Advertisement

Greece: ಮುಂದಿನ ವಾರ ಗ್ರೀಸ್‌ಗೆ ಮೋದಿ; 40 ವರ್ಷದ ಬಳಿಕ ಭಾರತದ ಪ್ರಧಾನಿ ಭೇಟಿ

10:19 PM Aug 18, 2023 | Team Udayavani |

ನವದೆಹಲಿ: ಬ್ರಿಕ್ಸ್‌ ಶೃಂಗಸಭೆಗೆಂದು ದಕ್ಷಿಣ ಆಫ್ರಿಕಾಗೆ ತೆರಳುತ್ತಿರುವ ಪ್ರಧಾನಿ ನರೇಂದ್ರ ಮೋದಿ, ಅದೇ ವೇಳೆ ಆ.25ರಂದು ಗ್ರೀಸ್‌ಗೂ ಭೇಟಿ ನೀಡಲಿದ್ದಾರೆ. ಭಾರತದಿಂದ 40 ವರ್ಷದ ಬಳಿಕ ಪ್ರಧಾನಿಯೊಬ್ಬರು ಗ್ರೀಸ್‌ಗೆ ಕೈಗೊಳ್ಳುತ್ತಿರುವ ಮೊದಲ ಭೇಟಿ ಇದಾಗಿರಲಿದ್ದು, ಕಾರ್ಯತಂತ್ರ ಪಾಲುದಾರಿಕೆ ಹೆಚ್ಚಿಸುವ ಉದ್ದೇಶವನ್ನು ಉಭಯ ನಾಯಕರು ಹೊಂದಿದ್ದಾರೆನ್ನಲಾಗಿದೆ.

Advertisement

ಗ್ರೀಸ್‌ ಪ್ರಧಾನಿ ಕಿರಿಯಾಕೋಸ್‌ ಮಿಟ್ಸೋಟಾಕಿಸ್‌ ಅವರೊಂದಿಗೆ ಮೋದಿ ಮಾತುಕತೆ ನಡೆಸಲಿದ್ದು, ವ್ಯಾಪಾರ, ಹೂಡಿಕೆ, ವಲಸೆ, ಸಾಂಸ್ಕೃತಿಕ ಸಂಬಂಧ ಹಾಗೂ ರಕ್ಷಣಾ ಸಹಕಾರ ಸೇರಿದಂತೆ ವಿವಿಧ ವಿಚಾರಗಳ ಬಗ್ಗೆ ಚರ್ಚಿಸಿಲಿದ್ದಾರೆ. ಈ ವೇಳೆ ಹಲವು ಒಪ್ಪಂದಗಳಿಗೂ ಉಭಯ ನಾಯಕರು ಸಹಿ ಹಾಕಬಹುದು ಎಂದು ನಿರೀಕ್ಷಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next