Advertisement

ಮುಂದೆಯೂ ಮೋದಿ ಪ್ರಧಾನಿಯಾಗಲಿ: ಭೈರಪ್ಪ

06:00 AM Jun 23, 2018 | Team Udayavani |

ಮೈಸೂರು: ದೇಶದ ಹಿತಕ್ಕಾಗಿ ತುಡಿಯುವ ಮನಸ್ಸುಳ್ಳ ನರೇಂದ್ರ ಮೋದಿ 2019ರ ಚುನಾವಣೆ ಗೆಲ್ಲುವುದು ಮಾತ್ರ ವಲ್ಲ, ಇನ್ನೂ2-3 ಅವಧಿಗೆ ಅವರೇ ಪ್ರಧಾನಿಯಾಗಬೇಕು ಎಂದು ಕಾದಂಬರಿಕಾರ ಎಸ್‌.ಎಲ್‌.ಭೈರಪ್ಪ ಆಶಿಸಿದರು.

Advertisement

ಸಂಸದ ಪ್ರತಾಪ ಸಿಂಹ ಅವರು ಭೈರಪ್ಪ ನಿವಾಸಕ್ಕೆ ತೆರಳಿ, ಮುಂದಿನ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಕೈಗೊಂಡಿರುವ ಸಂಪರ್ಕ ಅಭಿಯಾನದ ಭಾಗವಾಗಿ ಕೇಂದ್ರ ಸರ್ಕಾರದ ನಾಲ್ಕು ವರ್ಷಗಳ ಸಾಧನೆಗಳ ಕುರಿತ ಕಿರುಹೊತ್ತಿಗೆ ನೀಡಿದರು.

ಈ ವೇಳೆ ಮಾತನಾಡಿದ ಭೈರಪ್ಪ, “ನಾನು ಹುಟ್ಟಿದ್ದು 1931ರಲ್ಲಿ. ದೇಶಕ್ಕೆ ಸ್ವಾತಂತ್ರ್ಯ ಬಂದಾಗ ನನಗೆ 16 ವರ್ಷ. ಹೀಗಾಗಿ ಸ್ವಾತಂತ್ರ್ಯ ಪೂರ್ವ ಹಾಗೂ ಸ್ವಾತಂತ್ರಾé  ನಂತರದ ಭಾರತದಲ್ಲಿ ರಾಜಕೀಯ ಹೇಗೆ ನಡೆಯುತ್ತಿದೆ ಎಂಬುದನ್ನು ಬಲ್ಲೆ. ಮೋದಿ ಅವರಷ್ಟೇ ಬುದ್ಧಿವಂತ ಪ್ರಧಾನಿಗಳು ಆಗಿರಬಹುದು. ಆದರೆ, ಮೋದಿಯಂತೆ
ದೇಶದ ಹಿತಕ್ಕಾಗಿ ದುಡಿಯುವ ಪ್ರಧಾನಿಯನ್ನು ನಾನು ಕಂಡಿಲ್ಲ’ ಎಂದರು.

ಚೀನಾಕ್ಕೆ ಭಯ: ಮೋದಿ ವಿಮಾನದಲ್ಲಿ ವಿದೇಶ ಸುತ್ತುತ್ತಾರೆಂದು ಟೀಕಾಕಾರರು ಆಡಿಕೊಳ್ಳುತ್ತಾರೆ. ಅವ ರೇನು ವಿದೇಶಗಳಿಗೆ ಡ್ಯಾನ್ಸ್‌ ಮಾಡಲು ಹೋಗುತ್ತಾರಾ? ಅಧಿಕಾರಕ್ಕೆ ಬಂದ 4 ವರ್ಷದಲ್ಲಿ ಎಷ್ಟೆಲ್ಲಾ ಕೆಲಸ
ಮಾಡಿದ್ದಾರೆ. ಚೀನಾ ಸುತ್ತಮುತ್ತಲಿನ ದೇಶಗಳ ಜತೆ ಸ್ನೇಹ ಬೆಳೆಸಿ, ಚೀನಾಕ್ಕೆ ಭಯ ಹುಟ್ಟಿಸಿರುವುದು, ಭಾರತದ ಬಗೆಗೆ ಜಗತ್ತಿನ ರಾಷ್ಟ್ರಗಳಿಗಿದ್ದ ಮನೋಭಾವವನ್ನೇ ಬದಲಾಯಿಸಿದ್ದಾರೆ. ಇದೇನು ಕಡಿಮೆ ಸಾಧನೆಯೇ
ಎಂದು ಪ್ರಶ್ನಿಸಿದರು.

ಯುಪಿಎ ಸರ್ಕಾರದಲ್ಲಿ 10 ವರ್ಷ ಪ್ರಧಾನಿಯಾಗಿದ್ದವರ ಶಕ್ತಿ ಏನಿತ್ತು? ಪ್ರತಿಯೊಂದಕ್ಕೂ ಮೇಡಂ ಕೇಳಿಕೊಂಡು ಬರಲು ಹೋಗುತ್ತಿದ್ದರು ಎಂದು ಲೇವಡಿ ಮಾಡಿದರು.

Advertisement

ಕಪ್ಪುಹಣ್ಣವನ್ನು ವಾಪಸ್‌ ತರಲು ಎಷ್ಟೆಲ್ಲಾ ತೊಂದರೆ ಇದೆ ಎಂಬುದು ಎಲ್ಲರಿಗೂ ಗೊತ್ತು.ಆದರೂ ಮೋದಿ ಆಡಿದ ಸಣ್ಣ
ವಾಕ್ಯವನ್ನೇ ಹಿಡಿದುಕೊಂಡು ಎಳೆದಾಡುತ್ತಿದ್ದಾರೆ. ಆದರೆ, ಮೋದಿ ವಿದೇಶಕ್ಕೆ ಕಪ್ಪುಹಣ ಹೋಗುವುದನ್ನು ತಡೆದಿದ್ದಾರೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು.
–  ಎಸ್‌.ಎಲ್‌.ಭೈರಪ್ಪ, ಖ್ಯಾತ ಸಾಹಿತಿ

Advertisement

Udayavani is now on Telegram. Click here to join our channel and stay updated with the latest news.

Next