ್, ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು. ‘ಚುನಾವಣಾ ಫಲಿತಾಂಶದ ನಂತರ ಮೋದಿ ಅವರ ದೇಹ ಭಾಷೆ ಮತ್ತು ಆತ್ಮವಿಶ್ವಾಸವು ತೀವ್ರವಾಗಿ ಬದಲಾಗಿದೆ. ಕಾಂಗ್ರೆಸ್ ಕಾರ್ಯಕರ್ತರು ಪ್ರಧಾನಿ ಮೋದಿಯವರ ವಿಶ್ವಾಸವನ್ನು ಅಲುಗಾಡಿಸಿದ್ದಾರೆ. ಅವರು ಚುನಾವಣೆಯ ಮೊದಲು ಪ್ರದರ್ಶಿಸಿದ ಆತ್ಮ ವಿಶ್ವಾಸದ ದೇಹ ಭಾಷೆಯನ್ನು ಕಳೆದುಕೊಂಡಿದ್ದಾರೆ ಎಂದರು.

ಜಮ್ಮು ಮತ್ತು ಕಾಶ್ಮೀರದ ಜನರೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿದ್ದೇವೆ. ನನ್ನ ಕುಟುಂಬದ ಹಿನ್ನೆಲೆ ನಿಮ್ಮ ರಾಜ್ಯದ್ದಾಗಿದೆ. ದೆಹಲಿಯಲ್ಲಿ ನಾನು ನಿಮ್ಮ ಸಿಪಾಯಿ ಎಂದು ಪರಿಗಣಿಸಿ. ನನ್ನ ಮನೆಯ ಬಾಗಿಲು ಕಾಂಗ್ರೆಸ್‌ನ ಸಿಂಹಗಳು(ಪಕ್ಷದ ಕಾರ್ಯಕರ್ತರಿಗೆ) ಯಾವಾಗಲೂ ತೆರೆದಿರುತ್ತದೆ. ನೀವು ನನಗೆ ಆದೇಶವನ್ನು ಮಾತ್ರ ನೀಡಬೇಕು ಮತ್ತು ನಾನು ನಿಮ್ಮ ಮುಂದೆ ಹಾಜರಿರುತ್ತೇನೆ” ಎಂದರು.

ಮಾಜಿ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಅವರ ಹೆಸರು ಹೇಳದೆ ಪಕ್ಷದ ಕಾರ್ಯಕರ್ತರಿಗೆ “ಕಷ್ಟದ ಸಮಯ ಬಂದಾಗ ಮತ್ತು ನಿಮ್ಮ ಮತ್ತು ನಿಮ್ಮ ಸಿದ್ಧಾಂತದ ಮೇಲೆ ದಾಳಿ ನಡೆದಾಗ, ನೀವು ಇನ್ನೂ ನೆಲದ ಮೇಲೆ ಹೋರಾಡಿ, ಧ್ವಜವನ್ನು ಹಾರಿಸಿದ್ದೀರಿ. ಹಲವಾರು ಜನರು ಧ್ವಜವನ್ನು ಎಸೆದು ಓಡಿಹೋದರು. ನೀವು ಓಡಿಹೋಗಲಿಲ್ಲ. ಗುಂಡುಗಳು, ಕೋಲುಗಳು ಮತ್ತು ನಿಂದನೆಗಳನ್ನು ಎದುರಿಸಿದ್ದೀರಿ. ನಿಮ್ಮ ನೆಲದಲ್ಲಿ ದೃಢವಾಗಿ ನಿಂತಿದ್ದೀರಿ. ಹಾಗಾಗಿ ನಾನು ನಿಮ್ಮನ್ನು ಕಾಂಗ್ರೆಸ್ಸಿನ ಸಿಂಹಗಳು ಎಂದು ಕರೆಯುತ್ತೇನೆ’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next