Advertisement
ಗೋಕಾಕದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ನನ್ನ ಮಗ ಮೃತಪಟ್ಟಾಗ ಯಾರೂ ನನ್ನನ್ನು ಸಂಪರ್ಕ ಮಾಡಿಯೇ ಇಲ್ಲ. ನಾನು ನರೇಂದ್ರ ಮೋದಿ ಸೇರಿದಂತೆ ಕೇಂದ್ರದ ಯಾರ ಜತೆಗೂ ಮಾತನಾಡಿಲ್ಲ. ಕುಮಾರಸ್ವಾಮಿ ಮಾಡಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ. ನನ್ನ ಮಗನು ವಿದೇಶದಲ್ಲಿ ಸತ್ತ. ಇಲ್ಲಿಗೆ ಮೃತದೇಹ ತಂದು ಅಂತ್ಯಕ್ರಿಯೆ ಮಾಡಿದ್ದೇನೆ. ಈ ಸಂದರ್ಭದಲ್ಲಿ ಮೋದಿ ಅವರನ್ನಾಗಲೀ ಅಥವಾ ಬೇರೆ ಯಾರನ್ನಾಗಲೀ ಸಂಪರ್ಕಿಸುವ ಪ್ರಮೇಯವೇ ಬರಲಿಲ್ಲ. ಇವರೆಲ್ಲ ಸುಳ್ಳು ಹೇಳುತ್ತಿದ್ದಾರೆ.
Advertisement
CM Siddaramaiah ನನ್ನ ಮಗ ಮೃತಪಟ್ಟಾಗ ಮೋದಿ,ಸುಷ್ಮಾ ಸಹಾಯ ಮಾಡಿಲ್ಲ
10:02 PM Apr 30, 2024 | Team Udayavani |