Advertisement

2014ರ ಮೋದಿ ಅಲೆ 2019ರಲ್ಲಿ ಸುನಾಮಿ ಆಯಿತು : ಮಹಾರಾಷ್ಟ್ರ ಸಿಎಂ ಫ‌ಡ್ನವೀಸ್‌

04:34 PM May 24, 2019 | Sathish malya |

ಮುಂಬಯಿ: 2014ರ ಲೋಕಸಭಾ ಚುನಾವಣೆಯಲ್ಲಿದ್ದ ಮೋದಿ ಅಲೆ 2019ರ ಲೋಕಸಭಾ ಚುನಾವಣೆಯಲ್ಲಿ ಸುನಾಮಿಯಾಗಿ ಪರಿವರ್ತನೆಗೊಂಡಿದೆ ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫ‌ಡ್ನವೀಸ್‌ ಹೇಳಿದ್ದಾರೆ.

Advertisement

ಕೇಂದ್ರದಲ್ಲಿ ಎನ್‌ಡಿಎ ಮೈತ್ರಿ ಕೂಟ ಅಧಿಕಾರಕ್ಕೆ ಮರಳುವ ಸಾಧ್ಯತೆಗಳು ಲೋಕಸಭಾ ಚುನಾವಣೆಗಳ ಟ್ರೆಂಡ್‌ನಿಂದ ಖಚಿತವಾಗುತ್ತಿದ್ದಂತೆಯೇ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, “ಪ್ರಧಾನಿ ಮೋದಿ ಸುನಾಮಿಯಿಂದಾಗಿ ಮಹಾರಾಷ್ಟ್ರದಲ್ಲಿ ನಾವು ಹೊಂದಿರುವ ಸೀಟುಗಳ ಸಂಖ್ಯೆ ಬಹುತೇಕ ಹಚ್ಚಾಗಬಹುದು ಮತ್ತು ಅದರಿಂದ ನಮ್ಮ ಹೊಣೆಗಾರಿಕೆಯೂ ಹೆಚ್ಚಾಗಲಿದೆ’ ಎಂದು ಹೇಳಿದರು.

ಬಿಜೆಪಿ 300ಕ್ಕೂ ಅಧಿಕ ಸೀಟುಗಳಲ್ಲಿ ಮುಂದಿದ್ದು ಅದರ ನಿಕಟ ಎದುರಾಳಿ ಕಾಂಗ್ರೆಸ್‌ ಪಕ್ಷ ಕೇವಲ 50 ಸ್ಥಾನಗಳಲ್ಲಿ ಮುಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next