Advertisement
ಕತಾರ್‌ನಲ್ಲಿ ಮರಣದಂಡನೆಗೆ ಗುರಿಯಾಗಿದ್ದ ಭಾರತೀಯ ನೌಕಾಪಡೆಯ 8 ಯೋಧರನ್ನು ಬಿಡುಗಡೆಗೊಳಿಸಿದ ಬಳಿಕ ಆ ರಾಷ್ಟ್ರಕ್ಕೆ ಪ್ರಧಾನಿ ಮೋದಿ ಅವರ ಮೊದಲನೇ ಭೇಟಿ ಇದಾಗಿದ್ದು, ಯೋಧರ ಬಿಡುಗಡೆ ಬಗ್ಗೆ ಪ್ರಧಾನಿ ಸಂತಸ ವ್ಯಕ್ತಪಡಿಸಿ ತಮೀಮ್ ಅವರಿಗೆ ಭಾರತದ ಪರವಾಗಿ ಧನ್ಯವಾದಗಳನ್ನೂ ಅರ್ಪಿಸಿದ್ದಾರೆ. ಅಲ್ಲದೇ, ಕತಾರ್‌ನಲ್ಲಿರುವ ಭಾರತೀಯರ ಕ್ಷೇಮಾಭಿವೃದ್ಧಿಗಾಗಿ ಅಲ್ಲಿನ ಸರಕಾರ ವಹಿಸುತ್ತಿರುವ ಕಾಳಜಿಯನ್ನೂ ಪ್ರಶಂಸಿಸಿದ್ದಾರೆ.
ಯುಇಎಯಲ್ಲಿ ಪ್ರಧಾನಿ ಮೋದಿ ಉದ್ಘಾಟಿಸಿದ ಹಿಂದೂ ದೇವಾಲಯಕ್ಕೆ ಬ್ರಿಟನ್, ಅಮೆರಿಕ, ಆಸ್ಟ್ರೇಲಿಯಾ ಸೇರಿದಂತೆ ವಿಶ್ವಾದ್ಯಂತ ಇರುವಂಥ ಅನೇಕ ಅನಿವಾಸಿ ಭಾರತೀಯರು ಸ್ವಯಂಸೇವಕರಾಗಿ ಸೇವೆ ಸಲ್ಲಿಸಿದ್ದಾರೆ. ಆಸ್ಟ್ರೇಲಿಯಾದ ಸಿಡ್ನಿ ನಿವಾಸಿ, ಗರ್ಭಿಣಿ ಟೆಕಿ ಶೀನಾ ಪಟೇಲ್ ದೇಗುಲ ನಿರ್ಮಾಣದ ವಿಚಾರ ತಿಳಿದು 4 ವಾರ ಸೇವೆ ಸಲ್ಲಿಸಲೆಂದು ಯುಎಇಗೆ ಬಂದವರು ಇಲ್ಲಿಯೇ ಮಗುವಿಗೆ ಜನ್ಮ ನೀಡಿ, ದೇಗುಲ ಉದ್ಘಾಟನೆ ಕಣ್ತುಂಬಿಕೊಂಡಿದ್ದಾರೆ. ಶಿಕ್ಷಕರಾದ ಉಮೇಶ್ ರಾಜ್ ಬ್ರಿಟನ್‌ನಿಂದ ಮತ್ತು ಅಮೆರಿಕದಿಂದ ಭಾರತೀಯ ದಂಪತಿ ಗಳು ಸೇವೆಗೆಂದು ಬಂದವರು ಅಲ್ಲೇ ನೆಲೆಸಿರುವುದಾಗಿ ಹೇಳಿಕೊಂಡಿದ್ದಾರೆ.