ದಾವಣಗೆರೆ: ಮಧ್ಯ ಕರ್ನಾಟಕದ ಕೇಂದ್ರ, ದೇವನಗರಿ ದಾವಣಗೆರೆಗೆ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ
ಆಗಮಿಸಲಿದ್ದಾರೆ. ಮೋದಿಯವರ ಭಾಷಣಕ್ಕೆ ವಾಣಿಜ್ಯ ನಗರಿಯ ಸರ್ಕಾರಿ ಹೈಸ್ಕೂಲ್ ಮೈದಾನದಲ್ಲಿ ವೇದಿಕೆ ಸಿದ್ಧಗೊಂಡಿದೆ.
ವಿಶೇಷವೆಂದರೆ 2 ವರ್ಷಕ್ಕೊಮ್ಮೆ ಆಚರಿಸಲ್ಪಡುವ ನಗರದ ದೇವತೆ ದುಗಾಂìಬಿಕೆ ಜಾತ್ರೆಯ ದಿನವೇ ಪ್ರಧಾನಿ ಆಗಮಿಸುತ್ತಿದ್ದಾರೆ.
ಮಾಜಿ ಮುಖ್ಯಮಂತ್ರಿ,ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪರ 75ನೇ ಜನ್ಮದಿನದ ಅಂಗವಾಗಿ ಹಮ್ಮಿಕೊಂಡಿರುವ ರೈತ ಬಂಧು ಸಮಾವೇಶಕ್ಕೆ ಹೈಸ್ಕೂಲ್ ಮೈದಾನ ಸಜ್ಜುಗೊಂಡಿದ್ದು, ಪ್ರಧಾನಿ ಮೋದಿ ಪಾಲ್ಗೊಳ್ಳಲಿದ್ದಾರೆ. ಇದು ರೈತ ಸಮಾವೇಶವಾಗಿರುವುದರಿಂದ ಸಹಜವಾಗಿಯೇ ರೈತರ ಕೃಷಿ ಸಾಲ ಮನ್ನಾ ಬಗ್ಗೆ ಪ್ರಧಾನಿಯವರು ಘೋಷಣೆ ಮಾಡುವರೇ ಎಂಬ ನಿರೀಕ್ಷೆ ಕಾಣಿಸಿಕೊಂಡಿದೆ.
ಯಡಿಯೂರಪ್ಪನವರ ಜನ್ಮದಿನದ ನಿಮಿತ್ತ ಹಮ್ಮಿಕೊಂಡಿರುವ ರೈತ ಸಮಾವೇಶದ ವೇದಿಕೆ ಕಾರ್ಯಕ್ರಮ ಆರಂಭವಾಗುವುದಕ್ಕೂ ಯಡಿಯೂರಪ್ಪ ಅವರು ಮಾಯಕೊಂಡ ಕ್ಷೇತ್ರ ವ್ಯಾಪ್ತಿಯ ಕೆರೆಯಾಗಲಹಳ್ಳಿಯ ರಂಗಸ್ವಾಮಿಯ ಮನೆಗೆ ಹೋಗಿ ರೈತ ಸಾಂತ್ವನ ಪತ್ರ ನೀಡಿ, ಕಾರ್ಯಕ್ರಮಕ್ಕೆ ಆಗಮಿಸುವರು.
ದೆಹಲಿಯಿಂದ ಹುಬ್ಬಳ್ಳಿಗೆ ಆಗಮಿಸುವ ಪ್ರಧಾನಿ ಮೋದಿ ಅಲ್ಲಿಂದ ಸಂಜೆ 4 ಗಂಟೆಗೆ ಹೆಲಿಕಾಪ್ಟರ್‌ನಲ್ಲಿ ಆಗಮಿಸಿ ಸಮಾವೇಶದಲ್ಲಿ
ಪಾಲ್ಗೊಳ್ಳುವರು.