Advertisement
ಇಲ್ಲಿನ ಮಂಜುನಾಥ ಪೈ ಸಭಾಂಗಣದಲ್ಲಿ ಎ. 5ರಂದು ನಡೆದ ಕಾರ್ಕಳ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಬೂತ್ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿ, ಶಾಸಕನಾಗಿ, ಸಚಿವನಾಗಿ ಶ್ರೀನಿವಾಸ ಪೂಜಾರಿ ಏನು ಮಾಡಿದ್ದಾರೆ ಎಂದು ಪ್ರಶ್ನಿಸುವವರು ಪಂ. ಸದಸ್ಯರಿಗೆ ಗೌರವ ಧನ, ಹಿಂದುಳಿದ ವರ್ಗಗಳ ಹಾಸ್ಟೆಲ್ ವ್ಯವಸ್ಥೆ, ಮುಜರಾಯಿ ಖಾತೆ ಸಚಿವನಾಗಿದ್ದಾಗ 1500 ದೇವಸ್ಥಾನಗಳಿಗೆ ಅನುದಾನ ಬಿಡುಗಡೆ ಸಹಿತ ಹತ್ತಾರು ಯೋಜನೆಗಳನ್ನು ತಂದಿದ್ದನ್ನು ತನಿಖೆ ನಡೆಸಿ, ಖಚಿತ ಪಡಿಸಿಕೊಳ್ಳಲಿ ಎಂದರು.
ರಾಜ್ಯ ಬಿಜೆಪಿ ಪ್ರ. ಕಾರ್ಯದರ್ಶಿ ವಿ. ಸುನಿಲ್ ಕುಮಾರ್ ಮಾತನಾಡಿ, ಆರ್ಥಿಕತೆಯಲ್ಲಿ ದಿವಾಳಿಯಾದ ಮೊದಲ ದೇಶ ಶ್ರೀಲಂಕಾ. ದೇಶದಲ್ಲಿ ಕೇರಳ ರಾಜ್ಯ ದಿವಾಳಿತನ ಕಡೆ ಸಾಗುವ ಮೊದಲ ರಾಜ್ಯವಾದರೆ, ಎರಡನೇ ರಾಜ್ಯವಾಗುವತ್ತ ಕರ್ನಾಟಕ ಸಾಗುತ್ತಿದೆ ಎಂದರು. ಕೇಂದ್ರದ ಕಿಸಾನ್ ಸಮ್ಮಾನ್‌ಯೋಜನೆಯಲ್ಲಿ ಕೇಂದ್ರ 6 ಸಾವಿರ ರೂ. ರಾಜ್ಯ 4 ಸಾವಿರ ರೂ. ನೀಡುತಿತ್ತು. ಇದೀಗ ರಾಜ್ಯ ತನ್ನ ಪಾಲನ್ನು ನಿಲ್ಲಿಸಿದೆ. ಭಾಗ್ಯಲಕ್ಷ್ಮೀ ಯೋಜನೆ ಹಣ ಸರಿಯಾಗಿ ಪಾವತಿಯಾಗುತಿಲ್ಲ. ಹಾಸ್ಟೆಲ್‌ನಲ್ಲಿ ಸೀಟ್ ಸಿಗದ ಬಡ ಮಕ್ಕಳಿಗೆ ವಿದ್ಯಾಸಿರಿಯಲ್ಲಿ ನೀಡಲಾಗುತ್ತಿದ್ದ 1,500 ರೂ.ಗಳನ್ನು ನಿಲ್ಲಿಸಲಾಗಿದೆ. ಕಂದಾಯ ಇಲಾಖೆಯಲ್ಲಿ ಜನನ-ಮರಣ ಪ್ರಮಾಣ ಪತ್ರಕ್ಕೆ ಇದ್ದ 2 ರೂ. ಈಗ 100ಕ್ಕೇರಿದೆ. ನೋಂದಣಿ ಶುಲ್ಕ 5 ರೂ. ಇದ್ದದ್ದು 200 ರೂ. ಆಗಿದೆ. ದತ್ತು ಬೀಡ್ 500 ರೂ. ಇದ್ದದ್ದು 1 ಸಾವಿರ ರೂ. ಆಗಿದೆ. ಪ್ರಮಾಣ ಪತ್ರ ಪಡೆಯಲು 20 ರೂ. ಇದ್ದ ಶುಲ್ಕ 100 ರೂ. ಆಗಿದೆ. ಪವಾರ್ ಆಪ್ ಅಟಾರ್ನಿ 100 ರೂ. ಇದ್ದಿರುವುದು 500 ರೂ. ಆಗಿದೆ. ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳನ್ನು ಎಂದೂ ನಾವು ವಿರೋಧಿಸಲಿಲ್ಲ. ಇತರ ಯೋಜನೆ, ಸೌಕರ್ಯಗಳನ್ನು ನಿರ್ಲಕ್ಷಿಸಬಾರದು ಎಂದರು.