Advertisement

ಡಿಸಿಎಂ ಕಾಲೇಜಿನಲ್ಲಿ ಮೋದಿ…ಘೋಷಣೆ

07:36 AM Feb 26, 2019 | |

ತುಮಕೂರು: ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಕಾಲೇಜಿನಲ್ಲಿಯೇ ಮೊಳಗಿತು ವಿದ್ಯಾರ್ಥಿಗಳಿಂದ ಮೋದಿ… ಮೋದಿ… ಘೋಷಣೆ.

Advertisement

ನಗರದ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಎಂಬಿಎ ಸೆಮಿನಾರ್‌ ಹಾಲ್‌ನಲ್ಲಿ ಜಿಲ್ಲಾ ಯುವ ಕಾಂಗ್ರೆಸ್‌ ವತಿಯಿಂದ ಸೋಮವಾರ ಏರ್ಪಡಿಸಿದ್ದ ದೇಶದ ಶಕ್ತಿ ಮಹಿಳಾ ಶಕ್ತಿ ಮತ್ತು ವಿಭಿನ್ನ ವಿಚಾರಗಳ ಮುಖಾಮುಖೀ ಕಾರ್ಯಾಗಾರದಲ್ಲಿ ಕಾಂಗ್ರೆಸ್‌ನ ಚೇತನ್‌ ರೆಡ್ಡಿ ಕಾರ್ಯಾಗಾರದಲ್ಲಿ ಆರಂಭದಿಂದಲೂ ಮೋದಿ ಸರ್ಕಾರ ಮತ್ತು ಆಡಳಿತದ ವಿರುದ್ಧವೇ ಹೆಚ್ಚು ಮಾತನಾಡುತ್ತಿದ್ದುದ್ದನ್ನು ಗಮನಿಸಿದ ವಿದ್ಯಾರ್ಥಿಗಳು ಸಮಾರಂಭದಲ್ಲಿಯೇ ಮೋದಿ.. ಮೋದಿ.. ಎಂದು ಘೋಷಣೆ ಕೂಗಿದರು.

ಕೇಂದ್ರ ಸರ್ಕಾರ ಉದ್ಯೋಗ ಸೃಷ್ಟಿ ಮಾಡುತ್ತೇನೆ ಎಂದು ಹೇಳಿ, ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿರುವ ಮೋದಿ ಯಾವುದೇ ಸಾಧನೆಗಳನ್ನು ಮಾಡಿಲ್ಲ. ರೈತರ ಸಾಲಮನ್ನಾ ಮಾಡಿಲ್ಲ ಎಂದು ನಿರಂತರವಾಗಿ ಮೋದಿ ವಿರುದ್ಧವೇ ಟೀಕಿಸುತ್ತಿದ್ದರು.

ಪ್ರಾಂಶುಪಾಲರ ಪ್ರತಿರೋಧ: ವಿದ್ಯಾರ್ಥಿಗಳು ಚೇತನ್‌ ರೆಡ್ಡಿ ಟೀಕೆಗೆ ಪ್ರತಿಕ್ರಿಯಿಸುತ್ತಿದ್ದದ್ದನ್ನು ಗಮನಿಸುತ್ತಿದ್ದ ಎಸ್‌ಎಸ್‌ಐಬಿಎಂ ಪ್ರಾಂಶುಪಾಲ ಪ್ರೊ.ಎನ್‌.ಎಸ್‌.ರವಿಕುಮಾರ್‌ ಪ್ರತ್ಯುತ್ತರವಾಗಿ, ನೀವು ಸಂವಾದ ಎಂದು ಹೇಳಿ ಕೇವಲ ಮೋದಿ ಸರ್ಕಾರದ ವಿರುದ್ಧ ದೂರುತ್ತಾ, ಕಾಂಗ್ರೆಸ್‌ ಪರವಾಗಿ ಪ್ರಚಾರ ಮಾಡುತ್ತಿರುವಂತಿದೆ ಈ ಸಂವಾದ. ನ್ಯಾಯಯುತವಾದ ಸಂವಾದ ನಡೆದರೆ ಒಳ್ಳೆಯದು ಇಲ್ಲವಾದರೆ ತೊಂದರೆ ಏನಾದರೂ ಉಂಟಾದರೆ ಜವಾಬ್ದಾರಿ ನನ್ನದಲ್ಲ ಎಂದು ಹೇಳಿದರು.

ಮನಮೋಹನ್‌ ಸಿಂಗ್‌ ಆಡಳಿತದಲ್ಲಿ ಪೆಟ್ರೋಲ್‌ ಬೆಲೆ ಹೆಚ್ಚಾಗಿದ್ದಕ್ಕೆ ನೀವು ಕಾರಣ ಕೊಡ್ತಿರಾ?. ಈಗ ಹೆಚ್ಚಾದರೆ ಕಾರಣ ಕೇಳ್ತಿರಾ, ಇದ್ಯಾವ ನ್ಯಾಯ?. ಯುವಜನತೆಗೆ ಒಂದು ಒಳ್ಳೆ ಕಾರ್ಯಾಗಾರ ನಡೆಯುತ್ತಿದೆ. ಈ ವೇಳೆ ಬರೀ ಒಂದು ಪಕ್ಷದ ಬಗ್ಗೆ ಟೀಕೆ ಟಿಪ್ಪಣಿ ಮಾಡಬಾರದು ಎಂದು ಪ್ರತಿರೋಧ ವ್ಯಕ್ತಪಡಿಸಿದರು.

Advertisement

ಮುಜಗರ: ನಿರುದ್ಯೋಗ ಸಮಸ್ಯೆ ಐದು ವರ್ಷದಿಂದ ಮಾತ್ರ ಇಲ್ಲ. ಸ್ವಾತಂತ್ರ ನಂತರದಿಂದ ನಿರಂತರವಾಗಿ ನಿರುದ್ಯೋಗ ಸಮಸ್ಯೆ ಇದೆ. ಮೋದಿಯವರನ್ನು ಮಾತ್ರ ಯಾಕೆ ಟೀಕಿಸುತ್ತೀರಾ? ಎಂದು ಪ್ರಶ್ನಿಸಿದರು. ಈ ವೇಳೆ ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು ಸಂಪನ್ಮೂಲ ವ್ಯಕ್ತಿಗಳ ವಿರುದ್ಧ ವಿದ್ಯಾರ್ಥಿಗಳು ಬೇಸರ ವ್ಯಕ್ತಪಡಿಸಿದರು. ಅಲ್ಲದೇ ಮೋದಿ.. ಮೋದಿ.. ಎಂದು ಘೋಷಣೆ ಕೂಗಿದರು. ಈ ಘಟನೆಯಿಂದ ಕಾರ್ಯಕ್ರಮದ ಆಯೋಜಕರಿಗೆ ಒಂದು ರೀತಿಯಲ್ಲಿ ಮುಜಗರವಾಯಿತು.

ಒಂದು ಪಕ್ಷಕ್ಕೆ ಸೀಮಿತ: ಈ ಕಾರ್ಯಾಗಾರದಲ್ಲಿ ಯುವಜನತೆಯ ಅಭಿಪ್ರಾಯಗಳನ್ನು ಪಡೆದು ಯುವಕರನ್ನು ಪಕ್ಷಕ್ಕೆ ಆಕರ್ಷಿಸಲು ಸರ್ಕಾರದ ಹಲವು ಯೋಜನೆಗಳ ಕುರಿತ ವಿಭಿನ್ನ ವಿಚಾರಗಳ ಮುಖಾಮುಖೀ ಕಾರ್ಯಾಗಾರದಲ್ಲಿ ಹೆಚ್ಚಿನದಾಗಿ ಪ್ರಸ್ತುತ ಆಡಳಿತದಲ್ಲಿರುವ ಕೇಂದ್ರ ಸರ್ಕಾರದ ಯೋಜನೆ, ರಫೆಲ್‌ ಹಗರಣ, ಸಾಲ ಮನ್ನಾ ತಾರತಮ್ಯ, ಪೆಟ್ರೋಲ್‌-ಡೀಸೆಲ್‌ ಏರಿಕೆ ಇತ್ಯಾದಿಗಳ ಕುರಿತು ಪ್ರಸ್ತಾಪಿಸಿದಾಗ ವಿದ್ಯಾರ್ಥಿಗಳು ಇದು ಒಂದು ಪಕ್ಷವನ್ನೇ ಗುರಿಯಾಗಿಸಿಕೊಂಡು ಮಾಡುತ್ತಿರುವ ಸಂವಾದವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಯುವಜನತೆ ಸರ್ಕಾರ ಜಾರಿಗೆ ತರುವ ಅಥವಾ ಹೊಸದಾಗಿ ರೂಪಿಸುವ ಯೋಜನೆಗಳನ್ನು ಪ್ರಶ್ನಿಸಬೇಕು. ಆ ಮೂಲಕ ಯೋಜನೆಯ ಸತ್ಯ ಸತ್ಯತೆಗಳನ್ನು ವಿಮರ್ಶೆ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸಂವಾದ ಕಾರ್ಯಕ್ರಮದ ಸಲಹೆಗಾರ ಕಾಂಗ್ರೆಸ್‌ನ ಚೇತನ್‌ ರೆಡ್ಡಿ ವಿದ್ಯಾರ್ಥಿಗಳಿಗೆ ಸಲಹೆನೀಡಿದರು.

ನೋಟು ಅಮಾನ್ಯಿಕರಣದಿಂದ ದೇಶದ ಸಣ್ಣ ಸಣ್ಣ ಉದ್ಯಮಗಳು ತಮ್ಮ ಅಸ್ತಿತ್ವ ಕಳೆದುಕೊಂಡಿವೆ. ಅನೇಕ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಸರ್ಕಾರ ರೂಪಿಸುವ ಆರ್ಥಿಕ ಯೋಜನೆ, ನೀತಿ ನಿರೂಪಣೆಗಳನ್ನು ಸುವ್ಯವಸ್ಥಿತವಾಗಿ ರೂಪಿಸಬೇಕು. ಅದು ದೇಶದ ಜನರ ಆರ್ಥಿಕ ಸದೃಢತೆಗೆ ಪೂರಕವಾಗಿರಬೇಕು. ಆ ಯೋಜನೆಗಳ ಬಗ್ಗೆ ನಾವು ಸತ್ಯಾ ಸತ್ಯತೆಗಳನ್ನು ವಿಮರ್ಶೆಗೆ ಒಳಪಡಿಸಬೇಕು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next