Advertisement

ಫೆ.10ಕ್ಕೆ ಪ್ಯಾಲೆಸ್ತೀನ್‌ಗೆ ಮೋದಿ

08:41 AM Jan 19, 2018 | Team Udayavani |

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಫೆ.10ರಂದು ಪ್ಯಾಲೆಸ್ತೀನ್‌ ಪ್ರವಾಸ ಕೈಗೊಳ್ಳ ಲಿದ್ದಾರೆ. ಇದೇ ಮೊದಲ ಬಾರಿಗೆ ಭಾರತದ ಪ್ರಧಾನಿ ಆ ರಾಷ್ಟ್ರಕ್ಕೆ ಅಧಿಕೃತ ಭೇಟಿ ನೀಡಲಿದ್ದಾರೆ. ಎರಡು ರಾಷ್ಟ್ರಗಳು ಹೊಂದಿರುವ ಸಂಬಂಧ ಮತ್ತಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಈ ಪ್ರವಾಸ ಕೈಗೊಳ್ಳಲಾಗುತ್ತಿದೆ.

Advertisement

ಪ್ರಧಾನಿ ಜೋರ್ಡಾನ್‌ನ ಅಮ್ಮಾನ್‌ನಿಂದ ರಮಲ್ಲಾಗೆ ಭೇಟಿ ನೀಡಲಿದ್ದಾರೆ. ಇದೇ ಸ್ಥಳದಿಂದ ಅಮೆರಿಕ ಇಸ್ರೇಲ್‌ ರಾಜಧಾನಿ ಎಂದು ಘೋಷಣೆ ಮಾಡಿದ ಜೆರುಸಲೇಂ ಕೇವಲ ಎಂಟು ಕಿ.ಮೀ. ದೂರದಲ್ಲಿದೆ. ಕಳೆದ ಬಾರಿ ಇಸ್ರೇಲ್‌ಗೆ ಭೇಟಿ ನೀಡಿದ್ದಾಗ ಮೋದಿ ರಮಲ್ಲಾಗೆ ಭೇಟಿ ನೀಡದೆ ಇದ್ದುದು ಪ್ಯಾಲೆಸ್ತೀ ನ್‌ನಲ್ಲಿ ವ್ಯಾಪಕ ಅತೃಪ್ತಿಗೆ ಕಾರಣವಾಗಿತ್ತು. 

ಫೆ.11ರಂದು ದುಬೈಗೆ ಭೇಟಿ: ಇದೇ ವೇಳೆ ಫೆ.11ರಂದು ಮೋದಿ ಅವರು ದುಬೈಗೆ ಭೇಟಿ ನೀಡಲಿದ್ದು, ಅಲ್ಲಿ ವಿಶ್ವ ಸರಕಾರಿ ಮುಖ್ಯಸ್ಥರ ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next